Advertisement

ದಿಡ್ಡಳ್ಳಿ ಆದಿವಾಸಿಗಳ ಮನೆ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಬಂಧನ

11:45 AM Apr 12, 2017 | Team Udayavani |

ಮಡಿಕೇರಿ: ನೆಲೆಗಾಗಿ ಬೆತ್ತಲೆ ಪ್ರತಿಭಟನೆ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕೊಡಗಿನ  ದಿಡ್ಡಳ್ಳಿ ಆದಿವಾಸಿಗಳ ನಿವಾಸಗಳ ಮೇಲೆ ಅಪರಿಚಿತ ವ್ಯಕ್ತಿಗಳು ಸೋಮವಾರ ರಾತ್ರಿ ಗುಂಡಿನ ದಾಳಿ ನಡೆಸಿ ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಸೋಮವಾರ ತಡರಾತ್ರಿ ದಿಡ್ಡಳ್ಳಿ ಆದಿವಾಸಿಗಳ ನಿವಾಸಗಳ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಸ್ಥಳದಲ್ಲಿ ಸಜೀವ ಗುಂಡು, 5 ವಿವಾದಾತ್ಮಕ ಕೈ ಬರಹಗಳ ಪತ್ರ ದೊರಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದವು.

ಬಂದೂಕು ದುರ್ಬಳಕೆ ಆರೋಪದಡಿ ಕೊಡಗಿನ ಸಿದ್ಧಾಪುರ ಠಾಣಾ ಪೊಲೀಸರು ಇದು ನಕ್ಸಲೀಯರ ಕೃತ್ಯ ಇರಬೇಕೆಂದು ಶಂಕಿಸಿದ್ದು, ಸ್ವಯಂಪ್ರೇರಿತವಾಗಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 3 ಹಾಗೂ 25 ಎ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ದಿಡ್ಡಳ್ಳಿ ಆದಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ನೀಡಲು ಸರ್ಕಾರ ನಿರ್ಧರಿಸಿರುವುದಾಗಿ ಮಂಗಳವಾರ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದರು.

ಆರೋಪಿ ಬಂಧನ:

Advertisement

ದಿಡ್ಡಳ್ಳಿಯ ಆದಿವಾಸಿಗಳ ಮನೆಗಳ ಮೇಲೆ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಕುಡಿದ ಆಮಲಿನಲ್ಲಿ ದಿಡ್ಡಳ್ಳಿ ನಿವಾಸಿಗಳು ಹಣ ಪಡೆದು ಕಾಫಿ ತೋಟದ ಕೆಲಸಕ್ಕೆ ಬರಲಿಲ್ಲ ಎಂಬ ಆಕ್ರೋಶದಿಂದ ಪೂಣಚ್ಚ ಎಂಬಾತ ಗುಂಡು ಹಾರಿಸಿದ್ದ, ಬಳಿಕ ಪ್ರಕರಣ ತಿರುಚಲು ವಿವಾದಾತ್ಮಕ ಬರಹಗಳುಳ್ಳ ಚೀಟಿಯನ್ನು ಎಸೆದಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಪೂಣಚ್ಚನಿಂದ ಬಂದೂಕು, ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next