Advertisement
ಕೊಚ್ಚಿನ್ ಶಿಪ್ ರಿಪೇರಿ ಯಾರ್ಡ್‌ನಿಂದ ದುರಸ್ತಿಯಾದ ಬಳಿಕ ಇದೇ ಮೊದಲ ಬಾರಿಗೆ ವಿಕ್ರಮಾದಿತ್ಯ ನೌಕೆಯನ್ನು ಕಾರವಾರದ ಐಎನ್‌ಎಸ್ ಕದಂಬ ನೌಕಾಬೇಸ್‌ನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.
Related Articles
Advertisement
ವಿಕ್ರಮಾದಿತ್ಯ ಯುದ್ದ ನೌಕೆ ಮೂಲತಃ ರಷ್ಯಾ ದೇಶದ್ದಾಗಿದ್ದು 1981ರಲ್ಲಿ ತನ್ನ ಸೇವೆ ಪ್ರಾರಂಭಿಸಿದೆ. ರಷ್ಯಾದಿಂದ ಭಾರತಕ್ಕೆ ವಿಕ್ರಮಾದಿತ್ಯ ಯುದ್ಧ ನೌಕೆಯನ್ನು 62ಸಾವಿರ ಕೋಟಿಗೆ ಖರೀದಿಸಿದ್ದು, 2013ರಿಂದ ಭಾರತೀಯ ಸೇನೆಯಲ್ಲಿ ಯುದ್ಧ ನೌಕೆ ತನ್ನ ಸೇವೆ ಪ್ರಾರಂಭಿಸಿದೆ.
ನೌಕೆ ಸುಮಾರು 273 ಮೀ. ಉದ್ದ ಹಾಗೂ 60 ಮೀ. ಅಗಲ ಇದ್ದು 1500 ಸಿಬ್ಬಂದಿ ಹಾಗೂ 110 ಅಧಿಕಾರಿಗಳು ನೌಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಾರವಾರ, ಗೋವಾ, ವಿಶಾಖಪಟ್ಟಣ, ಮುಂಬೈ ಹಾಗೂ ಕೊಚ್ಚಿ ನೌಕಾನೆಲೆಯಲ್ಲಿ ವಿಕ್ರಮಾದಿತ್ಯ ನೌಕೆ ತಿರುಗಾಟ ನಡೆಸುತ್ತದೆ.
ಯುದ್ಧ ನೌಕೆಯಲ್ಲಿ 4 ಹೆಲಿಕ್ಯಾಪ್ಟರ್ ಏಕಕಾಲಕ್ಕೆ ಇಳಿಸುವ, ಜೊತೆಗೆ 16 ಮಿಗ್ ವಿಮಾನಗಳು, 29 ವಿಮಾನದ ಬೇಸ್ ನೌಕೆಯಲ್ಲಿದ್ದು ನೌಕೆಯ ಮೇಲಿಂದಲೇ ವಿಮಾನ ಸಹ ಹಾರಾಡುವ ರನ್‌ವೇ ನಿರ್ಮಿಸಲಾಗಿದೆ.
ಯುದ್ಧ ನೌಕೆಯ ವಿಶೇಷತೆ• ವಿಕ್ರಮಾದಿತ್ಯ ನೌಕೆಯು 44,500 ಟನ್ ತೂಕ ಇದ್ದು, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯವನ್ನು ಇದು ಹೊಂದಿದೆ. • ನೌಕೆಯಲ್ಲಿ 1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಮ್ಮೆ ಇಂಧನ ಭರ್ತಿಯಾದರೆ 13,000 ಕಿ.ಮೀ. ದೂರವನ್ನು ಇದು ಕ್ರಮಿಸುತ್ತದೆ. 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಇದು ಸೇರಿದೆ. • ಜ.26 ರಂದು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಭಾರತ್ ಪರ್ವ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ದೇಶದ ಸೇನೆ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನೌಕಾದಳದ ಬಗ್ಗೆ ಸಹ ಮಾಹಿತಿ ನೀಡುವ ಸಲುವಾಗಿ ಯುದ್ಧ ನೌಕೆಯನ್ನ ಸಾರ್ವಜನಿಕರಿಗೆ ನೋಡುವ ಅವಕಾಶ ಮಾಡಿಕೊಡಲಾಗಿತ್ತು. ಅದರಲ್ಲೂ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧ ನೌಕೆ ದೇಶದ ಅತಿದೊಡ್ಡ ನೌಕೆಯಾಗಿದೆ.