Advertisement
ಕುಂದಾಪುರ: ತಾಲೂಕಿನ ಒಟ್ಟೂ ಚಿತ್ರಣ ಈಗಾಗಲೇ ಹೇಳಿದಂತೆ ನಗರ, ಗ್ರಾಮೀಣ ಹಾಗೂ ಅರೆ ಗ್ರಾಮೀಣ. ಹಾಗಾಗಿ ಶಿಕ್ಷಣದ ಮಹತ್ವ ಇಲ್ಲಿ ಉಳಿದೆಲ್ಲದಕ್ಕಿಂತ ಮಹತ್ವದ್ದು. ಹಾಗೆಯೇ ಶೈಕ್ಷಣಿಕ ಸ್ಥಿತಿಗತಿಯೂ ಕೊಂಚ ವಿಭಿನ್ನ. ಉಡುಪಿ ಜಿಲ್ಲೆ ಸಾಕ್ಷರತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆದರೆ ಜಿಲ್ಲೆಗೆ ಹೋಲಿಸಿದರೆ ಕುಂದಾಪುರ ತಾಲೂಕಿನ ಸಾಕ್ಷರತೆಯ ಪ್ರಮಾಣ ಇನ್ನಷ್ಟು ಏರಬೇಕಿದೆ. ಇದು ಬರೀ ಹಂಬಲವಷ್ಟೇ ಅಲ್ಲ ; ಗುರಿಯಾಗುವ ಹೊತ್ತಿದು. ಪ್ರಸ್ತುತ ತಾಲೂಕಿನಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಎಂಕಾಂ ಹೊರತುಪಡಿಸಿದರೆ ಬೇರೆ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾಲೇಜುಗಳು, ಕೋರ್ಸ್ ಗಳು ಲಭ್ಯವಾಗಬೇಕಿದೆ.
Related Articles
ಕುಂದಾಪುರದ 22 ಕಿರಿಯ ಪ್ರಾ. ಶಾಲೆಗಳು, 28 ಹಿ.ಪ್ರಾ. ಶಾಲೆಗಳಲ್ಲಿ ಅಡುಗೆ ಕೋಣೆ, ಹಲವು ಶಾಲೆಗಳಲ್ಲಿ ಆಟದ ಮೈದಾನ, ಆವರಣ ಗೋಡೆ, ವಿದ್ಯುತ್ ಸೌಕರ್ಯ, ಗ್ರಂಥಾಲಯ, ಸ್ವಂತ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಶೇ. 90 ರಷ್ಟು ಶಿಕ್ಷಕರಿದ್ದಾರೆ. ಹಿರಿಯ ಪ್ರಾಥಮಿಕ 15 ಹಾಗೂ ಪ್ರೌಢಶಾಲೆಗಳಿಗೆ 3 ಮುಖ್ಯ ಶಿಕ್ಷಕರು ಬೇಕಾಗಿದ್ದಾರೆ. ಶೌಚಾಲಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಾದರೆ ಅನುಕೂಲ.
Advertisement
ಜಿಲ್ಲೆಯಲ್ಲಿ 3 ವೈದ್ಯಕೀಯ ಕಾಲೇಜು ಗಳಿದ್ದರೂ ಕುಂದಾಪುರದಲ್ಲಿಲ್ಲವೆಂಬ ಕೊರಗಿದೆ. ಕೋಟೇಶ್ವರ ಹಾಗೂ ಶಂಕರನಾರಾಯಣದಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಕುಂದಾಪುರದ ಎಂಐಟಿ ಎಂಜಿನಿಯರಿಂಗ್ ಹಾಗೂ ಕಾಮತ್ ಇನ್‌ಸ್ಟಿÕಟ್ಯೂಟ್ ಡಿಪ್ಲೊಮಾ ಕಾಲೇಜುಗಳಿವೆ.
ಕೋರ್ಸ್‌ಗಳ ಆಯ್ಕೆ ಬೇಕು”ತಾಲೂಕಿನಲ್ಲಿರುವ ಎರಡು ಸರಕಾರಿ ಪದವಿ ಕಾಲೇಜುಗಳಲ್ಲಿ ಎಂಕಾಂ ಬಿಟ್ಟರೆ ಬೇರೆ ಕೋರ್ಸ್‌ಗಳಿಲ್ಲ. ಎಂಸ್ಸಿ, ಎಂಎ, ಎಂಎಸ್‌ಡಬ್ಲೂÂ ಕೋರ್ಸ್‌ಗಳಿಗಾಗಿ ಸಿದ್ದಾಪುರ, ಶಂಕರನಾರಾಯಣ ಭಾಗದ ಸುಮಾರು 19 ವಿದ್ಯಾರ್ಥಿಗಳು ಬಾಕೂìರು ಕಾಲೇಜಿಗೆ ಹೋಗುತ್ತಾರೆ. ಶಂಕರನಾರಾಯಣದ ಪದವಿ ಕಾಲೇಜಿನಲ್ಲಿ ಬಿಸಿಎ, ಬಿಎಸ್ಸಿ ಕೋರ್ಸ್‌ಗಳಿಲ್ಲ. ಅನೇಕ ವಿದ್ಯಾರ್ಥಿಗಳು ಕುಂದಾಪುರ ಅಥವಾ ಉಡುಪಿಗೆ ತೆರಳುತ್ತಿದ್ದಾರೆ. ಎರಡೂ ಸರಕಾರಿ ಪದವಿ ಕಾಲೇಜುಗಳಲ್ಲೂ ಕಟ್ಟಡ, ತರಗತಿ ಕೋಣೆ, ಉಪನ್ಯಾಸಕರು ಬೇಕು.ವಿಶಾಲವಾದ ಮೈದಾನ ಮತ್ತು ಪ್ರತ್ಯೇಕ ಗ್ರಂಥಾಲಯಗಳದ ಬೇಡಿಕೆಯೂ ಇದೆ. ಆಗಬೇಕಾದದ್ದಿವು
ಕುಂದಾಪುರದಲ್ಲೂ ಸರಕಾರಿ ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಆರಂಭವಾದರೆ ಹಲವರು ಪರವೂರಿಗೆ ತೆರಳುವುದು ತಪ್ಪುತ್ತದೆ. ಐಟಿಐ ಕಾಲೇಜು ಕುಂದಾಪುರದಿಂದ 20 ಕಿ.ಮೀ. ದೂರದ ಬಿದ್ಕಲ್‌ಕಟ್ಟೆಯಲ್ಲಿ ಮಾತ್ರವಿದೆ. ಕುಂದಾಪುರ ಪರಿಸರದಲ್ಲೊಂದು ಐಟಿಐ ಕಾಲೇಜು ನಿರ್ಮಾಣವಾಗಬೇಕಿದೆ. ಪದವಿ, ಪ.ಪೂ. ಸರಕಾರಿ, ಖಾಸಗಿ ಕಾಲೇಜುಗಳು
– ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು
– ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು
– ಭಂಡಾರ್‌ಕಾರ್ ಕಾಲೇಜು
– ಡಾ| ಬಿ.ಬಿ. ಹೆಗ್ಡೆ ಕಾಲೇಜು
– ಬಸೂÅರು ಶಾರದಾ ಕಾಲೇಜು ಪದವಿಪೂರ್ವ ಕಾಲೇಜುಗಳು
– ಕೋಟೇಶ್ವರ ಪ.ಪೂ.
– ತೆಕ್ಕಟ್ಟೆ ಪ.ಪೂ.
– ಕುಂದಾಪುರ ಪ.ಪೂ.
– ಬಿದ್ಕಲ್‌ಕಟ್ಟೆ ಪ.ಪೂ.
– ಶಂಕರನಾರಾಯಣ ಪ.ಪೂ.
– ಹೊಸಂಗಡಿ ಪ.ಪೂ.
– ಹಾಲಾಡಿ ಪ.ಪೂ.
– ಭಂಡಾರ್‌ಕಾರ್
– ಆರ್. ಎನ್. ಶೆಟ್ಟಿ
– ಬ್ಯಾರೀಸ್ ಕೋಡಿ
– ಸಂತ ಮೇರಿ ಪ.ಪೂ.
– ಬಸೂÅರು ಶಾರದಾ
– ಮದರ್ ತೆರೆಸಾ ಶಂಕರನಾರಾಯಣ
– ವೆಂಕಟರಮಣ ಕುಂದಾಪುರ
– ಗುರುಕುಲ ಕೋಟೇಶ್ವರ
– ಎಕ್ಸಲೆಂಟ್ ಕೋಟೇಶ್ವರ ಪ್ರಗತಿಗೆ ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259 ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ. – ಪ್ರಶಾಂತ್ ಪಾದೆ