ಜೇವರ್ಗಿ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ರಾಷ್ಟ್ರೀಯ ಹೆದ್ದಾರಿ-218ರ ಮೇಲೆ ನೀರಿನ ಟ್ಯಾಂಕ್ (ವಾಲ್Ì) ತೆರೆದೆ ಇದ್ದು, ವಾಹನ ಸವಾರರು, ಪದಾಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ತಾಲೂಕಿನ ಕಟ್ಟಿಸಂಗಾವಿ ಹತ್ತಿರದ ಭೀಮಾನದಿಯಿಂದ ಪಟ್ಟಣಕ್ಕೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ಪಾದಾಚಾರಿ ಮಾರ್ಗದ ಪಕ್ಕದಲ್ಲಿಯೇ ಚಿಕ್ಕ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಅದರಲ್ಲಿ ವಾಲ್Ì ಸಹ ಅಳವಡಿಸಲಾಗಿದೆ. ಇದರ ಮೂಲಕವೇ ಪಟ್ಟಣದ ಟ್ಯಾಂಕ್ ಗಳಿಗೆ ನೀರು ಪೂರೈಸಲಾಗುತ್ತದೆ. ಆದರೆ ತೆರೆದ ಟ್ಯಾಂಕ್ ಬಹುತೇಕರಿಗೆ ಗೊತ್ತೆ ಆಗುವುದಿಲ್ಲ.
ಹಾಗಾಗಿ ಅಪಾಯ ತಪ್ಪಿದಲ್ಲ. ಸಾರ್ವಜನಿಕ ಆಸ್ಪತ್ರೆ ಮುಂಭಾಗವೇ ಇಂತಹ ನೀರಿನ ಟ್ಯಾಂಕ್ ನಿರ್ಮಿಸಿದ್ದು ಅಪಾಯ ಎಳೆದುಕೊಂಡಂತಾಗಿದೆ. ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಆಂಬ್ಯುಲೆನ್ಸ್ ತೆರಳಲು ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಆಸ್ಪತ್ರೆ ಕಾಂಪೌಂಡ್ ಹತ್ತಿರ ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ನಿತ್ಯ ಕಾರ್‌ಗಳನ್ನು ತೊಳೆಯಲು ಮತ್ತು ಹೋಟೆಲ್ ಹಾಗೂ ಬಂಡಿ ವ್ಯಾಪಾರಿಗಳು ಕುಡಿಯಲು ಇದೇ ನೀರನ್ನೆ ಬಳಸುತ್ತಿದ್ದಾರೆ. ಈ ನೀರು ಎಷ್ಟರ ಮಟ್ಟಿಗೆ ಕುಡಿಯಲು ಯೋಗ್ಯವಾಗಿವೆ ಎಂಬುದು ಸಾರ್ವಜನಿಕರ ಪ್ರಶ್ನೆ. ಈ ಬಗ್ಗೆ ಪುರಸಭೆಯಾಗಲಿ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಗಮನಹರಿಸ ದಿರುವುದರಿಂದ ಸಮಸ್ಯೆಯಾಗಿ ಕಾಡುತ್ತಿದೆ.
ಸದಾ ಜನನೀಬೀಡ ಪ್ರದೇಶವಾಗಿರುವ ಈ ಸ್ಥಳದಲ್ಲಿ ಇಂತಹ ತಗ್ಗು ಬಿದ್ದರೂ ಮುಚ್ಚುವ ಗೋಜಿಗೆ ಹೋಗದ ಅಧಿಕಾರಿಗಳ ನಿರ್ಲಕ್ಷéಕ್ಕೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಈ ತಗ್ಗಿನಲ್ಲಿ ಕೂಡ ಚರಂಡಿ ಹಾಗೂ ರಸ್ತೆ ಮೇಲಿರುವ ನೀರು ಸೇರಿ ಕಲುಷಿತಗೊಳ್ಳುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
* ವಿಜಯಕುಮಾರ ಎಸ್.ಕಲ್ಲಾ