Advertisement
ಇಂಗ್ಲಿಷ್‌ನಲ್ಲಿ “ಕೋಲ್ಡ್ ಶೋಲ್ಡರ್’ ಎಂದರೆ ಕಡೆಗಣಿಸುವುದು ಎಂದರ್ಥ. ಆದರೆ, ಫ್ಯಾಷನ್ ಲೋಕದಲ್ಲಿ ಅದಕ್ಕೆ ಬೇರೆಯೇ ಅರ್ಥವಿದೆ. ಕೋಲ್ಡ… ಶೋಲ್ಡರ್ ಎಂಬ ಈ ವಿನ್ಯಾಸ ಫ್ಯಾಷನ್ ಪ್ರಿಯರ ಹಾಟ್ ಫೇವರಿಟ್. ಇಂಥ ಟ್ರೆಂಡಿ ಬಟ್ಟೆ ತೊಟ್ಟ ಹುಡುಗಿಯನ್ನು ಯಾರು ತಾನೇ ಕಡೆಗಣಿಸುತ್ತಾರೆ?
ಕೋಲ್ಡ್ ಶೋಲ್ಡರ್ ವಿನ್ಯಾಸವೆಂದರೆ, ಉಡುಪಿನ ತೋಳುಗಳಲ್ಲಿ ಭುಜ ಕಾಣಿಸುವಂಥ ರಚನೆ. ಇದರಲ್ಲೂ ಬರೀ ಒಂದೇ ತೋಳಿನ ಭುಜ ಅಥವಾ ಎರಡೂ ಭುಜಗಳೂ ಕಾಣಿಸುವಂಥ ವಿನ್ಯಾಸಗಳಿವೆ. ವರ್ಷಗಳು ಕಳೆದರೂ ಮಹಿಳೆಯಲ್ಲಿ ವಯಸ್ಸು ಕಾಣದಿರುವ ಅಂಗ ಎಂದರೆ ಭುಜಗಳಂತೆ! ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಈ ಸುದ್ದಿಯ ಸದುಪಯೋಗ ಪಡೆದುಕೊಂಡಿರುವ ವಸ್ತ್ರ ವಿನ್ಯಾಸಕರು ಭುಜಗಳನ್ನು ಶೋ ಆಫ್ ಮಾಡುವಂಥ ಉಡುಪುಗಳನ್ನು ಸಿದ್ಧಪಡಿಸಿದ್ದಾರೆ. ಮಾರುಕಟ್ಟೆಯಲ್ಲೂ ಈ ವಿನ್ಯಾಸ ಸುದ್ದಿ ಮಾಡುತ್ತಿದೆ. ಎಲ್ಲರಿಗೂ, ಎಲ್ಲೆಡೆಯೂ…
80ರ ದಶಕದ ಈ ಟ್ರೆಂಡ್ ಮತ್ತೂಮ್ಮೆ ಚಾಲ್ತಿಗೆ ಬಂದಿದೆ. ದಪ್ಪಗೆ ಇರುವವರಿಗೂ ಇದು ಚೆನ್ನಾಗಿ ಒಪ್ಪುತ್ತದೆ. ಕ್ಯಾಶುಯಲ…, ಆಫೀಸ್‌ವೇರ್, ಪಾರ್ಟಿವೇರ್, ಫಾರ್ಮಲ…, ಜಿಮ… ವೇರ್, ಈಜುಡುಪು, ಟ್ರಡಿಷನಲ್… ಹೀಗೆ ಎಲ್ಲ ರೀತಿಯ ಉಡುಗೆಯಲ್ಲೂ ಈ ವಿನ್ಯಾಸದ ಪ್ರಯೋಗ ಮಾಡಬಹುದು.
Related Articles
ಈ ವಿನ್ಯಾಸ ಕೇವಲ ವೆಸ್ಟರ್ನ್ ವೇರ್‌ಗೆ ಸೀಮಿತವಾಗದೆ ಸಲ್ವಾರ್ ಕಮೀಜ್, ಚೂಡಿದಾರ್, ಅನಾರ್ಕಲಿ, ಲೆಹೆಂಗಾ ಚೋಲಿ (ಲಂಗ – ರವಿಕೆ), ಸೀರೆಯ ರವಿಕೆ, ಕುರ್ತಿ ಮುಂತಾದ ಇಂಡಿಯನ್ ಸ್ಟೈಲ…ಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಕೋಲ್ಡ… ಶೋಲ್ಡರ್ ಡ್ರೆಸ್ ಅನ್ನು ಪವರ್ ಡ್ರೆಸ್ಸಿಂಗ್‌ನಲ್ಲೂ ಸೇರಿಸಿರುವ ಕಾರಣ, ಇದನ್ನು ಆಫೀಸ್‌ಗೂ ಧರಿಸಬಹುದು.
Advertisement
ಧರಿಸೋದು ಹೇಗೆ? ಬಿಳಿ ಬಣ್ಣದ ಕೋಲ್ಡ್ ಶೋಲ್ಡರ್ ಶರ್ಟ್ ಜೊತೆ ಏ- ಲೈನ್ ಸ್ಕರ್ಟ್ ಅಥವಾ ಜೀನ್ಸ್ ಪ್ಯಾಂಟ್ ತೊಡಬಹುದು. ಇಲ್ಲವೇ ಸಾಲಿಡ್ ಕಲರ್‌ನ (ಗಾಢ ಬಣ್ಣದ) ಕೋಲ್ಡ… ಶೋಲ್ಡರ್ ಟಾಪ್ ಜೊತೆ ಫ್ಲೋ ಇಂಡಿಯನ್ ಅಥವಾ ಅನಿಮಲ… ಪ್ರಿಂಟ್ ಇರುವ ಲೆಗಿಂಗ್ಸ್ ತೊಡಬಹುದು. ಕೋಲ್ಡ… ಶೋಲ್ಡರ್ ವಿನ್ಯಾಸದ ಜಾಕೆಟ… ಅಥವಾ ಹೂಡೀ ಜೊತೆ ಶಾರ್ಟ್ಸ್ ತೊಡಬಹುದು. ನಿಮ್ ಡ್ರೆಸ್, ನಿಮ್ಮಿಷ್ಟ!
ಈ ವಿನ್ಯಾಸಕ್ಕೆ ಇದೇ ರೀತಿಯ ಕಾಂಬಿನೇಶನ್ ಮಾಡಬೇಕೆಂದೇನಿಲ್ಲ. ಸಡಿಲ, ಬಿಗಿ, ಎಲ್ಲ ರೀತಿಯ ಟಾಪ್‌ಗ್ಳಿಗೂ ಈ ವಿನ್ಯಾಸ ಅಂದವೇ. ಪೋಲ್ಕಾ ಡಾಟ್ಸ್, ಫ್ರಿಂಜ್ಸ್, ಲೇಸ್‌ವರ್ಕ್, ಚೆಕ್ಸ್, ಟ್ಯಾಸೆಲ್ಸ…, ಕ್ರೊಶೇ… ಮುಂತಾದ ಪ್ರಕಾರಗಳಲ್ಲೂ ಕೋಲ್ಡ… ಶೋಲ್ಡರ್ ವಿನ್ಯಾಸ ಚೆನ್ನಾಗೇ ಕಾಣುತ್ತದೆ.
ಇನ್ನು ರೇಷ್ಮೆ ಅಥವಾ ಸ್ಯಾಟಿನ್ ಬಟ್ಟೆಯ ಕೋಲ್ಡ್ ಶೋಲ್ಡರ್ ಟಾಪ್ ಕೊಳ್ಳುವುದಾದರೆ ಸಡಿಲವಾದ ಟಾಪ್‌ಗ್ಳು ಅಂದವಾಗಿ ಕಾಣುತ್ತವೆ. ಸಡಿಲ ಟಾಪ್‌ಗ್ಳ ಜೊತೆ ಬಿಗಿಯಾದ ಪ್ಯಾಂಟ್ ಮ್ಯಾಚ್ ಆಗುತ್ತದೆ. ಅಂದರೆ ಸ್ಲಿಮ್ ಫಿಟ್ ಜೀನ್ಸ್, ಲೆಗಿಂಗ್ಸ್, ಯೋಗಾ ಪ್ಯಾಂಟ್ ಮುಂತಾದವು. ಬಿಗಿಯಾದ ಟಾಪ್ ತೊಡುವುದಾದರೆ ಸಡಿಲ ಪ್ಯಾಂಟ್‌ಗಳು ಒಪ್ಪುತ್ತವೆ. ಅಂದರೆ ಪಲಾಝೊ, ಹ್ಯಾರೆಮ… ಪ್ಯಾಂಟ್, ಬೆಲ್ಟ್ ಬಾಟಮ್, ಜೀನೀ ಪ್ಯಾಂಟ್, ಬೂಟ್ ಕಟ್ ಇತ್ಯಾದಿ. ಚೈನೀಸ್ ಕಾಲರ್, ಬೋಟ್ ಕಟ್, ಕ್ಲೋಸ್ ನೆಕ್, ಕಿಮೋನೋ ಮುಂತಾದ ನೆಕ್ ಡಿಸೈನ್ (ಕತ್ತು) ಇರುವ ಕೋಲ್ಡ್ ಶೋಲ್ಡರ್ ಡ್ರೆಸ್‌ಗಳನ್ನೂ ತೊಟ್ಟು ಮೆರೆಯಿರಿ. ಅದಿತಿಮಾನಸ ಟಿ.ಎಸ್.