Advertisement

ಅಯೋಧ್ಯೆ: ಅನಾಥ, ಬಡಮಕ್ಕಳ ಗುರು ಈ ಪೊಲೀಸ್‌ ಇನ್ಸ್‌ಪೆಕ್ಟರ್‌!

07:00 PM Aug 27, 2022 | Team Udayavani |

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಒಬ್ಬ ಗುರುಗಳಿದ್ದಾರೆ. ಅವರಿಗೆ ಸಮವಸ್ತ್ರಧಾರಿ ಶಿಕ್ಷಕ ಎಂದೇ ಜನ ಕರೆಯುತ್ತಾರೆ.

Advertisement

ಆ ವ್ಯಕ್ತಿಯ ಹೆಸರು ರಂಜಿತ್‌ ಯಾದವ್‌, ಮಾಡುವ ವೃತ್ತಿ ಸಬ್‌ ಇನ್ಸ್‌ಪೆಕ್ಟರ್‌! ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಇವರು, ಪ್ರತಿದಿನ ಬೆಳಗ್ಗೆ 7ರಿಂದ 9ರವರೆಗೆ ಶಿಕ್ಷಕರಾಗಿರುತ್ತಾರೆ. ಇದು ಹಣಕ್ಕಾಗಿ ಮಾಡುವುದಲ್ಲ, ಭಿಕ್ಷುಕರು, ಅನಾಥರ ಮಕ್ಕಳಿಗಾಗಿ ಹೀಗೆ ಸೇವೆ ಸಲ್ಲಿಸುತ್ತಿದ್ದಾರೆ.

ಮಕ್ಕಳಿಗೆ ಇಂಗ್ಲಿಷ್‌, ಹಿಂದಿ ಮತ್ತು ಗಣಿತವನ್ನು ಕಲಿಸುತ್ತಾರೆ. ಇವರು ಮೊದಲು ನಯಾಘಾಟ್‌ ಪೊಲೀಸ್‌ ಠಾಣೆಗೆ ಅಧಿಕಾರಿಯಾಗಿ ನಿಯುಕ್ತರಾದಾಗ ಈ ಭಿಕ್ಷುಕ, ಅನಾಥ ಮಕ್ಕಳ ಸ್ಥಿತಿ ಅವರ ಗಮನಕ್ಕೆ ಬಂತು. ಈ ಮಕ್ಕಳು ದೇವಸ್ಥಾನಗಳ ಓಣಿಗಳಲ್ಲಿ, ಸರಯೂ ನದಿಯ ಘಟ್ಟಗಳಲ್ಲಿ ತಂದೆತಾಯಂದಿರೊಂದಿಗೆ ಭಿಕ್ಷೆ ಬೇಡುತ್ತಿದ್ದುದ್ದನ್ನು ನೋಡಿದಾಗ ಅಯ್ಯೋ ಅನಿಸಿತು.

ತಕ್ಷಣ ಅವರ ಪೋಷಕರೊಂದಿಗೆ, ನಾನು ಉಚಿತವಾಗಿ ಕಲಿಸುತ್ತೇನೆ ಸೇರಿಸುತ್ತೀರಾ ಎಂದು ಕೇಳಿದರು. ನಿಧಾನಕ್ಕೆ ಎಲ್ಲರೂ ಒಪ್ಪಿಕೊಂಡರು. ಈಗ ಪ್ರತೀದಿನ ಇವರ ಬಳಿಯಲ್ಲಿ 60ಕ್ಕೂ ಅಧಿಕ ಮಕ್ಕಳು ಪಾಠ ಕಲಿಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next