Advertisement

ಡೋನಲ್ಡ್‌ ಟ್ರಂಪ್‌ ಗೆ ಅಮೆರಿಕ ಮಾಧ್ಯಮದ ಖಡಕ್‌ ಬಹಿರಂಗ ಪತ್ರ

05:30 PM Jan 19, 2017 | udayavani editorial |

ವಾಷಿಂಗ್ಟನ್‌ : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಲ್ಡ್‌ ಟ್ರಂಪ್‌ ಮತ್ತು ಅಮೆರಿಕನ್‌ ಮಾಧ್ಯಮ ನಡುವಿನ ಸಂಬಂಧಗಳು ಈಗಾಗಲೇ ಹಳಸಲು ಆರಂಭಿಸಿದೆ. ಟ್ರಂಪ್‌ ಮಾಧ್ಯಮ ವಿಚಾರದಲ್ಲಿ ಪ್ರಭಾವ ಬೀರಿ ಹಸ್ತಕ್ಷೇಪ ನಡೆಸುವ ಸಾಧ್ಯತೆಗಳನ್ನು ಎಚ್ಚರಿಕೆಯಿಂದ ಕಂಡುಕೊಳ್ಳಲಾಗಿದೆ.

Advertisement

ಅಂತೆಯೇ ಅಮೆರಿಕನ್‌ ಪ್ರಸ್‌ ಕಾರ್ಪೊರೇಶನ್‌ ಮತ್ತು ಶ್ವೇತ ಭವನ ಪತ್ರಕರ್ತರು ಟ್ರಂಪ್‌ ಗೆ ಖಡಕ್‌ ಬಹಿರಂಗ ಬರೆದಿದ್ದಾರೆ. ಈ ಪತ್ರದಲ್ಲಿ  ಪತ್ರಕರ್ತರು ಟ್ರಂಪ್‌ ಗೆ “ನಮ್ಮ ವರದಿಗಾರಿಕೆಯ ನಿಯಮಗಳನ್ನು ನಾವು ರೂಪಿಸುತ್ತೇವೆ; ನೀವಲ್ಲ; ನಮ್ಮ ಓದುಗರಿಗೆ, ವೀಕ್ಷಕರಿಗೆ ಏನನ್ನು ಕೊಡಬೇಕು ಎಂಬುದನ್ನು ನಾವೇ ತೀರ್ಮಾನಿಸುತ್ತೇವೆ; ನೀವಲ್ಲ’ ಎಂದು ಖಡಕ್‌ ಆಗಿ ಎಚ್ಚರಿಕೆ ನೀಡಿದ್ದಾರೆ. 

ಅಮೆರಿಕದ ಪತ್ರಕರ್ತರು ಟ್ರಂಪ್‌ ಗೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಬರೆದಿರುವ ಈ ಖಡಕ್‌ ಬಹಿರಂಗ ಪತ್ರವನ್ನು ಕೊಲಂಬಯಾ ಜರ್ನಲಿಸಂ ರಿವ್ಯೂ ನಿಯತಕಾಲಿಕ ಪ್ರಕಟಿಸಿದೆ. ಕೊಲಂಬಿಯ ವಿಶ್ವವಿದ್ಯಾಲಯವು ವೃತ್ತಿಪರ ಪತ್ರಕರ್ತರಿಗಾಗಿ ಈ ನಿಯತಕಾಲಿಕವನ್ನು ಪ್ರಟಿಸುತ್ತಿದೆ.

ನಿಯೋಜಿತ ಅಧ್ಯಕ್ಷರು (ಟ್ರಂಪ್‌) ಮತ್ತು ಅಮೆರಿಕನ್‌ ಪ್ರಸ್‌ ಕಾರ್ಪೊರೇಶನ್‌ ನಡುವಿನ ಸಂಬಂಧ ಮಂದಿನ ನಾಲ್ಕು ವರ್ಷಗಳಲ್ಲಿ, ಅಥವಾ ಸಂಭವನೀಯ ಎಂಟು ವರ್ಷಗಳಲ್ಲಿ, ಚೆನ್ನಾಗಿ ಇರಲಾರದೆಂಬುದು ನಿಮಗೆ (ಟ್ರಂಪ್‌ ಗೆ) ಅಚ್ಚರಿಯ ವಿಷಯವಾಗೇನೂ ಇರಲಾರದೆಂದು ನಾವು ಭಾವಿಸುತ್ತೇವೆ’ ಎಂದು ಪತ್ರದಲ್ಲಿ  ಮುಲಾಜಿಲ್ಲದೆ ಹೇಳಲಾಗಿದೆ.

“ನೀವು (ಟ್ರಂಪ್‌) ನಿಮ್ಮ ಪ್ರಭಾವ ಬೀರಲು ಬಯಸುವ ಟಿವಿ ಪ್ರಸಾರ ಸಮಯ, ಪತ್ರಿಕೆಗಳಲ್ಲಿನ ಕಾಲಂ ಗಳು ನಮ್ಮವು; ನಮ್ಮ ವೀಕ್ಷಕರಿಗೆ, ಓದುಗರಿಗೆ ಯಾವುದೇ ಅಗತ್ಯ, ಯಾವುದು ಹಿತ ಎಂಬುದನ್ನು ತೀರ್ಮಾನಿಸುವವರು ನಾವು; ನೀವಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ.

Advertisement

“ಚುನಾವಣಾ ಪ್ರಚಾರಾಭಿಯಾನದ ವೇಳೆಯೇ ನೀವು ಸುದ್ದಿ ಮಾಧ್ಯಮಗಳನ್ನು ಬಹಿಷ್ಕರಿಸಿದ್ದೀರಿ; ನಮಗೆ ಟಾಂಟ್‌ ನೀಡಲು ಟ್ವಿಟರ್‌ ಬಳಸಿಕೊಂಡಿದ್ದೀರಿ; ಹಾಗೆಯೇ ವೈಯಕ್ತಿಕವಾಗಿ ಪತ್ರಕರ್ತರಿಗೆ ಬೆದರಿಕೆ ಹಾಕಲು ನಿಮ್ಮ ಜನರನ್ನು ಉಪಯೋಗಿಸಿಕೊಂಡಿದ್ದೀರಿ; ನೀವೇ ಖುದ್ದು ಹಲವಾರು ಮಾನನಷ್ಟ ದಾವೆಗಳನ್ನು ಮಾಧ್ಯಮ ಸಂಸ್ಥೆ ಹಾಗೂ ಮಾಧ್ಯಮ ಮಂದಿಯ ವಿರುದ್ಧ ಹೂಡಿದ್ದೀರಿ; ಆದರೆ ಅದರಿಂದ ನಿಮಗೆ ಯಾವ ಲಾಭವೂ ಆಗಿಲ್ಲ. ಮಾಧ್ಯಮದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸುವ ನೀತಿ ನಿಮಯಗಳನ್ನು ರೂಪಿಸುವ ಹಕ್ಕು, ಅಧಿಕಾರ ನಿಮಗಿದೆ; ಹಾಗೆಯೇ ನಮಗೂ ಇದೆ. ನಮಗೆ ಸರಕಾರದೊಳಗಿನಅತ್ಯಮೂಲ್ಯ ಸುದ್ದಿಗಳನ್ನು  ನಿರಾಕರಿಸುವ ಬೆದರಿಕೆಯನ್ನೂ ಹಾಕಿದ್ದೀರಿ; ಆದರೆ ಅವುಗಳನ್ನು ಹೇಗೆ ಪಡೆಯಬೇಕೆಂಬುದು ನಮಗೂ ಗೊತ್ತಿದೆ’ ಎಂದು ಪತ್ರದಲ್ಲಿ ಟ್ರಂಪ್‌ ಗೆ ಎಚ್ಚರಿಸಲಾಗಿದೆ. 

“ನಮ್ಮ ವೃತ್ತಿಯನ್ನು ಹೇಗೆ ಮತ್ತು ಯಾವ ಉನ್ನತ ಧ್ಯೇಯೋದ್ದೇಶಗಳೊಂದಿಗೆ ನಡೆಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ; ಆದರೂ ಅತ್ಯಂತ ಮೂಲಭೂ ಪ್ರಶ್ನೆಗಳ ಬಗ್ಗೆ ಮರು ಚಿಂತನೆ ನಡೆಸುವ, ನಾವು ಯಾರೆಂಬ ಆತ್ಮಾವಲೋಕನ ನಡೆಸುವ ಮತ್ತು ನಾವು ಈ ಕ್ಷೇತ್ರದಲ್ಲಿ ಯಾಕೆ ಇದ್ದೇವೆ ಎಂಬುದನ್ನು ಅರಿಯುವ ಅಗತ್ಯವನ್ನು ಮನಗಾಣಿಸಿರವುದಕ್ಕೆ ನಿಮಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಬಹಿರಂಗ ಪತ್ರದಲ್ಲಿ ಟ್ರಂಪ್‌ ಗೆ ಮಾಧ್ಯಮಗಳು ಎಚ್ಚರಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next