Advertisement

ಜನೌಷಧಿ ಕೇಂದ್ರ ಆರಂಭಿಸಿ

01:00 PM Sep 27, 2019 | Suhan S |

ಶಿರಹಟ್ಟಿ: ಬಡವರ ಮತ್ತು ಮಧ್ಯಮ ವರ್ಗದವರನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು, ಅವರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಯೋಜನೆಯಾದ ಜನೌಷಧಿ ಕೇಂದ್ರವನ್ನು ಪಟ್ಟಣದಲ್ಲಿ ಆರಂಭಿಸುವಂತೆ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಒತ್ತಾಯಿಸಿದರು.

Advertisement

ಗುರುವಾರ ಸರಕಾರಿ ಆರೋಗ್ಯ ಇಲಾಖೆಯ ಆರೋಗ್ಯ ಸಮಿತಿ ಸದಸ್ಯರೊಂದಿಗೆ ಕೂಡಿಕೊಂಡು ಪಟ್ಟಣದ ಸರಕಾರಿ ದವಾಖಾನೆಯ ಆಡಳಿತ ಅಧಿಕಾರಿ ಡಾ| ಚಂದ್ರು ಲಮಾಣಿ ಅವರನ್ನು ಈ ಕುರಿತು ಅವರು ಒತ್ತಾಯಿಸಿದರು. ಸುತ್ತಲು ಗ್ರಾಮಗಳಿಂದ ಮತ್ತು ಹೆಚ್ಚಾಗಿ ಕೃಷಿ ಮತ್ತು ಕಾರ್ಮಿಕ ವರ್ಗದವರಿಂದ ಕುಡಿರುವ ಶಿರಹಟ್ಟಿ ಪಟ್ಟಣಕ್ಕೆ ಜನೌಷಧಿ ಕೇಂದ್ರದ ಅವಶ್ಯಕತೆ ಎಲ್ಲೆಡೆಗಿಂತ ಹೆಚ್ಚಾಗಿದೆ. ಆದರೆ ಈ ಕೂರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಚಿಂತಿಸದಿರುವುದು ವಿಪರ್ಯಾಸದ ಸಂಗತಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚಿಸಿ ಇಲ್ಲಿನ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ನೀಡುವ ಭಾರತಿಯ ಜನೌಷಧಿ ಕೇಂದ್ರವನ್ನು ಒದಗಿಸಿಕೊಡುವಂತೆ ಒತ್ತಾಯಿಸಿದರು.

ಆರೋಗ್ಯ ಸಮಿತಿ ಸದಸ್ಯರಾದ ನಾಗರಾಜ ಲಕ್ಕಂಡಿ, ಯಲ್ಲಪ್ಪ ಇಂಗಳಗಿ, ಸುರೇಶ ಚಿಕ್ಕತೋಟದ, ಅನಿಲ ಮಾನೆ, ಸಂತೋಷ ಕುಬೇರ, ಸುಧೀರ ಜಮಖಂಡಿ, ಜಗದೀಶ ತೇಲಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next