ಕಾಪು: ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಬೋಧಕ ವೃಂದ ಮತ್ತು ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲ ಎಸ್. ಪಂಡರೀನಾಥ ಅವರ ನೇತೃತ್ವದಲ್ಲಿ ಜೊತೆಗೂಡಿ ಕಾಪು ಪೊಲೀಸ್ ಠಾಣೆಗೆ ತೆರಳಿ ಪೊಲೀಸರೊಂದಿಗೆ “ತೆರೆದ ಮನೆ” ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿದರು.
ಕಾಪು ಪೊಲೀಸ್ ಠಾಣಾ ಉಪನಿರೀಕ್ಷಕ ನಿತ್ಯಾನಂದ ಗೌಡ ಅವರು ಠಾಣೆಯ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ,ಕ್ರೈಂ ವಿಭಾಗ, ಎಸ್.ಬಿ. ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್ ವಿಭಾಗ, ಠಾಣಾ ಬರಹಗಾರ ವಿಭಾಗ, ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.
ಪೊಲೀಸ್ ದಿನಚರಿ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ವಿದ್ಯಾರ್ಥಿಗಳು ಪೊಲೀಸ್ ಠಾಣೆಯಲ್ಲಿ ಠಾಣಾ ದಿನಚರಿ, ಅರ್ಜಿಗಳು, ಪಿ.ಎಸ್.ಆರ್., ಮುದ್ದೆ ಮಾಲು, ಡ್ನೂಟಿ ರೋಸ್ಟರ್, ವಿಲೇಜ್ ರೋಟರ್, ಅಂಗ ಶೋಧನಾ ಪುಸ್ತಕ , ಸೆಂಟ್ರಿ ಪುಸ್ತಕ, ಖೈದಿ ಬಂದನಾ ಪುಸ್ತಕ, ಸಮನ್ಸ್ ನೊಂದಣಿ, ವಾರಂಟ್ ನೋಂದಣಿ , ಪೋÅಕ್ಲೆಮೇಷನ್ ಎಫ್.ಎಲ್. ಡಬ್ಲೂ$Â, ಎಂ. ಓ. ಬಿ. ರಿಜಿಸ್ಟರ್, ರೌಡಿ ರಿಜಿಸ್ಟರ್, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೊಂದಣಿ, ಪಾಸ್‌ಪೋರ್ಟ್ ನೋಂದಣಿ, ಪಿ. ಸಿ. ಸಿ. ನೋಂದಣಿ, ನಗದು ಪುಸ್ತಕ, ಅಪರಾಧ ನೋಂದಣಿ, ಎಲ್. ಪಿ. ಸಿ. ನೋಂದಣಿ, ಮೋಟಾರು ವಾಹನ ಕಾಯಿದೆ ಪುಸ್ತಕ, ಸಣ್ಣ ಅಪರಾಧ ಪುಸ್ತಕ ಇತ್ಯಾದಿ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಸಮಗ್ರ ಮಾಹಿತಿ ಸಂಗ್ರಹಿಸಿದರು.
ತೆರೆದ ಮನೆ ಕಾರ್ಯಕ್ರಮದ ಉದ್ದೇಶವೇನು ?
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಪಂಡರೀನಾಥ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆ ಎಂದರೇನು ?, ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ – ಸಿಬಂದಿಗಳ ಕೆಲಸ ಕಾರ್ಯಗಳೇನು?, ಕರ್ತವ್ಯ ನಿರ್ವಹಣೆಯ ವೇಳೆ ಎದುರಾಗುವ ತೊಂದರೆಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸುವ ಸಲುವಾಗಿ ತೆರೆದ ಮನೆ – ಪೊಲೀಸರೊಂದಿಗೆ ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ವಿದ್ಯಾರ್ಥಿಗಳ ಸಹಕಾರ ಅಗತ್ಯ : ಮಾದಕ ಸೇವೆನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಅವುಗಳನ್ನು ತಡೆಯುವಲ್ಲಿ ವಿದ್ಯಾರ್ಥಿ – ವಿದ್ಯಾರ್ಥಿನಿಯರ ಪಾತ್ರ ಹಾಗೂ ವಿದ್ಯಾರ್ಥಿ – ವಿದ್ಯಾರ್ಥಿನಿಯರೊಡನೆ ಪೊಲೀಸರ ವರ್ತನೆ ಬಗ್ಗೆ ಮಾಹಿತಿ ನೀಡಿದರು. ರಸ್ತೆ ಸಂಚಾರ, ರಸ್ತೆ ಸುರಕ್ಷತೆ ಸಹಿತವಾಗಿ ಜನಸ್ನೇಹಿ ಪೊಲೀಸ್ ರೂಪಿಸುವಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಕಾಪು ಎಸ್‌ಐ ನಿತ್ಯಾನಂದ ಗೌಡ ಹೇಳಿದರು.