Advertisement

ದತ್ತಮಾಲಾ ಅಭಿಯಾನಕ್ಕೆ ತೆರೆ

10:20 AM Nov 20, 2017 | |

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದತ್ತಮಾಲಾ ಅಭಿಯಾನಕ್ಕೆ ಭಾನುವಾರ ಶಾಂತಿಯುತ ತೆರೆ ಬಿದ್ದಿದೆ. 13 ರಿಂದ ಒಂದು ವಾರಗಳ ಕಾಲ ನಡೆದ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಭಾನುವಾರ ದತ್ತಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ ಹೋಮ ಹವನ ನಡೆಸಿ ದತ್ತಪಾದುಕೆಗಳ ದರ್ಶನ ಪಡೆದರು.

Advertisement

ಭಾನುವಾರ ಬೆಳಗ್ಗೆ ನಗರದಲ್ಲಿ ದತ್ತಮಾಲಾಧಾರಿ ಗಳು ಶೋಭಾಯಾತ್ರೆ ನಡೆಸಿದರು. ಬಳಿಕ, ಬೋಳರಾಮೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ನಡೆಯಿತು. ಸಭೆಯ ನಂತರ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದ ದತ್ತಮಾಲಾ ಧಾರಿಗಳು ಹೊನ್ನಮ್ಮನ ಹಳ್ಳದಲ್ಲಿ ಮಿಂದು ಅಲ್ಲಿಂದ ಕೆಲವರು ಕಾಲ್ನಡಿಗೆಯಲ್ಲಿ, ಉಳಿದವರು ವಾಹನಗಳಲ್ಲಿ ಪೀಠಕ್ಕೆ ತೆರಳಿದರು.

ದತ್ತಪೀಠದ ಆವರಣದಲ್ಲಿ ನಿರ್ಮಿಸಲಾಗಿರುವ ಬ್ಯಾರಿ ಕೇಡ್‌ ಮೂಲಕ ಸರತಿ ಸಾಲಿನಲ್ಲಿ ನಿಂತು ಭಜನೆ ಮಾಡುತ್ತ ತೆರಳಿದ ಭಕ್ತರು, ಗುಹೆಯೊಳಗೆ ತೆರಳುವ ಮುನ್ನ ಇರುಮುಡಿಯನ್ನು ಸಮರ್ಪಿಸಿ, ದತ್ತಗುಹೆ ಯೊಳಗೆ ಹೋಗಿ ಪಾದುಕೆಗಳ ದರ್ಶನ ಪಡೆದರು. ನಾಗಾಸಾಧು ಗಳೂ ಸೇರಿದಂತೆ ಸಂಘಟನೆಯ ಮುಖಂಡರನ್ನು ವಿಶೇಷ ದ್ವಾರದ ಮೂಲಕ ಗುಹೆಯೊಳಗೆ ಕಳುಹಿಸಲಾಯಿತು.
ಪೂರ್ಣಾಹುತಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, ಆಂದೋಲನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಮಹೇಶ್‌ ಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. ಪಾದುಕೆಗಳ ದರ್ಶನದ ನಂತರ ಪೀಠದಲ್ಲಿ ದತ್ತ ಹಾಗೂ ಗಣಹೋಮ ನಡೆಯಿತು.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next