ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾಜ ಸೇವೆ ಮಾಡುತ್ತಿರುವ ನಟ ನಟ ಉಪೇಂದ್ರ ಅವರ ವಿರುದ್ಧ ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದೆಲ್ಲಾ ಮಾತಾಡುತ್ತಿದ್ದಾರೆ.
ತಮ್ಮ ಕೆಸಲ ಹಾಗೂ ಪ್ರಜಾಕೀಯದ ವಿರುದ್ಧ ಕೊಂಕು ನುಡಿಗಳನ್ನಾಡುತ್ತಿರುವ ಜನರಿಗೆ ಉಪ್ಪಿ ಅವರು ಸರಿಯಾದ ಉತ್ತರವನ್ನೇ ನೀಡುತ್ತಿದ್ದಾರೆ. ಅವರು ಇದೀಗ ಎಲ್ಲರಿಗೂ ಓಪನ್ ಚಾಲೆಂಜ್ ಒಂದನ್ನು ಹಾಕಿದ್ದಾರೆ.
ಆ ಚಾಲೆಂಜ್ ಏನು ?
ಕರ್ನಾಟಕದ ಜನರೇ.. ನಿಮ್ಮದೇ ಒಂದು ಪಕ್ಷ ಇದೆ. ಪ್ರಜಾಕೀಯ ವಿಚಾರದಂತೆ ನಿಮ್ಮ ಪಕ್ಷಕ್ಕೆ ನೀವೇ ನಿಮ್ಮ ಕ್ಷೇತ್ರದ ಮತದಾರರ ಶಿಫಾರಸ್ಸು ಪಡೆದು ಚುನಾಣೆಯಲ್ಲಿ ಭಾಗವಹಿಸಿ ಅಥವಾ ನಿಮ್ಮ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಸೂಚಿಸಿ, ನೀವೇ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಪ್ರತಿನಿಧಿಯು ಪ್ರಜಾಕೀಯ ಸಿದ್ದಾಂತದಂತೆ ನಡೆಯದಿದ್ದರೆ ಆತ/ ಆಕೆಯನ್ನು ನೀವೇ ಹೋರಾಟ ಮಾಡಿ ಕೆಳಗಿಳಿಸಿ, ನೀವು ಕರೆದರೆ ಹೋರಾಟದಲ್ಲಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ( ಅದು ಕಾನೂನಾಗುವಂತೆ ಮಾಡಿ)
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೀವೇ ರಾಜರಾಗಬೇಕು. ಉತ್ತಮ ಪ್ರಜಾಕೀಯ ಪಕ್ಷ ನೀವೇ ಮುನ್ನಡೆಸಬೇಕು. ವ್ಯಕ್ತಿಯನ್ನು ಗುರಿಯಾಗಿಸಿ ವಿಚಾರಗಳನ್ನು ಕೊಲ್ಲುವ ರಾಜಕೀಯವನ್ನು ಈ ರೀತಿ ಮುಗಿಸಬೇಕು.
ನೀವೇ ಯುಪಿಪಿ ಹೈಕಮಾಂಡ್… ಪ್ರಜಾಕೀಯ ಸಿದ್ಧಾಂತಡಿಯಲ್ಲಿ ನೀವು ಹೇಳಿದಂತೆ ಕೇಳುವ ಪಕ್ಷದ ಸಂಸ್ಥಾಪಕ ಅಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಅಷ್ಟೆ.
ಇನ್ನು ಮುಂದೆ ಪ್ರಜಾಕೀಯದ ವಿಚಾರಗಳು ಮಾತ್ರ ಪ್ರಚಾರವಾಗಲಿ. ಉಪೇಂದ್ರ ಹೆಸರು ಎಲ್ಲಿಯೂ ಬೇಡ… ಓಕೆ ?
ಹೀಗೆ ಹೇಳಿರುವ ಉಪೇಂದ್ರ ಅವರು ನೀವು ಹಿಂದಿನಿಂದ ಎಂದೂ ಬಿಡಿಸಿಕೊಳ್ಳಲಾಗದ ಸರಪಳಿಯಿಂದ ಬಿಡಿಸಿಕೊಂಡು ಹೊರಗೆ ಬರಬಲ್ಲಿರಾ ? ಎಂದು ಸವಾಲು ಹಾಕಿದ್ದಾರೆ.