Advertisement
ಕರ್ನಾಟಕದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಊಟಿಗೆ ಭೇಟಿ ನೀಡುವುದರಿಂದ ಅಲ್ಲಿ ರಾಜ್ಯ ಒಡೆತನದ 38 ಎಕರೆ ಜಾಗದಲ್ಲಿರುವ “ಫೆರ್ನ್ ಹಿಲ್ಸ್ ಗಾರ್ಡನ್’ ಅನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಊಟಿಗೆ ಬರುವಂತಹ ಪ್ರವಾಸಿಗರನ್ನು ಸೆಳೆಯಲು ಕಳೆದ 10 ವರ್ಷದಿಂದಲೂ ವಿವಿಧ ಹಂತದಲ್ಲಿ ಈ ಉದ್ಯಾನದ ನವೀಕರಣ ಕಾಮಗಾರಿ ಮುಗಿದಿದ್ದು,ಜುಲೈನಲ್ಲಿ ಉದ್ಯಾನ ಸಾರ್ವಜನಿಕ ವೀಕ್ಷಣೆಗೆ ಸಮರ್ಪಣೆಯಾಗಲಿದೆ.
ಪ್ರದೇಶಗಳಿಗೆ ಅನುಗುಣವಾದ ಗಿಡಗಳನ್ನು ಬೆಳೆಸಿ ಉದ್ಯಾನ (ಸಂಕನ್‌ಗಾರ್ಡನ್)ವಾಗಿ ಪರಿವರ್ತಿಸಿರುವುದು ವಿಶೇಷ. ಜೊತೆಗೆ ವಿವಿಧ ಬಗೆಯ ಗಿಡ ಮೂಲಿಕೆ ಸಸ್ಯಗಳ ಉದ್ಯಾನ,ತರಕಾರಿ ಗಾರ್ಡನ್, ವಾಣಿಜ್ಯ ಹೂವುಗಳ ಬೆಳೆಯುವ ಪಾಲಿಹೌಸ್, ಸಸ್ಯಾಲಂಕಾರದ ಗಾರ್ಡನ್(ಟೋಪಿಯರಿ) ಇಲ್ಲಿನ ಮತ್ತೂಂದು ಆಕರ್ಷಣೆ.
Related Articles
Advertisement
ಚೇಸಿಂಗ್ ಫೌಂಟೆನ್: ನೀಲಗಿರಿ ಬೆಟ್ಟಗಳಿಂದ ಹರಿದು ಬರುವ ನೀರನ್ನು ಸುಮಾರು ಕಾಲು ಕಿಮೀ ಉದ್ದದಲ್ಲಿ ನಾಲ್ಕು ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಿ, ತಡೆಯುವ ಯೋಜನೆ ಇದೆ. ಈ ಕೆರೆಗಳಲ್ಲಿ ಬಾತುಕೋಳಿಗಳು, ಮೀನುಗಳನ್ನು ಬಿಡಲಾಗುವುದು, ಜತೆಗೆ ಪ್ರವಾಸಿಗರಿಗೆ ಇಷ್ಟವಾಗುವಂತೆ ಕೊನೆಯ ಕೆರೆಯ ಸಮೀಪವೇ ಚೇಸಿಂಗ್ ಫೌಂಟೆನ್(ಕಾರಂಜಿ) ನಿರ್ಮಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪಿ.ಸಿ.ರೇ ತಿಳಿಸಿದ್ದಾರೆ.
ಹಿಂದೆ ಹಣ್ಣಿನ ತೋಟವಿದ್ದ ಜಾಗದಲ್ಲಿ ಹೊಸದಾಗಿ ವಿವಿಧ ತಳಿಯ ಮರಗಿಡಗಳನ್ನು ಬೆಳೆಸಲಾಗುತ್ತಿದೆ. ಜತೆಗೆ ಮಕ್ಕಳಿಗೆ ಇಷ್ಟವಾಗುವಂತೆ 15 ನೀಲಗಿರಿ ಕುರಿಗಳನ್ನು ಸಾಕಲಾಗುತ್ತಿದ್ದು, ಈ ಪ್ರದೇಶ ಅಭಿವೃದಿಟಛಿ ಪಡಿಸಿದ ನಂತರ ಅವುಗಳನ್ನು ಇಲ್ಲಿ ಬಿಡಲಾಗುವುದು. ಟೀ ಫ್ಲಾಂಟ್ ಬೆಳೆಯುವ ವಿಧಾನ ಇತ್ಯಾದಿ ಮಾಹಿತಿ ಪರಿಚಯಿಸಲು ಎರಡು ಎಕರೆ ಜಾಗದಲ್ಲಿ ಟೀ ಗಾರ್ಡನ್ ಬೆಳೆಯಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್ ತಿಳಿಸಿದರು. ಇಲ್ಲಿ ಪ್ರವಾಸಿಗರು ಉಳಿಯಲು ಅತಿಥಿ ಗೃಹ ಸಹ ಇದ್ದು, ರಾಜ್ಯದ ಪ್ರವಾಸಿಗರ ನೆಚ್ಚಿನ ಸ್ಥಳವೂ ಹೌದು.
ಫೆರ್ನ್ ಹಿಲ್ಸ್ ಗಾರ್ಡ್‌ನನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ 20 ಎಕರೆ ಪ್ರದೇಶದಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 18 ಎಕರೆಯಲ್ಲಿ ವಿವಿಧ ಯೋಜನೆಗಳು ಸಾಕಾರಗೊಳ್ಳಬೇಕಿದೆ. ಈ ತಿಂಗಳಲ್ಲೇ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ ಮಾಡಿಸುವ ಯೋಜನೆ ಇದ್ದು, ಸಿದ್ಧತೆಯಲ್ಲಿದ್ದೇವೆ. – ಎಸ್.ಎಸ್.ಮಲ್ಲಿಕಾರ್ಜುನ್,
ತೋಟಗಾರಿಕೆ ಇಲಾಖೆ ಸಚಿವ – ಸಂಪತ್ ತರೀಕೆರೆ