Advertisement

Bharat Mata ki Jai: ಭಾರತದಲ್ಲಿ ಬದುಕಬೇಕೆಂದರೆ ‘ಭಾರತ್ ಮಾತಾ ಕಿ ಜೈ’ ಹೇಳಿ: ಕೇಂದ್ರ ಸಚಿವ

11:40 AM Oct 15, 2023 | Team Udayavani |

ಹೈದರಾಬಾದ್: ಭಾರತದಲ್ಲಿ ವಾಸಿಸಲು ಬಯಸುವವರು ಭಾರತ್ ಮಾತಾ ಕಿ ಜೈ ಎಂದು ಹೇಳಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಶನಿವಾರ ಪ್ರತಿಪಾದಿಸಿದ್ದಾರೆ.

Advertisement

ಹೈದರಾಬಾದ್ ನಲ್ಲಿ ಬಿಜೆಪಿ ಆಯೋಜಿಸಿದ್ದ ರೈತರ ಸಮಾವೇಶ ಕಾರ್ಯಕ್ರಮವೊಂದರಲ್ಲಿ ಮಾತನಾಡದ ಚೌಧರಿ, ಹೈದರಾಬಾದಿನಲ್ಲಿ ಜನ ಪ್ರತಿನಿಧಿಯೊಬ್ಬ ನೀಡಿದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಅವರು, ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ರಾಜ್ಯದಲ್ಲಿ ರಾಷ್ಟ್ರೀಯ ಚಿಂತನೆಯ ಸರ್ಕಾರ ರಚನೆಯಾಗಬೇಕು ಎಂದರು.

ಭಾರತದಲ್ಲಿ ಇದ್ದುಕೊಂಡು ಯಾರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವುದಿಲ್ಲವೋ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಖಡಕ್ಕಾಗಿ ಹೇಳಿದ್ದಾರೆ. “ಭಾರತ್ ಮೇ ರೆಹನಾ ಹೈ, ಥೋ ‘ಭಾರತ್ ಮಾತಾ ಕಿ ಜೈ’ ಬೋಲ್ನಾ ಹೋಗಾ (ನೀವು ಭಾರತದಲ್ಲಿ ವಾಸಿಸಲು ಬಯಸಿದರೆ, ನೀವು ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕು), ಅವರು ಹೇಳಿದರು.

ಇದನ್ನೂ ಓದಿ: Operation Ajay: 274 ಭಾರತೀಯರೊಂದಿಗೆ ನಾಲ್ಕನೇ ವಿಮಾನ ಇಸ್ರೇಲ್‌ನಿಂದ ಆಗಮನ

Advertisement

Udayavani is now on Telegram. Click here to join our channel and stay updated with the latest news.

Next