Advertisement
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಧಾರ್ಮಿಕ ಪರಿಷತ್ ನೇತೃತ್ವದಲ್ಲಿ ದೇಗುಲಗಳ ಅಭಿವೃದ್ಧಿ/ ವ್ಯವಸ್ಥಾಪನ ಸಮಿತಿ ರಚನಾ ಪ್ರಕ್ರಿಯೆಗಳು ನಡೆಯು ತ್ತಿದ್ದು, ದೇಗುಲಗಳ ಸಮಗ್ರ ಅಭಿವೃದ್ಧಿಯೇ ಅದರ ಹಿಂದಿನ ಉದ್ದೇಶ ವಾಗಿದೆ. ಸಮಿತಿಸದಸ್ಯರು ಜನರಿಗೆ ಪರಿಚಿತರಾಗಿರಬೇಕೆಂಬ ಚಿಂತನೆ ಯೊಂದಿಗೆ ಪದಗ್ರಹಣ ಸಮಾರಂಭ ಆಯೋಜಿಸಲಾಗುತ್ತಿದೆ ವಿನಃ ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.
ಎಲ್ಲೂರು ದೇವಸ್ಥಾನದ ವ್ಯಾಪ್ತಿ ಯಲ್ಲಿ ಅದಾನಿ-ಯುಪಿಸಿಎಲ್ ವತಿ ಯಿಂದ ನಿರ್ಮಿಸಲು ಉದ್ದೇಶಿಸಿ ರುವ ಮಹಾದ್ವಾರ, ದೇಗುಲದ ಗಾರ್ಡನ್ ರಚನೆ ಮತ್ತು ರಂಗ ಮಂಟಪ ರಚನೆಯ ನೀಲ ನಕ್ಷೆ ಬಿಡುಗಡೆಗೊಳಿಸಲಾಯಿತು. ಕಾಪು ಕ್ಷೇತ್ರದ 61 ದೇವಸ್ಥಾನಗಳಿಗೆ 21.96 ಲಕ್ಷ ರೂ. ತಸ್ತೀಕು ಭತ್ಯೆ ವಿತರಿಸಲಾಯಿತು.
Related Articles
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆವಸಂತಿ ಮಧ್ವರಾಜ್, ತಾಲೂಕು ಪಂಚಾಯತ್ ಸದಸ್ಯ ಕೇಶವ ಮೊಲಿ, ಮುಂಬಯಿ ಉದ್ಯಮಿಗಳಾದ ಪ್ರವೀಣ್ ಬಿ. ಶೆಟ್ಟಿ ಮಲ್ಲೆಟ್ಟು, ನಾರಾಯಣ ಕೆ. ಶೆಟ್ಟಿ ಎರ್ಮಾಳು, ಅಶೋಕ್ ಎನ್. ಶೆಟ್ಟಿ, ಕೊಂಡೆಟ್ಟು ಸುಕುಮಾರ್ ಶೆಟ್ಟಿ,ಕೃಷ್ಣ ವೈ. ಶೆಟ್ಟಿ, ಚಲನಚಿತ್ರ ನಟ ರಾಜಶೇಖರ ಕೋಟ್ಯಾನ್ ಮುದರಂಗಡಿ ಅತಿಥಿಗಳಾಗಿ ಭಾಗವಹಿಸಿದ್ದರು.
Advertisement
ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ ಡಿ. ಶೆಟ್ಟಿ ಮಾಣಿಯೂರು ಬರ್ಪಾಣಿ, ನಿರಂಜನ್ ಶೆಟ್ಟಿ ಎಲ್ಲೂರು ಕಿನ್ನೋಡಿಗುತ್ತು, ನರಸಿಂಹ ಜೆನ್ನಿ ಪಣಿಯೂರು, ಸೋಮನಾಥ ಪೂಜಾರಿ ಸಾಂತೂರು, ಜಯಲಕೀÒ$¾ ಆಳ್ವ ಪಾದೂರುಗುತ್ತು, ವಿಜಯಲಕೀÒ$¾ ದೇವಾಡಿಗ ಬೆಳಪು, ಬಾಲಕೃಷ್ಣ ಪಣಿ ಯೂರು ಮೊದಲಾದವರು ಉಪಸ್ಥಿತರಿದ್ದರು.ಬೆಳಪು ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ದರು. ಎಲ್ಲೂರು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ವಂದಿಸಿದರು. ಎಲ್ಲೂರು ಗ್ರಾಮಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.