ನವದೆಹಲಿ: ಪ್ರತಿಷ್ಠಿತ ಟೈಮ್ ಮ್ಯಾಗಜೀನ್ 2023ನೇ ಸಾಲಿನ ಜಗತ್ತಿನ ಅತ್ಯುತ್ತಮ 100 ಕಂಪನಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತದ ಏಕೈಕ ಸಂಸ್ಥೆ ಮಾತ್ರ ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ:Fraud case;ಬಾಯಲ್ಲಿ ನೊರೆ..! ಚೈತ್ರಾ ಕುಂದಾಪುರ ಆಸ್ಪತ್ರೆಗೆ ದಾಖಲು
ಟೈಮ್ ಮ್ಯಾಗನೀನ್ ಮತ್ತು ಆನ್ ಲೈನ್ ಡಾಟಾ ಪ್ಲ್ಯಾಟ್ ಫಾರಂ Statista ಬಿಡುಗಡೆಗೊಳಿಸಿರುವ ಜಗತ್ತಿನ ನೂರು ಅತ್ಯುತ್ತಮ ಕಂಪನಿಗಳ ಪೈಕಿ ಭಾರತದ ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್ ಮಾತ್ರ ಸ್ಥಾನವನ್ನು ಪಡೆದಿದೆ.
ಬೆಂಗಳೂರು ಮೂಲದ ಇನ್ಫೋಸಿಸ್ ಪಟ್ಟಿಯಲ್ಲಿ 64ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಗ್ಗೆ ಇನ್ಫೋಸಿಸ್ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಇನ್ನು ಟೆಕ್ ಕಂಪನಿಗಳಾದ ಮೈಕ್ರೋಸಾಫ್ಟ್, Apple, Alphabet (ಗೂಗಲ್ ಒಡೆತನ) ಮತ್ತು ಮೆಟಾ ಪ್ಲ್ಯಾಟ್ ಫಾರಂ ಟಾಪ್ ಸ್ಥಾನಗಳನ್ನು ಪಡೆದಿರುವುದಾಗಿ ವರದಿ ತಿಳಿಸಿದೆ.
ಕಂಪನಿಗಳ ಆದಾಯದ ಬೆಳವಣಿಗೆ, ಉದ್ಯೋಗಿಗಳ ಸಂತೃಪ್ತಿ, ವಾತಾವರಣ, ಸಾಮಾಜಿಕ ಮತ್ತು ಕಾರ್ಪೋರೇಟ್ ಆಡಳಿತದ ಅಂಕಿ-ಅಂಶಗಳ ಆಧಾರದ ಮೇಲೆ Ranking ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಒಟ್ಟು 750 ಕಂಪನಿಗಳ ಪೈಕಿ ನೂರು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಇನ್ಫೋಸಿಸ್ ಅನ್ನು ಹೊರತುಪಡಿಸಿ, ಭಾರತದ ಇತರ ಏಳು ಕಂಪನಿಗಳ ಹೆಸರನ್ನು ಟೈಮ್ಸ್ ಪಟ್ಟಿಯಲ್ಲಿದೆ. ಅವು ಯಾವುದೆಂದರೆ ವಿಪ್ರೋ ಲಿಮಿಟೆಡ್ (174ನೇ ಸ್ಥಾನ), ಮಹೀಂದ್ರಾ ಗ್ರೂಪ್ (210), ರಿಲಯನ್ಸ್ ಲಿಮಿಟೆಡ್ (248), ಎಚ್ ಸಿಎಲ್ ಟೆಕ್ನಾಲಜೀಸ್ (262), ಎಚ್ ಡಿಎಫ್ ಸಿ ಬ್ಯಾಂಕ್ (418), ಡಬ್ಲ್ಯುಎನ್ ಎಸ್ ಗ್ಲೋಬಲ್ ಸರ್ವೀಸಸ್ (596) ಮತ್ತು ಐಟಿಸಿ ಲಿಮಿಟೆಡ್ (672) ಸ್ಥಾನ ಪಡೆದಿದೆ.