ರಾಯಚೂರು: ಕೋವಿಡ್-19 ಲಾಕ್ ಡೌನ್ ಬಳಿಕ ಪದವಿ ಕಾಲೇಜುಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮೊದಲ ದಿನ ಒಬ್ಬಳು ವಿದ್ಯಾರ್ಥಿನಿ ಮಾತ್ರ ಕಾಲೇಜಿಗೆ ಆಗಮಿಸಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ.
ಕಾಲೇಜಿನ ಒಟ್ಟು 3540 ವಿದ್ಯಾರ್ಥಿಗಳಲ್ಲಿ 1200 ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದಾರೆ. ಆದರೆ ಓರ್ವ ವಿದ್ಯಾರ್ಥಿನಿ ಮಾತ್ರ ಕಾಲೇಜಿಗೆ ಆಗಮಿಸಿದ್ದಾರೆ. ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿರುವುದು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ವಿಳಂಬವಾಗುವಂತೆ ಮಾಡಿದೆ.
ಕೋವಿಡ್ 19 ಪರೀಕ್ಷಾ ವರದಿ ಸಲ್ಲಿಸುವುದು ಕಡ್ಡಾಯ, ಹಾಗೂ ಪಾಲಕರಿಂದ ಮುಚ್ಚಳಿಕೆ ಪತ್ರ ತರಬೇಕಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡಿಲ್ಲ. ಇನ್ನೂ ಮಹಿಳಾ ಪದವಿ ಕಾಲೇಜಿನಲ್ಲೂ ಯಾವುದೇ ವಿದ್ಯಾರ್ಥಿನಿಯರು ಬಂದಿಲ್ಲ.
ಇದನ್ನೂ ಓದಿ:ಕಾಲೇಜು ಆರಂಭವಾದರೂ ಆನ್ ಲೈನ್ ಕ್ಲಾಸ್ ಗೆ ಮೊರೆಹೋದ ಬಹುತೇಕ ವಿದ್ಯಾರ್ಥಿಗಳು
ಕಾಲೇಜುಗಳನ್ನು ಸಂಪೂರ್ಣ ಸ್ಯಾನಿಟೈಸೇಶನ್ ಮಾಡಲಾಗಿದೆ. ಬರುವ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಲಕ್ಷ್ಮಿ ವೆಂಕಟೇಶ್ವರ ಕಾಲೇಜಿನ ಆಡಳಿತ ಮಂಡಳಿಯೇ ಕೋವಿಡ್ 19 ಪರೀಕ್ಷೆ ನಡೆಸುತ್ತಿದೆ.