Advertisement
ಬ್ರಿಟಿಷರ ಖಜಾನೆಯಾಗಿತ್ತುಬೆಳ್ಳಾರೆ ಕೋಟೆಯಲ್ಲಿ 1804ರಲ್ಲಿ ಒಂದು ಖಜಾನೆ ಕಚೇರಿ ಆರಂಭವಾಯಿತು. ಬೆಳ್ಳಾರೆ ಪೇಟೆಯ ಸುಳ್ಯ, ಅಮರ ಪಂಜ ಮತ್ತು ಬೆಳ್ಳಾರೆ ಮಾಗಣೆಗಳ ರಾಜಧಾನಿಯಾಗಿತ್ತು. ಈಗಲೂ ಬೆಳ್ಳಾರೆ ಗುಡ್ಡದ ಸುತ್ತ 16ನೇ ಶತಮಾನದಲ್ಲಿ ಇಕ್ಕೇರಿಯ ರಾಜಾ ವೆಂಕಟಪ್ಪ ನಾಯ್ಕ ನಿರ್ಮಿಸಿದ ಮಣ್ಣಿನ ಕೋಟೆಯ ಅವಶೇಷಗಳಿವೆ.
ಸ್ಮಾರಕ ನಿರ್ಮಾಣಕ್ಕೆ ಸಾರ್ವಜನಿಕರ ಮನವಿ
2004ರ ಬಳಿಕ ಮತ್ತೆ ಬೆಳ್ಳಾರೆಯಲ್ಲಿ ಅಮರ ಕ್ರಾಂತಿಯನ್ನು ನೆನಪಿಸುವ ಸ್ಮಾರಕ ನಿರ್ಮಾಣದ ಕೂಗು ಕೇಳಿ ಬಂದಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ 1837ರ ಹುತಾತ್ಮರಿಗೆ ಇದುವರೆಗೆ ಸರಿಯಾದ ಸ್ಮಾರಕ ನಿರ್ಮಾಣವಾಗಿಲ್ಲ. ಇವರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಬೆಳ್ಳಾರೆ ಕೋಟೆಯಲ್ಲಿ ಒಂದು ಅಮರ ಸುಳ್ಯ ಸ್ವಾತಂತ್ರ್ಯ ಭವನ ನಿರ್ಮಾಣವಾಗಬೇಕು. ದೇಶಭಕ್ತರ ಬಗ್ಗೆ ತಿಳಿಸುವ ಕೃತಿಗಳು ಓದುಗರಿಗೆ ಸಿಗುವಂತಾಗಲು ಗ್ರಂಥಾಲಯ ನಿರ್ಮಾಣವಾಗಬೇಕೆಂದು ಬೆಳ್ಳಾರೆ ಮತ್ತು ಸುಳ್ಯದ ಜನ ಬಯಸುತ್ತಿದ್ದಾರೆ. ಈ ಬಗ್ಗೆ ಸುಳ್ಯ ಶಾಸಕ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವ ಪ್ರಯತ್ನ ನಡೆಯುತ್ತಿದೆ. ಬೆಳ್ಳಾರೆಯಲ್ಲಿ ಆ. 25ರಂದು ಬೃಹತ್ ಸಭೆಯೊಂದನ್ನು ನಡೆಸಿ ಮುಂದಿನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ 13 ದಿನಗಳ ಬಳಿಕ ತಲಶ್ಯೇರಿ ಮತ್ತು ಮುಂಬಯಿಯಿಂದ ಆಗಮಿಸಿದ ಬ್ರಿಟೀಷರ ಬೃಹತ್ ಸೇನೆಯೆದುರು ರೈತ ದಂಡು ಸೋತಿತು. ಬ್ರಿಟಿಷರು ದಂಗೆಯ ನಾಯಕರನ್ನು ಸೆರೆ ಹಿಡಿದು ಸಾರ್ವಜನಿಕ ವಾಗಿ ಗಲ್ಲಿಗೇರಿಸಿ ಹೆಣಗಳನ್ನು ಕಾಗೆ- ಹದ್ದುಗಳಿಗೆ ಆಹಾರವಾಗಲು ಬಿಟ್ಟಿದ್ದರು. ವಿ.ಎ. ಕಚೇರಿ ಸ್ಥಳಾಂತರ
ಬೆಳ್ಳಾರೆಯ ಕೋಟೆಯು ಬ್ರಿಟಿಷರ ಆಡಳಿತ ಕೇಂದ್ರವಾಗಿತ್ತು. ಇದನ್ನು ನೆನಪಿಸುವ ಕಟ್ಟಡ ಈಗಲೂ ಇಲ್ಲಿದೆ. ಬಂಗ್ಲೆಗುಡ್ಡೆಯ ಈ ಕಟ್ಟಡದ ಮೇಲೆ ಅಂದರೆ ಬ್ರಟಿಷರ ಟ್ರೆಜರಿ ಮೇಲೆ ಅಮರ ಸುಳ್ಯ ರೈತರ ದಾಳಿಯಾಗಿತ್ತು. ಈ ಕಟ್ಟಡದಲ್ಲಿ ಕಳೆದ ಕೆಲವು ತಿಂಗಳವರೆಗೂ ಬೆಳ್ಳಾರೆೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿ.ಎ. ಕಚೇರಿ ಕಾರ್ಯಾಚರಿಸುತ್ತಿತ್ತು.
ಈ ಕಚೇರಿಗೆ ಕಾಲಿಟ್ಟಾಗಲೆಲ್ಲಾ ಇಲ್ಲಿನ ನಿವಾಸಿಗಳಿಗೆ ಅಮರ ಕ್ರಾಂತಿಯ ನೆನಪಾಗುತ್ತಿತ್ತು. ಆದರೆ ಶಿಥಿಲಾವಸ್ಥೆಯಲ್ಲಿದ್ದ ವಿ.ಎ. ಕಚೇರಿಯನ್ನು ಈಗ ಸ್ಥಳಾಂತರಿಸಲಾಗಿದೆ. ಇದರಿಂದ ಬಂಗ್ಲೆಗುಡ್ಡೆಯ ಅಮರ ಕ್ರಾಂತಿಯ ಇತಿಹಾಸದ ನೆನಪು ಮತ್ತೆ ಕ್ಷೀಣಿಸಿದಂತಾಗಿದೆ.
ಭಾರತದ ಸುವರ್ಣ ಸ್ವಾತಂತ್ರ್ಯೋತ್ಸವದ ಸಂದರ್ಭ ಸುಳ್ಯದಲ್ಲಿನ ಎಸ್. ದೇವಿಪ್ರಸಾದ ಸಂಪಾಜೆ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ಅಮರ ಕ್ರಾಂತಿ ಉತ್ಸವ ಸಮಿತಿ, ಸಮರ ಸುಳ್ಯ ಬಂಡಾಯದ ನೈಜಕತೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಾಲ್ನಡಿಗೆ ಜಾಥಾ ಆರಂಭಿಸಿ ಅಮರ ಸುಳ್ಯದ ಕ್ರಾಂತಿವೀರರು ಎನ್ನುವ ಡಾ| ಬಿ. ಪ್ರಭಾಕರ ಶಿಶಿಲ ಅವರ ಬೀದಿ ನಾಟಕವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ ಬೆಳ್ಳಾರೆಯಿಂದ ಮಂಗಳೂರಿನ ಬಾವುಟಗುಡ್ಡೆಯವರೆಗೆ ತಲುಪಿ ಅಲ್ಲಿ ಕೊಡಗು ಅರಸನ ವಿಜಯ ಧ್ವಜ ಹಾರಿಸಿದ್ದರು. 2004ರಲ್ಲಿ ಬೆಳ್ಳಾರೆಯಲ್ಲೂ ಐತಿಹಾಸಿಕ ಕೋಟೆ ಸಮಿತಿ ಬೃಹತ್ ಸಮಾವೇಶ ಮಾಡಿ ಬೆಳ್ಳಾರೆ ಕೋಟೆ ಪ್ರದೇಶದಲ್ಲಿ ಶಾಶ್ವತ ಸ್ಮಾರಕ ಮಾಡುವ ಪ್ರತಿಜ್ಞೆ ಮಾಡಿದ್ದರು.
2004ರ ಬಳಿಕ ಮತ್ತೆ ಬೆಳ್ಳಾರೆಯಲ್ಲಿ ಅಮರ ಕ್ರಾಂತಿಯನ್ನು ನೆನಪಿಸುವ ಸ್ಮಾರಕ ನಿರ್ಮಾಣದ ಕೂಗು ಕೇಳಿ ಬಂದಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ 1837ರ ಹುತಾತ್ಮರಿಗೆ ಇದುವರೆಗೆ ಸರಿಯಾದ ಸ್ಮಾರಕ ನಿರ್ಮಾಣವಾಗಿಲ್ಲ. ಇವರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಬೆಳ್ಳಾರೆ ಕೋಟೆಯಲ್ಲಿ ಒಂದು ಅಮರ ಸುಳ್ಯ ಸ್ವಾತಂತ್ರ್ಯ ಭವನ ನಿರ್ಮಾಣವಾಗಬೇಕು. ದೇಶಭಕ್ತರ ಬಗ್ಗೆ ತಿಳಿಸುವ ಕೃತಿಗಳು ಓದುಗರಿಗೆ ಸಿಗುವಂತಾಗಲು ಗ್ರಂಥಾಲಯ ನಿರ್ಮಾಣವಾಗಬೇಕೆಂದು ಬೆಳ್ಳಾರೆ ಮತ್ತು ಸುಳ್ಯದ ಜನ ಬಯಸುತ್ತಿದ್ದಾರೆ. ಈ ಬಗ್ಗೆ ಸುಳ್ಯ ಶಾಸಕ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವ ಪ್ರಯತ್ನ ನಡೆಯುತ್ತಿದೆ. ಬೆಳ್ಳಾರೆಯಲ್ಲಿ ಆ. 25ರಂದು ಬೃಹತ್ ಸಭೆಯೊಂದನ್ನು ನಡೆಸಿ ಮುಂದಿನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ 13 ದಿನಗಳ ಬಳಿಕ ತಲಶ್ಯೇರಿ ಮತ್ತು ಮುಂಬಯಿಯಿಂದ ಆಗಮಿಸಿದ ಬ್ರಿಟೀಷರ ಬೃಹತ್ ಸೇನೆಯೆದುರು ರೈತ ದಂಡು ಸೋತಿತು. ಬ್ರಿಟಿಷರು ದಂಗೆಯ ನಾಯಕರನ್ನು ಸೆರೆ ಹಿಡಿದು ಸಾರ್ವಜನಿಕ ವಾಗಿ ಗಲ್ಲಿಗೇರಿಸಿ ಹೆಣಗಳನ್ನು ಕಾಗೆ- ಹದ್ದುಗಳಿಗೆ ಆಹಾರವಾಗಲು ಬಿಟ್ಟಿದ್ದರು. ವಿ.ಎ. ಕಚೇರಿ ಸ್ಥಳಾಂತರ
ಬೆಳ್ಳಾರೆಯ ಕೋಟೆಯು ಬ್ರಿಟಿಷರ ಆಡಳಿತ ಕೇಂದ್ರವಾಗಿತ್ತು. ಇದನ್ನು ನೆನಪಿಸುವ ಕಟ್ಟಡ ಈಗಲೂ ಇಲ್ಲಿದೆ. ಬಂಗ್ಲೆಗುಡ್ಡೆಯ ಈ ಕಟ್ಟಡದ ಮೇಲೆ ಅಂದರೆ ಬ್ರಟಿಷರ ಟ್ರೆಜರಿ ಮೇಲೆ ಅಮರ ಸುಳ್ಯ ರೈತರ ದಾಳಿಯಾಗಿತ್ತು. ಈ ಕಟ್ಟಡದಲ್ಲಿ ಕಳೆದ ಕೆಲವು ತಿಂಗಳವರೆಗೂ ಬೆಳ್ಳಾರೆೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿ.ಎ. ಕಚೇರಿ ಕಾರ್ಯಾಚರಿಸುತ್ತಿತ್ತು.
Related Articles
Advertisement
ಸ್ಮಾರಕ ರಚನೆಯ ಪ್ರತಿಜ್ಞೆಭಾರತದ ಸುವರ್ಣ ಸ್ವಾತಂತ್ರ್ಯೋತ್ಸವದ ಸಂದರ್ಭ ಸುಳ್ಯದಲ್ಲಿನ ಎಸ್. ದೇವಿಪ್ರಸಾದ ಸಂಪಾಜೆ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ಅಮರ ಕ್ರಾಂತಿ ಉತ್ಸವ ಸಮಿತಿ, ಸಮರ ಸುಳ್ಯ ಬಂಡಾಯದ ನೈಜಕತೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕಾಲ್ನಡಿಗೆ ಜಾಥಾ ಆರಂಭಿಸಿ ಅಮರ ಸುಳ್ಯದ ಕ್ರಾಂತಿವೀರರು ಎನ್ನುವ ಡಾ| ಬಿ. ಪ್ರಭಾಕರ ಶಿಶಿಲ ಅವರ ಬೀದಿ ನಾಟಕವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ ಬೆಳ್ಳಾರೆಯಿಂದ ಮಂಗಳೂರಿನ ಬಾವುಟಗುಡ್ಡೆಯವರೆಗೆ ತಲುಪಿ ಅಲ್ಲಿ ಕೊಡಗು ಅರಸನ ವಿಜಯ ಧ್ವಜ ಹಾರಿಸಿದ್ದರು. 2004ರಲ್ಲಿ ಬೆಳ್ಳಾರೆಯಲ್ಲೂ ಐತಿಹಾಸಿಕ ಕೋಟೆ ಸಮಿತಿ ಬೃಹತ್ ಸಮಾವೇಶ ಮಾಡಿ ಬೆಳ್ಳಾರೆ ಕೋಟೆ ಪ್ರದೇಶದಲ್ಲಿ ಶಾಶ್ವತ ಸ್ಮಾರಕ ಮಾಡುವ ಪ್ರತಿಜ್ಞೆ ಮಾಡಿದ್ದರು.
ಇತಿಹಾಸ ಮರೆಯಾಗದಿರಲಿ
1837ರ ರೈತ ಹುತಾತ್ಮರ ಸ್ಮಾರಕವೊಂದನ್ನು ಆದಷ್ಟು ಶೀಘ್ರ ನಿರ್ಮಿಸಿ ಸರಕಾರದ ಅನುದಾನ ಮತ್ತು ಸಾರ್ವಜನಿಕರ ದೇಣಿಗೆಯಿಂದ ಈ ಭವನ ಅತೀ ಶೀಘ್ರದಲ್ಲಿ ತಲೆ ಎತ್ತಿ ನಿಂತು ಸುಳ್ಯ ಸ್ವಾತಂತ್ರ್ಯ ಹೋರಾಟದ ಕತೆಯನ್ನು ಅನಂತ ಕಾಲ ಜನರಿಗೆ ತಿಳಿಯಪಡಿಸುವಂತಾಗಬೇಕು. ಅದಕ್ಕೆ ನಾವೆಲ್ಲರೂ ಒಗ್ಗೂಡಿ ಸ್ವಾತಂತ್ರ್ಯ ಸದನ ನಿರ್ಮಿಸಿ ಹುತಾತ್ಮರಿಗೆ ಗೌರವ ಸಲ್ಲಿಸಬೇಕಿದೆ. – ಕೊರಗಪ್ಪ ನಾಯ್ಕ ಕುರುಂಬುಡೇಲು, ಅಧ್ಯಕ್ಷರು, ಸ್ನೇಹಿತರ ಕಲಾ ಸಂಘ, ಬೆಳ್ಳಾರೆ
ಸ್ವಾತಂತ್ರ್ಯ ಸೌಧ ತಲೆ ಎತ್ತಲಿ
ಉಮೇಶ್ ಮಣಿಕ್ಕಾರಡಾ| ಕುರುಂಜಿ ವೆಂಕಟ್ರಮಣ ಗೌಡರ ಶೈಕ್ಷಣಿಕ ಕ್ರಾಂತಿಯಿಂದಾಗಿ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದು ಕೊಂಡ ಸುಳ್ಯ ತಾಲೂಕಿಗೆ ಒಂದೇ ಒಂದು ಐತಿಹಾಸಿಕ ಸ್ಮಾರಕವಿಲ್ಲ. ಸುಳ್ಯಕ್ಕೊಂದು ಇತಿಹಾಸ ಇತ್ತು ಎನ್ನುವುದು ಮುಂದಿನ ಪೀಳಿಗೆಗೆ ಗೊತ್ತಾಗುವುದು ಹೇಗೆ? ಅದಕ್ಕೆ ಬೆಳ್ಳಾರೆ ಗುಡ್ಡೆಯಲ್ಲಿ ಸುಳ್ಯ ತಾಲೂಕಿನ ಸಮಸ್ತ ಜನರ ಅಭಿಮಾನದ ಸಂಕೇತವಾಗಿ ಅಮರ ಸುಳ್ಯ ಸ್ವಾತಂತ್ರ್ಯ ಸೌಧ ಎದ್ದು ನಿಲ್ಲಬೇಕು. ಅದರಲ್ಲಿ ಅದ್ಭುತ ಮ್ಯೂಸಿಯಂ ಮತ್ತು ಗ್ರಂಥಾಲಯವಿರಬೇಕು.
– ಡಾ| ಪ್ರಭಾಕರ ಶಿಶಿಲ, ಹಿರಿಯ ವಿದ್ವಾಂಸ
– ಡಾ| ಪ್ರಭಾಕರ ಶಿಶಿಲ, ಹಿರಿಯ ವಿದ್ವಾಂಸ