Advertisement

ಸೀಮಿತ ವಿದೇಶಿಗರಿಗೆ ಮಾತ್ರ ಭಾರತ ಭೇಟಿಗೆ ಅನುಮತಿ

03:20 AM Jun 14, 2020 | Sriram |

ಹೊಸದಿಲ್ಲಿ : ಕೋವಿಡ್-19 ಹಿನ್ನೆಲೆಯಲ್ಲಿ ವಿದೇಶಿಯರು ಭಾರತಕ್ಕೆ ಆಗಮಿಸುವುದಕ್ಕೆ ನಿರ್ಬಂಧ ವಿಧಿಸಿದ್ದ ಕೇಂದ್ರ ಸರಕಾರ, ಈಗ ಕೆಲವು ವರ್ಗದ ವಿದೇಶಿಯರಿಗೆ ಭಾರತಕ್ಕೆ ಆಗಮಿಸುವುದಕ್ಕೆ ಅನುಮತಿ ನೀಡಿದೆ.

Advertisement

ವಿದೇಶದಲ್ಲಿರುವ ಅಪ್ರಾಪ್ತ ಮಕ್ಕಳ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕ ಅಥವಾ ಸಾಗರೋತ್ತರ ಭಾರತೀಯ ರಾಗಿದ್ದರೆ, ಭಾರತದ ವ್ಯಕ್ತಿಯನ್ನು ಮದುವೆ ಯಾದ ವಿದೇಶಿಯರು, ಭಾರತದ ಪಾಸ್‌ಪೋರ್ಟ್‌ ಹೊಂದಿರುವ ಅಥವಾ ಸಾಗರೋತ್ತರ ಭಾರತೀಯರಾಗಿರುವ ಅಪ್ರಾಪ್ತ ಮಕ್ಕಳ ವಿದೇಶಿ ಪೋಷಕರು ಸಿಂಗಲ್‌ ಪೇರೆಂಟ್‌ ಆಗಿದ್ದರೆ ಅಂತವರಿಗೆ ಭಾರತಕ್ಕೆ ಆಗಮಿಸಲು ಅನುಮತಿ ನೀಡಲಾಗಿದೆ. ಅದೇ ರೀತಿ, ವಿದೇಶದ ವಿದ್ಯಾರ್ಥಿಯಾಗಿದ್ದು ಅವರ ಪೋಷಕರಲ್ಲಿ ಒಬ್ಬರಾದರೂ ಭಾರತೀಯರಾಗಿದ್ದರೆ ಅಥವಾ ಸಾಗರೋತ್ತರ ಭಾರತೀಯ ಕಾರ್ಡ್‌ (ಒಸಿಐ) ಹೊಂದಿದ್ದರೆ ಅಂತವರಿಗೆ ಭಾರತಕ್ಕೆ ಆಗಮಿಸಲು ಅವಕಾಶವಿದೆ.

ಇನ್ನು, ವಿದೇಶಿ ರಾಜತಾಂತ್ರಿಕರ ಅವಲಂಬಿತ ಕುಟುಂಬ ಸದಸ್ಯರಿಗೂ ಭಾರತಕ್ಕೆ ಆಗಮಿಸಲು ಅವಕಾಶ ನೀಡ ಲಾಗಿದೆ. ಹಾಗೆಯೇ, ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆಗಳು, ರಾಯಭಾರ ಕಚೇರಿಗಳು ಅಥವಾ ಭಾರತದಲ್ಲಿ ಮಾನ್ಯತೆ ಪಡೆದ ಅಂತಾರಾಷ್ಟ್ರಿಯ ಸಂಸ್ಥೆಗಳ ಅಧಿಕೃತ ಸೇವಾ ಪಾಸ್‌ಪೋರ್ಟ್‌ ಹೊಂದಿರುವ ಸೇವಾ ಸಿಬ್ಬಂದಿಗಳು ಈಗ ಭಾರತಕ್ಕೆ ಬರಬಹುದು.

ಭಾರತಕ್ಕೆ ಬರಲು ಇಚ್ಛಿಸುವ ಈ ವರ್ಗದ ವಿದೇಶಿಯರು ಭಾರತೀಯ ರಾಯಭಾರ ಕಚೇರಿಯಿಂದ ಹೊಸ ವೀಸಾ ಪಡೆದುಕೊಳ್ಳಬೇಕು. ವಿದೇಶದಲ್ಲಿರುವ ಭಾರತೀಯ ರಾಯ ಭಾರ ಕಚೇರಿ ನೀಡುವ ಸೂಕ್ತ ವರ್ಗದ ದೀರ್ಘಾವಧಿಯ ಬಹುಪ್ರವೇಶ ವೀಸಾವನ್ನು ಹೊಂದಿರುವ ವಿದೇಶಿ ಪ್ರಜೆಗಳು ವೀಸಾವನ್ನು ಭಾರತೀಯ ರಾಜ ತಾಂತ್ರಿಕ ಕೇಂದ್ರಗಳಿಂದ ಮರು ಮೌಲ್ಯ ಮಾಪನ ಮಾಡಿಸಿಕೊಂಡು ಬರ ಬೇಕಾಗು ತ್ತದೆ. ಇವರ ಬಳಿ ಈಗಾಗಲೇ ಎಲೆಕ್ಟ್ರಾನಿಕ್‌ ವೀಸಾಗಳಿದ್ದರೆ, ಅದರ ಮೂಲಕ ಬರಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next