Advertisement

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ

05:00 PM May 06, 2018 | |

ಮಾಸ್ತಿ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ, ಆಗೊಮ್ಮೆ ಈಗೊಮ್ಮೆ ಬರುವ ಜೆಡಿಎಸ್‌
ಅನ್ನು ಮೂಲೆ ಗುಂಪು ಮಾಡಬೇಕಾಗಿದೆ. ಬಿಜೆಪಿಯಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಹೇಳಿದರು.

Advertisement

ಮಾಸ್ತಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ ಅವರ ಪರ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದ ನಂತರ, ಹೋಬಳಿಯ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ದುಡುವನಹಳ್ಳಿ, ಬೈಪನಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಮಾಲೂರಿನಲ್ಲಿ ಕೃಷ್ಣಯ್ಯಶೆಟ್ಟಿ ಗೆಲ್ಲಲೇಬೇಕು. ಆಗ ಮಾತ್ರ ರೈತರಿಗೆ, ಬಡವರಿಗೆ, ದೀನದಲಿತರಿಗೆ ಅನುಕೂಲವಾಗುತ್ತದೆ. ಕೃಷ್ಣಯ್ಯಶೆಟ್ಟರನ್ನು ಗೆಲ್ಲಿಸಲು ಪ್ರತಿಯೊಬ್ಬರೂ ಪಣ ತೊಡಬೇಕಾಗಿದೆ ಎಂದರು. ಕಾಂಗ್ರೆಸ್‌ನವರು ರೈತರಿಗೆ, ಬಡವರಿಗೆ, ದೀನದಲಿತರಿಗೆ ಅನ್ಯಾಯ ಮಾಡುತ್ತಾ ಮತ ಬ್ಯಾಂಕ್‌ ಮಾಡಿಕೊಂಡು, ಜನರನ್ನು ಅಭಿವೃದ್ಧಿಪಡಿಸದೇ ಯತಾಸ್ಥಿತಿಲ್ಲೇ ಇರಿಸಿದ್ದಾರೆ. ಇದಕ್ಕೆ ಸಂಸದ ಕೆ.ಎಚ್‌. ಮುನಿಯಪ್ಪ ಸಾಕ್ಷಿಯಾಗಿದ್ದಾರೆ ಎಂದು ದೂರಿದರು.

ಬಡವರ ಸ್ಥಿತಿ ಬದಲಾಣೆ: ಮಾಜಿ ಶಾಸಕ ಎ.ನಾಗರಾಜು ಮಾತನಾಡಿ, ಪ್ರಸ್ತುತ ವಿಧಾನಸಭೆ ಚುನಾವಣೆ ಬಡವರ ಸ್ಥಿತಿ
ಬದಲಾಣೆಯ ಚುನಾವಣೆಯಾಗಲಿದೆ. ಕಳೆದ 5 ವರ್ಷಗಳಿಂದ ಸಾಮಾಜಿಕ ನ್ಯಾಯ ಬಹಳ ದೂರ ಉಳಿದಿದ್ದು ದುರಂತ
ಸಂಗತಿ. ಬಡವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಎಸ್‌.ಎನ್‌. ಕೃಷ್ಣಯ್ಯಶೆಟ್ಟಿ ಶಾಸಕರಾಗಿ ಹಾಗೂ ಯಡಿಯೂರಪ್ಪಮತ್ತೆ ಮುಖ್ಯಮಂತ್ರಿ ಆದರೆ ಮಾತ್ರ ಮಾಲೂರು ತಾಲೂಕು ಮತ್ತು ರಾಜ್ಯ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ ಮತ್ತಿತರ ಮುಖಂಡರು ಮಾತನಾಡಿದರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌. ಪ್ರಭಾಕರ್‌, ಜಿಪಂ ಮಾಜಿ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ, ತಬಲ ಅಪ್ಪಿ, ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಮಾಜಿ ಸದಸ್ಯ ಕೆಂಬೋಡಿ ನಾರಾಯಣಪ್ಪ, ತೊಳಕನಹಳ್ಳಿ ರಾಮಸ್ವಾಮಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮದ ಪಕ್ಷದ ಬೆಂಬಲಿಗರು ಮತ್ತಿತರರು ಹಾಜರಿದ್ದರು. 

Advertisement

ರಾಜ್ಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಿಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಇಂದಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂ ರಪ್ಪರನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಬಿಎಸ್‌ವೈ ಮತ್ತೆ ಸಿಎಂ ಆದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ.
ಡಿ.ಎಸ್‌.ವೀರಯ್ಯ, ಮೇಲ್ಮನೆ ಸದಸ್ಯರು 

Advertisement

Udayavani is now on Telegram. Click here to join our channel and stay updated with the latest news.

Next