Advertisement

ಪ.ಬಂಗಾಳದಲ್ಲಿ ಬದಲಾವಣೆ ತರಲು ಬಿಜೆಪಿಯಿಂದ ಮಾತ್ರ ಸಾಧ್ಯ: ಮಮತಾ ವಿರುದ್ಧ ಮೋದಿ ವಾಗ್ದಾಳಿ

06:57 PM Feb 07, 2021 | Team Udayavani |

ಪಶ್ಚಿಮಬಂಗಾಳ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರ ಕುತಂತ್ರ ರಾಜಕಾರಣ, ಭ್ರಷ್ಟಚಾರದಲ್ಲಿ ಮಾತ್ರ ತೊಡಗಿದ್ದಲ್ಲದೆ, ಪೊಲೀಸ್ ವ್ಯವಸ್ಥೆಯನ್ನು ಕೂಡ ರಾಜಕೀಯಗೊಳಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

Advertisement

ಹಲ್ಡಿಯಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರಾದರೂ ಭಾರತ್ ಮಾತಾಕೀ ಜೈ ಎಂದರೇ ಮಮತಾ ಬ್ಯಾನರ್ಜಿ ಸಿಡಿದೇಳುತ್ತಾರೆ.  ಆದರೇ ಯಾರಾದರೂ ದೇಶವಿರೋಧಿ ಘೋಷಣೆ ಕೂಗುವಾಗ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಯೋಗ, ಭಾರತದ ಚಹಾ ಮತ್ತು ಇತರೆ ವಸ್ತುಗಳ ಹೆಸರನ್ನು ಕೆಡಿಸಲು ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆಸಲಾಗುತ್ತಿದೆ. ಆದರೂ ‘ಮಮತಾ ದೀದಿ’ ಈ ಕುರಿತು ಮಾತನಾಡುತ್ತಿಲ್ಲ.  ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಹಿಮಪಾತ; ಪ್ರವಾಹ ಪೀಡಿತರ ರಕ್ಷಣೆಗೆ ಕೇಂದ್ರ ಸಿದ್ಧ: ಅಮಿತ್ ಶಾ

ಮಾ, ಮಾಟಿ, ಮಾನುಷ್ (ತಾಯಿ, ಭೂಮಿ, ಜನರು)  ಎಂಬ ಟಿಎಂಸಿ ಪಕ್ಷದ  ಘೋಷಣೆ ಕೂಗುವವರು ಭಾರತ್ ಮಾತಾ ಕುರಿತು ಧ್ವನಿಯೆತ್ತುವುದಿಲ್ಲ. ಇದರಿಂದಾಗಿಯೇ ಪಶ್ಚಿಮಬಂಗಾಳದಲ್ಲಿ ಕುತಂತ್ರ ರಾಜಕಾರಣ, ಭ್ರಷ್ಟಚಾರ ಮುಂತಾದವು ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.

ಕೇವಲ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಆಡಳಿತ ದುರಾವಸ್ಥೆಯನ್ನು ಆ ಮೂಲಕ ಕಿತ್ತೊಗೆಯಬಹುದು  ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಸ್ಪೋಟ: 10 ಮೃತದೇಹ ಪತ್ತೆ, 150 ಮಂದಿ ಕಣ್ಮರೆ, 16 ಜನರ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next