Advertisement

ಸ್ಟಾರ್ ಆಟಗಾರರಿಲ್ಲದೇ ಈ ಒಬ್ಬ ನಾಯಕ ಮಾತ್ರ ಟ್ರೋಫಿ ಗೆಲ್ಲಬಲ್ಲ: ಯೂಸುಫ್ ಪಠಾಣ್

11:42 AM May 01, 2020 | keerthan |

ಮುಂಬೈ: ಸ್ಪೋಟಕ ಬ್ಯಾಟ್ಸಮನ್ ಯೂಸುಫ್ ಪಠಾಣ್ ಟೀಂ ಇಂಡಿಯಾದಲ್ಲಿ ಹೆಚ್ಚು ವರ್ಷ ನೆಲೆಯೂರದಿದ್ದರೂ ಐಪಿಎಲ್ ನಲ್ಲಿ ಯಶಸ್ಸು ಪಡೆದಿದ್ದಾರೆ. ಸಹೋದರ ಇರ್ಫಾನ್ ಪಠಾಣ್ ಟೀಂ ಇಂಡಿಯಾದಲ್ಲಿ ಹೆಚ್ಚು ಯಶಸ್ಸು ಪಡೆದಿದ್ದರೆ, ಯೂಸುಫ್ ಐಪಿಎಲ್ ನಲ್ಲಿ ಇರ್ಫಾನ್ ಗಿಂತ ಹೆಚ್ಚಿನ ಕೀರ್ತಿ ಪಡೆದಿದ್ದರು.

Advertisement

ಅದರಲ್ಲೂ ಐಪಿಎಲ್ ಆರಂಭಿಕ ವರ್ಷಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದ ಯೂಸುಫ್ ತನ್ನ ಸ್ಪೋಟಕ ಬ್ಯಾಟಿಂಗ್ ನಿಂದ ಮನೆ ಮಾತಾಗಿದ್ದರು. 2010ರಲ್ಲಿ ಕೇವಲ 37 ಎಸೆತಗಳಲ್ಲಿ ಬಾರಿಸಿದ ಶತಕವನ್ನು ಈಗಲೂ ಅವರ ಅಭಿಮಾನಿಗಳು ಮರೆತಿಲ್ಲ.

ಸದ್ಯ ಇನ್ಸ್ಟಾ ಗ್ರಾಮ್ ಲೈವ್ ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕರಾಗಿದ್ದ ಶೇನ್ ವಾರ್ನ್ ಬಗ್ಗೆ ಮಾತನಾಡಿದ ಯೂಸುಫ್, ನಾನು ವಾರ್ನ್ ನಾಯಕತ್ವದಲ್ಲಿ ಮೂರು ವರ್ಷ ಮಾತ್ರ ಆಡಿದ್ದೆ. ಬ್ಯಾಟ್ಸಮನ್ ನನ್ನು ಹೇಗೆ ಔಟ್ ಮಾಡಬೇಕೆಂದು ಪಂದ್ಯಕ್ಕೂ ಮೊದಲೇ ಹೇಳಿಕೊಡುತ್ತಿದ್ದರು. ಅದು ಸಫಲವೂ ಆಗುತ್ತಿತ್ತು ಎಂದಿದ್ದಾರೆ.

ಮೂರು ವರ್ಷಕ್ಕಿಂತ ಹೆಚ್ಚು ಅವರ ಜೊತೆ ಆಡುವ ಅವಕಾಶ ಸಿಗಲಿಲ್ಲ. ಯಾವುದೇ ದೊಡ್ಡ ಸ್ಟಾರ್ ಆಟಗಾರರಿಲ್ಲದೆ, ದೇಶಿಯ ಆಟಗಾರರನ್ನು ಸೇರಿಸಿ ಅವರು ಕಪ್ ಗೆದ್ದಿದ್ದರು. ಬಹುಷಃ ಇದು ಅವರಿಗೆ ಮಾತ್ರ ಸಾಧ್ಯ ಎಂದು ಯೂಸುಫ್ ಹೇಳಿದ್ದಾರೆ.  ವಾರ್ನ್ ಜೊತೆಗೆ ಗಂಭೀರ್ ಕೂಡಾ ನನ್ನ ನೆಚ್ಚಿನ ನಾಯಕ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next