Advertisement

ವಿಶ್ವದ ಉನ್ನತ 400 ವಿವಿಗಳ ಪಟ್ಟಿಯಲ್ಲಿ ಭಾರತದ ಕೇವಲ 6 ವಿವಿಗಳು

05:29 PM Mar 02, 2018 | udayavani editorial |

ಹೊಸದಿಲ್ಲಿ : 2018ರ ಕ್ಯೂ ಎಸ್‌ ವರ್ಲ್ಡ್ ಯುನಿವರ್ಸಿಟೀಸ್‌ ರ್‍ಯಾಂಕಿಂಗ್‌ ಪ್ರಕಾರ 400 ಉನ್ನತ ವಿಶ್ವವಿದ್ಯಾಲಯಗಳ ಪೈಕಿ ಭಾರತದ ಕೇವಲ ಆರು ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. 

Advertisement

ಈ ಆರರಲ್ಲಿ ಐದು ವಿವಿಗಳು ಐಐಟಿ ಗಳಾಗಿವೆ. ಐಐಟಿ ಯೇತರವಾಗಿರುವ ಒಂದು ವಿಶ್ವವಿದ್ಯಾಲಯವು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸಯನ್ಸ್‌ (ಐಐಎಸ್‌ಸಿ) ಆಗಿದೆ. 

ಪಟ್ಟಿಯಲ್ಲಿ 172ನೇ ಸ್ಥಾನಿಯಾಗಿರುವ ಐಐಟಿ ದಿಲ್ಲಿ, ಆರು ಭಾರತೀಯ ವಿವಿಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಐಐಟಿ ದಿಲ್ಲಿ ಈ ಪಟ್ಟಿಯಲ್ಲಿ 185ನೇ ಸ್ಥಾನದಲ್ಲಿತ್ತು. ಈ ಬಾರಿ ಅದು 172ನೇ ಸ್ಥಾನಕೆ ಜಿಗಿಯುವ ಮೂಲಕ ಉತ್ತಮ ಪ್ರಗತಿಯನ್ನು ದಾಖಲಿಸಿದೆ. 

ಐಐಟಿ ದಿಲ್ಲಿ (172) ಬಳಿಕದ ಸ್ಥಾನದಲ್ಲಿರುವ ಉಳಿದ ಐದು ಭಾರತೀಯಗಳೆಂದರೆ ಐಐಟಿ ಬಾಂಬೆ (179),  ಐಐಎಸ್‌ಸಿ ಬೆಂಗಳೂರು (190), ಐಐಟಿ ಮದ್ರಾಸ್‌ (264), ಐಐಟಿ ಕಾನ್ಪುರ (293) ಮತ್ತು ಐಐಟಿ ಖರಗ್‌ಪುರ (308).

Advertisement

Udayavani is now on Telegram. Click here to join our channel and stay updated with the latest news.

Next