Advertisement

ಸಿನೆಮಾ ನೋಡಲು ಮಾರ್ಗಸೂಚಿ ರೆಡಿ; ಶೇ. 50 ಆಸನ, ಆಹಾರ ಪೂರೈಕೆ ಇಲ್ಲ, ಪ್ಯಾಕ್‌ಫುಡ್ ಓಕೆ

04:49 PM Oct 06, 2020 | Karthik A |

ಮಣಿಪಾಲ: ಕೋವಿಡ್‌ 19 ಅನ್ನು ತಡೆಗಟ್ಟಲು ಸರಕಾರ ಘೋಷಿಸಿದ ಲಾಕ್‌ಡೌನ್‌ ಬಹುತೇಕ ಅಂತ್ಯದತ್ತ ದಾಪುಗಾಲು ಇಡುತ್ತಿದೆ. ಇದೀಗ 7 ತಿಂಗಳ ಬಳಿಕ ಮಲ್ಟಿಪ್ಲೆಕ್ಸ್‌ ತೆರೆಯಲು ಸರಕಾರ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಬಿಡುಗಡೆ ಮಾಡಿದೆ.

Advertisement

ಕಂಟೈನ್‌ಮೆಂಟ್ ವಲಯವನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಅಕ್ಟೋಬರ್ 15ರಿಂದ ಶೇ. 50 ಸಾಮರ್ಥ್ಯವಿರುವ ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿನೆಮಾ ಹಾಲ್‌ಗಳನ್ನು ಪ್ರಾರಂಭಿಸಬಹುದಾಗಿದೆ. ಆದರೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಬ್ಬರು ಜನರ ನಡುವೆ ಒಂದು ಆಸನವನ್ನು ಖಾಲಿ ಇಡಬೇಕಾಗುತ್ತದೆ.

ಸಿನೆಮಾ ಆರಂಭದಲ್ಲಿ ಕೋವಿಡ್‌ ಜಾಗೃತಿಯನ್ನು ತೋರಿಸುವ ಚಿತ್ರವನ್ನು ಪ್ರದರ್ಶಿಸಬೇಕಾಗುತ್ತದೆ. ಪ್ರತಿ ಪ್ರದರ್ಶನದ ಅನಂತರ ಇಡೀ ಥಿಯೇಟರ್‌ ಅನ್ನು ಸ್ವಚ್ಛಗೊಳಿಸಲಾಗುತ್ತದೆ. ಮೊದಲಾದ ಹಲವು ಪ್ರಾಮುಖ್ಯ ಅಂಶಗಳನ್ನು ಸೇರಿಸಲಾಗಿದೆ. ಅವುಗಳಲ್ಲಿ ಏನೇನಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರವೇಶ ಪಡೆಯುವುದು ಹೇಗೆ?

  • ಸಿನೆಮಾ ನೋಡಲು ಟಿಕೇಟ್‌ ಪಡೆಯುವ ಮುನ್ನ ನಿಮ್ಮ ಸಂಪರ್ಕ ಪತ್ತೆಗಾಗಿ ಸಂಪರ್ಕ ಸಂಖ್ಯೆಯನ್ನು ಒದಗಿಸಬೇಕಾಗಿದೆ
  • ಪ್ರವೇಶಿಸುವ ಮುನ್ನ ಥರ್ಮಲ್‌ ತಪಾಸಣೆ ನಡೆಯಲಿದೆ.
  • ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಲೇಬೇಕಾಗಿದೆ.
  • ಥಿಯೇಟರ್‌ ಪ್ರವೇಶ ದ್ವಾರ ಮತ್ತು ಹೊರ ಹೋಗುವ ದಾರಿಗಳಲ್ಲಿ ಸ್ಯಾನಿಟೈಸರ್‌ ಅನ್ನು ಕಡ್ಡಾಯವಾಗಿ ಇಡಬೇಕು. ಇನ್ನು ಉಳಿದಂತೆ ಸಾಮಾನ್ಯ ಪ್ರದೇಶದಲ್ಲಿ ಇದನ್ನು ಇಡಬೇಕು. ಸಾಧ್ಯವಾದಷ್ಟು ಟಚ್ ಫ್ರೀ ಮೋಡ್‌ನಲ್ಲಿ ಈ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸಬೇಕು. (ಅಂದರೆ ಸೆನ್ಸಾರ್‌ ಅಥವ ಕಾಲಿನ ಸಹಾಯದಿಂದ ಪೆಡಲ್‌ ಮಾಡುವ ಕ್ರಮ ಇತ್ಯಾದಿ)
  • ಯಾವುದೇ ರೋಗ ಲಕ್ಷಣ ರಹಿತರು ಮಾತ್ರ ಪ್ರವೇಶಿಸಬೇಕಾಗಿದೆ.
  • ಸುರಕ್ಷತಾ ನಿಯಮಗಳನ್ನು ಯಾರು ಪಾಲಿಸಲು ಅನುಮತಿಸುವುದಿಲ್ಲ ಅಥವರ ಮೇಲೆ ಕಠಿನ ಕ್ರಮ ಕೈಗೊಳ್ಳಲು ಅನುಮತಿ ಇದೆ.
    ಆಸನ ವ್ಯವಸ್ಥೆ ಹೇಗಿರುತ್ತದೆ?
  • ಸಿನೆಮಾ ಹಾಲ್ ಶೇ. 50ಕ್ಕಿಂತ ಹೆಚ್ಚು ಆಕ್ಯುಪೆನ್ಸಿಯನ್ನು ಹೊಂದಿರುವುದಿಲ್ಲ. ಅಂದರೆ 300 ಜನರ ಸಾಮರ್ಥ್ಯದ ಹಾಲ್‌ ಆದರೆ ಕೇವಲ 150 ಜನರು ಮಾತ್ರ ಸಿನೆಮಾ ವೀಕ್ಷಿಸುವ ಅವಕಾಶ ಹೊಂದಲಿದ್ದಾರೆ.
  • ಆನ್‌ಲೈನ್‌ ನಲ್ಲಿ ಬುಕ್ಕಿಂಗ್‌ ಮಾಡುವವರು ಒಂದು ಆಸನವನ್ನು ಬಿಟ್ಟು ಬುಕ್‌ ಮಾಡಬೇಕಾಗುತ್ತದೆ.
  • ಉಳಿದ ಸೀಟುಗಳನ್ನು ಅಲಭ್ಯ ಎಂದು ನಮೂದಿಬೇಕಾಗುತ್ತದೆ.
  • ಸಾಮಾಜಿಕ ಅಂತರದ ಆಸನಗಳನ್ನು ಟೇಪ್ ಮಾಡಬೇಕಾಗುತ್ತದೆ ಅಥವಾ ಗುರುತು ಮಾಡಿ ಇಡಬೇಕಾಗುತ್ತದೆ.
  • ಒಬ್ಬ ವ್ಯಕ್ತಿಯು ಒಬ್ಬರ ಹಿಂದೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಮೊದಲ ಸಾಲಿನಲ್ಲಿನ ಟಿಕೇಟ್‌ ನಂಬರ್‌ ಎ 1 ಮತ್ತು ಎ3 ರಲ್ಲಿ ಕುಳಿತುಕೊಂಡರೆ, ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುವವರು ಬಿ 2 ಮತ್ತ ಬಿ 4 ನಲ್ಲಿ ಕುಳಿತುಕೊಳ್ಳಬೇಕು. ಇಲ್ಲಿ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವನು ಸಿ 1 ಮತ್ತು ಸಿ 3ರಲ್ಲಿ ಕುಳಿತುಕೊಳ್ಳಬಹುದು. ಸರಳವಾಗಿ ಹೇಳುವುದಾದರೆ ಖಾಲಿ ಆಸನಗಳ ಹಿಂದಿನ ಸೀಟುಗಳು ಬುಕ್ಕಿಂಗ್‌ಗೆ ಲಭ್ಯ.
Advertisement

ನೀವು ಸಿನೆಮಾ ಹಾಲ್ ಮತ್ತು ಮಲ್ಟಿಪ್ಲೆಕ್ಸ್ ಬದಲಾವಣೆಗಳು

  • ಪ್ಯಾಕ್ ಮಾಡಿದ ಆಹಾರವನ್ನು ಮಾತ್ರ ಒಳಗೆ ಅನುಮತಿಸಲಾಗುತ್ತದೆ. ಥೀಯೇಟರ್‌ ಹೊರಗೆ ಇದಕ್ಕಾಗಿ ಹೆಚ್ಚಿನ ಕೌಂಟರ್‌ಗಳನ್ನು ಇಡಬೇಕಾಗುತ್ತದೆ. ಆನ್‌ಲೈನ್ ಪಾವತಿಯನ್ನು ಪ್ರೋತ್ಸಾಹಿಸಬೇಕಾಗಿದೆ.
  • ಸಭಾಂಗಣದೊಳಗೆ ಆಹಾರ ಮತ್ತು ಪಾನೀಯಗಳ ವಿತರಣೆ ಕಂಡುಬರುವುದಿಲ್ಲ.
  • ಜನರು ಸರದಿಯಲ್ಲಿ ಮತ್ತು ಹೊರಗೆ ಹೋಗಲು ಅನುವಾಗುವಂತೆ ಇಂಟರ್ವಲ್‌ ಸಮಯವನ್ನು ಹೆಚ್ಚಿಸಬಹುದು.
  • ಪ್ರವೇಶ ಬಿಂದುಗಳು, ಆನ್‌ಲೈನ್ ಮಾರಾಟ ಕೇಂದ್ರಗಳು, ಲಾಬಿಗಳು ಮತ್ತು ವಾಶ್‌ರೂಮ್‌ಗಳಂತಹ ಪ್ರದೇಶಗಳಲ್ಲಿ ಜನರು ಸೋಂಕನ್ನು ತಡೆಗಟ್ಟುವ ಮಾರ್ಗಗಳನ್ನು ತಾವಾಗಿ ಪಾಲಿಸಬೇಕು.
  • ಎರಡು ಸಿನೆಮಾ ಪ್ರದರ್ಶನಗಳ ನಡುವಿನ ಸಮಯ ಬದಲಾಗುತ್ತದೆ.
  • ಸಿನೆಮಾ ಆರಂಭಗೊಳ್ಳಲು ನಿರ್ಧಿಷ್ಟ ಸಮಯವನ್ನು ಪಾಲಿಸಲಾಗುವುದಿಲ್ಲ. 10 ಗಂಟೆಗೆ ಒಂದು ಪ್ರದರ್ಶನ ಇದ್ದರೆ ಅದು ಆರಂಭವಾಗಲು 10.30 ಅನ್ನೂ ತೆಗೆದುಕೊಳ್ಳಬಹುದು. ಥಿಯೇಟರ್‌ ಒಳಗೆ ಜನರ ನೂಕು ನುಗ್ಗುಲು ಮತ್ತು ಅವಸರವನ್ನು ತಡೆಯಲು ಈ ಕ್ರಮದ ಮೊರೆ ಹೋಗಲಾಗಿದೆ.
  • ಪ್ರದರ್ಶನ ಕೊನೆ ಕಂಡ ಬಳಿಕ ಜನರನ್ನು ಕ್ಯೂನ ಪ್ರಕಾರ ತಮ್ಮ ಆಸನಗಳಿಂದ ಹೊರಗೆ ಕರೆದೊಯ್ಯಲಾಗುತ್ತದೆ ಇದರಿಂದ ಸಾಮಾಜಿಕ ಅಂತರ ಶೇ. 100 ಪಾಲನೆಯಾಗುತ್ತದೆ.
  • ಒಂದು ಪ್ರದರ್ಶನ ಮುಗಿದ ಬಳಿಕ ಕ್ರೀಡಾಂಗಣ ಸ್ವಚ್ಛವಾದ ಬಳಿಕವಷ್ಟೇ ಜನರು ಎರಡನೇ ಪ್ರದರ್ಶನಕ್ಕೆ ಬಂದು ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.

    ಸ್ಚಚ್ಛತೆಗೆ ಮೊದಲ ಪ್ರಾಶ್ತಸ್ತ್ಯ
  • ಪ್ರದರ್ಶನದ ಮೊದಲು ಮತ್ತು ಅನಂತರ, ಮಧ್ಯಂತರದ ಮೊದಲು ಮತ್ತು ನಂತರ, ಕೋವಿಡ್‌ ಜಾಗೃತಿಯ ಕಾರಣ 1 ನಿಮಿಷದ ಚಲನಚಿತ್ರವನ್ನು ತೋರಿಸಬೇಕಾಗುತ್ತದೆ.
  • ಸಭಾಂಗಣದ ಹೊರಗೆ ನೆಲದಲ್ಲಿ 6 ಅಡಿ ದೂರದಲ್ಲಿ ಗುರುತುಗಳನ್ನು ಇಡಬೇಕು.
  • ಎಸಿಯನ್ನು 24 ರಿಂದ 30 ಡಿಗ್ರಿಗಳಲ್ಲಿ ಇರಿಸಬೇಕು.
  • ಸಿನೆಮಾ ಹಾಲ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಹೆಚ್ಚಿನ ಕೌಂಟರ್‌ಗಳನ್ನು ತೆರೆಯಬೇಕಾಗುತ್ತದೆ.
  • ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆಯನ್ನು ಹೆಚ್ಚು ಮಾಡಬೇಕು.
  • ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಉತ್ತೇಜಿಸಲಾಗುತ್ತದೆ.
  • ಆಹಾರ ತ್ಯಾಜ್ಯ ಮತ್ತು ಪಾನೀಯಗಳನ್ನು ಸುರಕ್ಷತೆಯೊಂದಿಗೆ ವಿಲೇವಾರಿ ಮಾಡಬೇಕು.

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next