ಕುದೂರು(ರಾಮನಗರ): ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಶಾಲೆಯ ಸಂಸ್ಕೃತ ಮುಖ್ಯ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳು ಮತ್ತು ಸಿಬ್ಬಂದಿ ಯನ್ನು ಪ್ರವಾಸಕ್ಕೆ ವಿಮಾನದಲ್ಲಿ ಕರೆದೊಯ್ಯಲು ಮುಂದಾಗಿ ರುವುದು ವಿಶೇಷ.
Advertisement
ಮಾಗಡಿ ತಾಲೂಕಿನ ಕುದೂರು ಹೋಬಳಿಯ ಹರಳೂರು ಗ್ರಾಮದ ಶ್ರೀ ಸಿದ್ಧಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢ ಶಾಲೆಯ ಸಂಸ್ಕೃತ ಮುಖ್ಯ ಶಿಕ್ಷಕ, ತಾಲೂಕಿನ ಕಣನೂರು ಪಾಳ್ಯದ ರಾಜಣ್ಣ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 2.76 ಲಕ್ಷ ರೂ. ವ್ಯಯಿಸಿ ಶಾಲೆಯ 8, 9, 10ನೇ ತರಗತಿಯ 51 ವಿದ್ಯಾರ್ಥಿಗಳು ಮತ್ತು 8 ಜನ ಶಾಲಾ ಸಿಬ್ಬಂದಿ ಯನ್ನು ಮಹಾರಾಷ್ಟ್ರದ ಪೂನಾಗೆ ವಿಮಾನದಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ.
Related Articles
Advertisement
ಬರುವಾಗ ಬಸ್ನಲ್ಲಿ ಪ್ರಯಾಣ ಬೆಳೆಸಲಿದ್ದು ಇದಕ್ಕೆ 1.80 ಲಕ್ಷ ರೂ. ಖರ್ಚಾಗಲಿದೆ. ಈ ಹಣವನ್ನು ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ ಭರಿಸಲಿದ್ದಾರೆ. ಪ್ರವಾಸ ವೇಳೆ ಊಟ, ವಸತಿ, ಓಡಾಟಕ್ಕಾಗಿ ಶಾಲೆಯ ಮುಖ್ಯ ಶಿಕ್ಷಕ ಗುರುಮೂರ್ತಿ 50 ಸಾವಿರರೂ. ವ್ಯಯಿಸಲಿದ್ದಾರೆ. ರಾಜಣ್ಣ ಅವರು ಹಳ್ಳಿಗಾಡಿನ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ವಿಮಾನದಲ್ಲಿ ಕರೆದು ಕೊಂಡು ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮಕ್ಕಳಿಗೆ ಅವರು ಚೈತನ್ಯ ತುಂಬುತ್ತಿದ್ದಾರೆ.
● ಎಸ್.ಗುರುಮೂರ್ತಿ, ಮುಖ್ಯ ಶಿಕ್ಷಕ
ಶ್ರೀವೀರಭದ್ರೇಶ್ವರ ಪ್ರೌಢ ಶಾಲೆ *ಕೆ.ಎಸ್.ಮಂಜುನಾಥ್ ಕುದೂರು