Advertisement

ಜಂಬೂ ಸವಾರಿಗೆ 300 ಮಂದಿ ಮಾತ್ರ !

12:05 AM Oct 10, 2020 | mahesh |

ಬೆಂಗಳೂರು: ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಚಾಲನೆಗೆ 200 ಮಂದಿ, ಅರಮನೆ ಆವರಣದಲ್ಲಿನ ಜಂಬೂ ಸವಾರಿಗೆ 300 ಮಂದಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 50 ಮಂದಿ ಭಾಗಿ… ಇದು ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ದಸರೆಯ ಆಚರಣೆ ಸಂಬಂಧ ಡಾ| ಎಂ.ಕೆ. ಸುದರ್ಶನ್‌ ನೇತೃತ್ವದ ಸಮಿತಿಯು ರಾಜ್ಯ ಸರಕಾರಕ್ಕೆ ನೀಡಿರುವ ಶಿಫಾರಸುಗಳು.

Advertisement

ಸಾಂಸ್ಕೃತಿಕ ಕಾರ್ಯಕ್ರಮ ಭಾಗಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಿರುವ ಸಮಿತಿ, ಆನ್‌ಲೈನ್ನಲ್ಲಿ ದಸರೆ ನೋಡಲು ಅವಕಾಶ ಕಲ್ಪಿಸಬಹುದು ಎಂದಿದೆ.

ಮೈಸೂರಿನಲ್ಲಿ 40,133 ಪಾಸಿಟಿವ್‌ ಪ್ರಕರಣಗಳು ಮತ್ತು 7,123 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, 852 ಸಾವು ಸಂಭವಿಸಿದೆ. ಹೀಗಾಗಿ ಸಮಿತಿಯು ಜಿಲ್ಲಾಧಿಕಾರಿ ಜತೆ ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಮುಂತಾದ ಕಡೆ ಪರಿಶೀಲನೆ ನಡೆಸಿ ಶಿಫಾರಸು ಮಾಡಿದೆ.

ಅ. 17ರಿಂದ 24ರ ವರೆಗೆ ಅರಮನೆ ಮೈದಾನದ ಮುಂದೆ 2 ತಾಸು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. 50 ಜನ ವೀಕ್ಷಕರಿಗೆ ಅವಕಾಶ ಕೊಡಬೇಕು ಎಂದೂ ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next