Advertisement
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಥಮೆಟಿಕ್ ಸರ್ವೇ ಮೂಲಕ ಜಿಲ್ಲೆಯಲ್ಲಿ ಒಟ್ಟು 25 ಲಕ್ಷ ಮೆ. ಟನ್ ಮರಳು ಗುರುತಿಸಲಾಗಿತ್ತು. ಹಿಂದಿನ ಜಿಲ್ಲಾಡಳಿತ 8 ಲಕ್ಷ ಮೆ. ಟನ್ ಮರಳು ಗುರುತಿಸಿ ಕರಾವಳಿ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿತ್ತು. ಪಡುಕರೆ, ಉದ್ಯಾವರ ಮೊದಲಾದ ಕಡೆ 5 ಲಕ್ಷ ಮೆ. ಟನ್ ಮರಳು ತೆಗೆಯಲು ಅವಕಾಶ ನೀಡಿದೆ. ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಯುವುದರಿಂದ ಮರಳು ತೆಗೆಯಲು ಸಾಧ್ಯವಿಲ್ಲ ಎಂದರು.
ಸಾರ್ವಜನಿಕರಿಂದ ಯಾವುದೇ ರೀತಿಯ ದೂರು ಬಾರದಂತೆ ಕೆಲಸ ಮಾಡಲು ಪರವಾನಗಿದಾರರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರ ದೂರುಗಳಿದ್ದರೆ ಜಿಲ್ಲಾಧಿಕಾರಿಯವರನ್ನು ನೇರವಾಗಿ ಸಂಪರ್ಕಿಸಬಹುದು. ಮರಳು ಹೊರ ಜಿಲ್ಲೆಗೆ ಹೋಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
Related Articles
ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬೇಕಾದಷ್ಟು ಮರಳಿದೆ. 101 ಮಂದಿ ಸಾಂಪ್ರದಾಯಿಕ ಮರಳು ತೆಗೆಯುವವರಿದ್ದಾರೆ. ಆದರೆ ಸ್ಪಷ್ಟ ನಿಯಮಗಳಿಲ್ಲ. ಹೀಗಾಗಿ ಕರಾವಳಿಯ 3 ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ನಿಟ್ಟಿನಲ್ಲಿ ಗಣಿ ಸಚಿವರ ಕೋರಿಕೆಯಂತೆ 4 ಶಾಸಕರು ಗುಜರಾತ್‌ನಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಅಲ್ಲಿನ ಸಾಂಂಪ್ರದಾಯಿಕ ಮರಳುಗಾರಿಕೆ ಬಗ್ಗೆ ವರದಿ ಸಲ್ಲಿಸಲಿದ್ದೇವೆ ಎಂದು ಭಟ್ ತಿಳಿಸಿದರು.
Advertisement