Advertisement

ಆನ್‌ಲೈನ್‌ ನೀರಿನ ಬಿಲ್‌ ವ್ಯವಸ್ಥೆ: ತಿಂಗಳಲ್ಲಿ 7.75 ಲಕ್ಷ ರೂ. ಸಂಗ್ರಹ

12:09 AM Feb 04, 2021 | Team Udayavani |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್‌ ಆನ್‌ಲೈನ್‌ ಪಾವತಿ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಈವರೆಗೆ 7.75 ಲಕ್ಷ ರೂ. ಶುಲ್ಕ ಸಂಗ್ರಹವಾಗಿದೆ.

Advertisement

ಆನ್‌ಲೈನ್‌ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜ. 1ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್‌ ಆನ್‌ಲೈನ್‌ ವ್ಯವಸ್ಥೆ ಆರಂಭಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು, 678 ಮಂದಿ ಆನ್‌ಲೈನ್‌ ಮುಖೇನ ನೀರಿನ ಬಿಲ್‌ ಪಾವತಿ ಮಾಡಿದ್ದಾರೆ. ನಗರದಲ್ಲಿ 93,000 ಗೃಹ ಬಳಕೆಯ ನೀರಿನ ಸಂಪರ್ಕವಿದ್ದು, ನೀರಿನ ಶುಲ್ಕವನ್ನು ಸಂಗ್ರಹಿಸಲು ವಾರ್ಡ್‌ ವಾರು 60 ಮಂದಿ ಎಂಪಿಡಬ್ಲ್ಯು ಸಿಬಂದಿ ನಿಯೋಜಿಸಲಾಗಿದೆ.

ಇದನ್ನೂ ಓದಿ:ಅಂಗನವಾಡಿ ತೆರೆದ ನಂತರ ಬಿಸಿಯೂಟ: ಶಶಿಕಲಾ ಜೊಲ್ಲೆ

ನೀರಿನ ಬಿಲ್‌ ನೀಡಲು ಮನೆಗೆ ಸಿಬಂದಿ ಬರುವ ವೇಳೆ ಅವರ ಬಳಿ ಕ್ಯೂ ಆರ್‌ ಕೋಡ್‌ ವ್ಯವಸ್ಥೆಯನ್ನು ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next