ಬೆಂಗಳೂರು: ಒಂದರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಿರುವುದರಿಂದ ಎಸ್. ಎ.-2 ಫಲಿತಾಂಶದಲ್ಲಿ ಅನುತ್ತೀರ್ಣ ರಾಗುವ ವಿದ್ಯಾರ್ಥಿ ಗಳಿಗೆ ಪರಿಹಾರ ಬೋಧನೆ ಅಥವಾ ಆನ್‌ಲೈನ್‌ತರಗತಿ ನಡೆಸಲು ಶಾಲೆಯ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನಿರ್ದೇಶಿಸಿದ್ದಾರೆ.
ರಾಜ್ಯದ ಒಂದರಿಂದ 9ನೇ ತರ ಗತಿಯ ವಿದ್ಯಾರ್ಥಿಗಳ ಪರೀಕ್ಷೆ ಯನ್ನು ರದ್ದು ಮಾಡಿದ್ದು, ಅವರ ಫಲಿತಾಂಶವನ್ನು ವಿದ್ಯಾರ್ಥಿ ಸಾಧನೆಯ
ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಮೂಲಕ ಅಪ್ಲೋಡ್ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಈ ಸಂಬಂಧ ಈಗಾ ಗಲೇ ವಿದ್ಯಾರ್ಥಿಗಳು ಮತ್ತು ಶಾಲಾವಾರು ಫಲಿತಾಂಶ ಪಡೆಯಲು ತಂತ್ರಾಂಶವನ್ನು ರೂಪಿಸಲಾಗಿದೆ.
2019-20ನೇ ಸಾಲಿನ ಒಂದರಿಂದ 9ನೇ ತರಗತಿ ವಿದ್ಯಾರ್ಥಿ ಗಳ ಫಲಿತಾಂಶ ಪ್ರಕಟನೆ, ಕಲಿಕಾ ಪ್ರಗತಿಯ ವರದಿ ಹಾಗೂ ವರ್ಗಾವಣೆ ಪತ್ರಗಳನ್ನು ಪಡೆಯಲು ತಂತ್ರಾಂಶದಲ್ಲಿ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಯು ಎಸ್‌ಎಫ್-1ರಿಂದ ಎಸ್ ಎಫ್ 4 ಮತ್ತು ಎಸ್ ಎ-1 ಹಾಗೂ ಎಸ್‌ಎ-2ರಲ್ಲಿ ಗಳಿಸಿರುವ ಅಂಕಗಳನ್ನು ಹಾಗೂ ಹಾಜರಾತಿಗಳನ್ನು ಪ್ರತಿ ವರ್ಷ ಅನುಸರಿಸುವಂತೆ ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ಫಲಿತಾಂಶವನ್ನು ಮತ್ತು ಕಲಿಕಾ ಪ್ರಗತಿ ವರದಿಯನ್ನು ಪಡೆಯಬೇಕು. ಎಸ್‌ಎ-2 ಫಲಿತಾಂಶದಲ್ಲಿ ಯಾವುದೇ ವಿದ್ಯಾರ್ಥಿಯು ಕಡಿಮೆ ಅಂಕ ಗಳಿಸಿ ಅನು ತ್ತೀರ್ಣರಾಗಿದ್ದಲ್ಲಿ, ಅಂತಹ ವಿದ್ಯಾರ್ಥಿ ಗಳಿಗೆ ಎಸ್‌ಎಟಿಎಸ್ ತಂತ್ರಾಂಶ ದಲ್ಲಿ ಈಗಾಗಲೇ ನೀಡಿರುವ ಮಾದರಿಯಂತೆ ಪರಿಹಾರ ಬೋಧನೆ ಅಥವಾ ಆನ್ಲ„ನ್ ತರಗತಿ ನಡೆಸಿ ಉತ್ತೀರ್ಣಗೊಳಿಸಲು ಶಾಲೆಗಳಿಗೆ ಸೂಚಿಸಿದೆ.