Advertisement
ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಶೇ. 56ರಷ್ಟು ಉದ್ಯಮಗಳು ಆನ್‌ಲೈನ್ ಉದ್ಯೋಗಕ್ಕೆ ಒತ್ತು ನೀಡಿವೆ ಎಂದು ಮಾನ್ ಸ್ಟರ್ ಎಂಪ್ಲಾಯ್ ಮೆಂಟ್ ಇಂಡೆಕ್ಸ್ ಹೇಳಿದೆ.
ಬೆಂಗಳೂರಿನಲ್ಲಿ ದೇಶದಲ್ಲೇ ಹೆಚ್ಚು ಉದ್ಯೋಗ ಭರ್ತಿಯಾಗಿದೆ. ಇಲ್ಲಿನ ಐಟಿ ಹಾರ್ಡ್‌ವೇರ್ ಮತ್ತು ಸಾಫ್ಟ್ ವೇರ್ ಉದ್ಯೋಗಗಳಲ್ಲಿ ಶೇ. 67ರಷ್ಟು ಪ್ರಗತಿ ಕಂಡುಬಂದಿದೆ. ಹಾಗೆಯೇ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲೂ ಹೆಚ್ಚಿನ ಪ್ರಗತಿಯಾಗಿದೆ. ಎಲ್ಲ ನಗರಗಳಲ್ಲಿ ಹಾರ್ಡ್‌ವೇರ್, ಸಾಫ್ಟ್ ವೇರ್ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಇಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಶೇ. 79ರಷ್ಟು ಪ್ರಗತಿಕಂಡಿದೆ.
Related Articles
ಕಚೇರಿ ಬಳಕೆ ವಸ್ತುಗಳು/ ಆಟೋಮೇಶನ್, ಆರೋಗ್ಯ ಸೇವೆ, ಬಯೋಟೆಕ್ನಾಲಜಿ, ಜೀವ ವಿಜ್ಞಾನ ಮತ್ತು ಫಾರ್ಮಾಸುಟಿಕಲ್ ನಲ್ಲೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ. ಆದರೆ ಟ್ರಾವೆಲ್ ಮತ್ತು ಟೂರಿಸಂನಲ್ಲಿ ಶೇ. 13, ಆಮದು/ ರಫ್ತು ವಲಯದಲ್ಲಿ ಶೇ. 11 ಮತ್ತು ಪ್ರಿಂಟಿಂಗ್ ಹಾಗೂ ಪ್ಯಾಕೇಜಿಂಗ್ ನಲ್ಲಿ ಶೇ. 8ರಷ್ಟು ಇಳಿಕೆಯಾಗಿದೆ.
Advertisement
ನಿರುದ್ಯೋಗ ಪ್ರಮಾಣ ಇಳಿಮುಖದೇಶಾದ್ಯಂತ ಕೊರೊನಾ ಲಾಕ್ ಡೌನ್ ತೆರವು ಮತ್ತು ಮುಂಗಾರು ಮಳೆ ಆಗಮನವಾಗುತ್ತಿದ್ದಂತೆ ನಿರುದ್ಯೋಗ ಪ್ರಮಾಣವೂ ಕಡಿಮೆಯಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐ ಇ) ಪ್ರಕಾರ, ಜೂ. 13ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ. 8.7ಕ್ಕೆ ಇಳಿಕೆಯಾಗಿದೆ. ಇದು ಜೂ. 6ಕ್ಕೆ ಅಂತ್ಯಗೊಂಡ ವಾರದಲ್ಲಿ ಶೇ.13ರಷ್ಟಿತ್ತು. ನಗರದ ನಿರುದ್ಯೋಗ ಪ್ರಮಾಣ ಶೇ. 14.4ರಿಂದ ಶೇ. 9.7ಕ್ಕೆ ಇಳಿಕೆಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ. 13.3ರಿಂದ ಶೇ. 8.2ರಷ್ಟಕ್ಕೆ ಇಳಿದಿದೆ.