Advertisement

ಕೀಟ ನಿರ್ವಹಣೆಗೆ ಆನ್‌ಲೈನ್‌ ತರಬೇತಿ

12:21 PM Jun 01, 2020 | Suhan S |

ಮೂಡಲಗಿ: ಅರಭಾವಿಯ ಜಿಲ್ಲಾ ಕೃಷಿ ಕೇಂದ್ರದಿಂದ ಜೂ.1ರಂದು ಬೆಳಿಗ್ಗೆ 11ಕ್ಕೆ ಮುಂಗಾರು ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಹಾಗೂ ಮಿಡತೆಗಳ ನಿರ್ವಹಣೆಯ ಕ್ರಮಗಳ ಕುರಿತು ಬಾಗಲಕೋಟೆ ತೋಟಗಾರಿಕೆ ವಿವಿ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರಾಮನಗೌಡ ಎಚ್‌. ಉಪನ್ಯಾಸ ನೀಡುವರು.

Advertisement

ಮಧ್ಯಾಹ್ನ 12ಕ್ಕೆ ಮುಂಗಾರು ಬೆಳೆಗಳಲ್ಲಿ ಬೀಜೋಪಚಾರ ಹಾಗೂ ಅದರ ಮಹತ್ವ ಕುರಿತು ಅರಬಾವಿಯ ತೋಟಗಾರಿಕೆ ಮಹಾವಿದ್ಯಾಲಯದ ಬೀಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಿಲೀಪ ಮಸೂತಿ ಉಪನ್ಯಾಸ ನೀಡುವರು. ಆನ್‌ಲೈನ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೂಮ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇಲಾಖೆಯ ಸಂಪರ್ಕದಲ್ಲಿರುವ ರೈತರಿಗೆ ಆನ್‌ಲೈನ್‌ ಸಂಪರ್ಕವನ್ನು ಕಲ್ಪಿಸಿಕೊಡಲಾಗುವುದು. ಅಧಿಕ ಮಾಹಿತಿಗಾಗಿ ಮೊ.8147276159 ಸಂಪರ್ಕಿಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next