Advertisement

ಸ್ಪರ್ಧಾತ್ಮಕ ಪರೀಕ್ಷೆಗೂ ಆನ್‌ಲೈನ್‌ ತರಬೇತಿ

05:34 AM Jun 10, 2020 | Lakshmi GovindaRaj |

ಮೈಸೂರು: ಕೆ-ಸೆಟ್‌ ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ಆನ್‌ಲೈನ್‌ ತರಬೇತಿ ನೀಡಿದ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಆನ್‌ಲೈನ್‌ ತರಬೇತಿಗೆ ಚಾಲನೆ ನೀಡಿದೆ. ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ವತಿಯಿಂದ ಕೆಎಎಸ್‌ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಐವತ್ತು ದಿನಗಳ ಆನ್‌ಲೈನ್‌ ತರಬೇತಿಗೆ ಕೆಎಸ್‌ಒಯು ಸ್ಟುಡೆಂಟ್‌ ಆ್ಯಪ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ರೈಲ್ವೆ ಪೊಲೀಸ್‌ ಮಹಾ ನಿರೀಕ್ಷಕಿ ಡಿ.ರೂಪಾ ಮೌದ್ಗಿಲ್‌  ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ನಾನು ಐಪಿಎಸ್‌ ಪರೀಕ್ಷೆ ಬರೆದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಐಎಎಸ್‌, ಐಪಿಎಸ್‌ ಬಗ್ಗೆ ತಿಳಿವಳಿಕೆ ಇರಲಿಲ್ಲ. ಆದರೆ ಈಗ ತುಂಬಾ ಬದಲಾಗಿದೆ. ಇಂಥ ಪರೀಕ್ಷೆಗೆ ತರಬೇತಿ ನೀಡಲು ವಿವಿಧ ಸಂಸ್ಥೆಗಳಿವೆ, ಆನ್‌ಲೈನ್‌ ವೇದಿಕೆಗಳಿವೆ. ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಐಎಎಸ್‌, ಐಪಿಎಸ್‌ ಮತ್ತು ಕೆಎಎಸ್‌ ಮಾಡಬೇಕೆಂಬ ಗುರಿ ಹೊಂದಿರಬೇಕು.

ತಾಳ್ಮೆ, ಆತ್ಮವಿಶ್ವಾಸ ಮುಖ್ಯ. ಸಾಧನೆ,  ಗುರಿ ಮುಟ್ಟುವುದು ಸುಲಭವಲ್ಲ. ತಪ್ಪಸ್ಸಿನಂತೆ ಓದಬೇಕು ಎಂದು ಹೇಳಿದರು. ಅಪರ ಪ್ರಾದೇಶಿಕ ಆಯುಕ್ತೆ ಕೆ.ಎಂ.ಗಾಯತ್ರಿ, ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್‌, ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಸ್ಪರ್ಧಾತ್ಮಕ ಪರೀಕ್ಷೆಗಳ  ತರಬೇತಿ ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣ ಗೌಡ, ಪ್ರವಾಸೋದ್ಯಮ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಡಾ.ಸೆಲ್ವ ಪಿಳ್ಳೆ ಅಯ್ಯಂಗಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next