Advertisement

ಇಂದಿನಿಂದ ಆನ್‌ಲೈನ್‌ ತರಬೇತಿ ಆರಂಭ

09:48 AM Jul 03, 2020 | Suhan S |

ಬಳ್ಳಾರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2018-19ನೇ ಸಾಲಿನಲ್ಲಿ ದ್ವಿತೀಯ ವರ್ಷದ ಬಿ.ಎ, ಬಿ.ಕಾಂ, ಮತ್ತು 2019-20ನೇ ಸಾಲಿನ ಜುಲೈ ಆವೃತ್ತಿ ಮತ್ತು ಜನವರಿ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಪ್ರಥಮ ಬಿ.ಎ, ಬಿ.ಕಾಂ, ಬಿ.ಎಲ್‌.ಐ.ಎಸ್ಸಿ., ಎಂ.ಎ, ಎಂ.ಕಾಂ., ಎಂ.ಬಿ.ಎ., ಎಂ.ಎಲ್‌. ಐ.ಎಸ್ಸಿ., ಬಿ.ಎಡ್‌. ವಿದ್ಯಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡಿರುವ ಕೌಶಲ್ಯಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ತರಗತಿ ಗಳನ್ನು ಕೋವಿಡ್‌-19 ಕಾರಣ ದಿಂದ ಭೌತಿಕವಾಗಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆನ್‌ಲೈನ್‌ ಮುಖಾಂತರ ಕಾರ್ಯಕ್ರಮ ಗಳನ್ನು ಜು. 3ರಿಂದ 14ರವರೆಗೆ ನಡೆಸಲಾ ಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

Advertisement

ಕೌಶಲಾಭಿವೃದ್ಧಿ ತರಬೇತಿ ಪಠ್ಯವಿಷಯ, ವೇಳಾಪಟ್ಟಿ ಮತ್ತು ಆನ್‌ಲೈನ್‌ಲಿಂಕನ್ನು ಕರಾಮುವಿ ವೆಬ್‌ಸೈಟ್‌  www.ksoumysuru.ac.in  ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಕೊಂಡ ವಿದ್ಯಾರ್ಥಿಗಳಿಗೆ ಈ ಡಿಜಿಟಲ್‌ ಪ್ರಮಾಣ ಪತ್ರವನ್ನು ಆನ್‌ ಲೈನ್‌ ಮೂಲಕ ವಿತರಿಸಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ| ಎಚ್‌. ಮಲ್ಲಿಕಾಜುನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ಕೇಂದ್ರದ ಸಂಯೋಜಕರ ದೂ. ಸಂ: 9611434810 ಅಥವಾ ಸಂಯೋಜಕರು, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ಹಿಂಭಾಗ, ನಲ್ಲಚೆರವು ಪ್ರದೇಶ, ಬಳ್ಳಾರಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next