Advertisement

ಬಿ.ಎಸ್‌.ಚನ್ನಬಸಪ್ಪ &ಸನ್ಸ್‌ನಿಂದ ಆನ್‌ಲೈನ್‌ ಶಾಪಿಂಗ್‌

06:10 PM Aug 02, 2019 | Sriram |

ದಾವಣಗೆರೆ: ಜವಳಿ ಮಾರಾಟ ಕ್ಷೇತ್ರದಲ್ಲಿ ತನ್ನದೇ ಛಾಪು ಹೊಂದಿರುವ, ರಾಜ್ಯದ ಪ್ರತಿಷ್ಠಿತ ದಾವಣಗೆರೆಯ ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಆ.2 ರಿಂದ ಆನ್‌ಲೈನ್‌ ಶಾಪಿಂಗ್‌ ಪ್ರಾರಂಭಿಸುತ್ತಿದೆ.

Advertisement

ಬಿ.ಎಸ್‌.ಚನ್ನಬಸಪ್ಪ ಆ್ಯಂಡ್‌ ಸನ್ಸ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಸೀರೆ, ರೇಷ್ಮೆ ಸೀರೆ, ಪುರುಷರು, ಮಹಿಳೆಯರು ಮತ್ತು ಮಕ್ಕಳ ಡ್ರೆಸ್‌ ಮೆಟೇರಿಯಲ್ಸ್ಗಳು ಸ್ಪರ್ಧಾತ್ಮಕ ದರ ದಲ್ಲಿ ದೊರೆಯುತ್ತವೆ. ಗ್ರಾಹಕರ ಬಯಕೆಗೆ ತಕ್ಕಂತೆ ಆಧುನಿಕತೆಗೆ ತೆರೆದುಕೊಂಡು ಸಾಗುತ್ತಿರುವ ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಈಗ ದೂರದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಆನ್‌ಲೈನ್‌ ಶಾಪಿಂಗ್‌ ಕ್ಷೇತ್ರಕ್ಕೆ ಮುಂದಡಿಯಿಟ್ಟಿದೆ.

ಬಿ.ಎಸ್‌.ಚನ್ನಬಸಪ್ಪ ಅಂಗಡಿಯಲ್ಲಿ ಬಟ್ಟೆ ಖರೀದಿಸಬೇಕು ಎನ್ನುವ ದೂರದ ಊರುಗಳ ಗ್ರಾಹಕರು ಆನ್‌ಲೈನ್‌ನಲ್ಲೇ ತಮ್ಮ ಇಷ್ಟದ ಬಟ್ಟೆಗಳನ್ನ ಖರೀದಿಸುವ ವ್ಯವಸ್ಥೆ ಮಾಡಿದೆ. ಗ್ರಾಹಕರು ಆಗಸ್ಟ್‌ 2ರ ನಂತರ bscfashion.com ಮೂಲಕ ಪ್ರಾರಂಭಿಕ ಹಂತದಲ್ಲಿ ಸೀರೆ, ಮಹಿಳೆಯರ ಡ್ರೆಸ್‌ ಮೆಟೀರಿಯಲ್ಸ್ ಖರೀದಿ ಮಾಡಬ ಹುದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ನ ಬಿ.ಸಿ. ವಿವೇಕ್‌ ತಿಳಿಸಿದರು.

ದೂರ ಮತ್ತು ಹೊರ ರಾಜ್ಯಗಳ ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್‌ ಶಾಪಿಂಗ್‌ ಪ್ರಾರಂಭಿಸಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ 500 ರೂ.ನಿಂದ 25 ಸಾವಿರದವರೆಗಿನ ಸೆಲೆಕ್ಟೆಡ್‌ ಸೀರೆ, ಡ್ರೆಸ್‌ ಮೆಟೀರಿಯಲ್ ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆ. 2 ರಂದು bscfashion.com ಲಾಂಚ್ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ವಿವಿಧ ಬಟ್ಟೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಸೆಲೆಕ್ಟೆಡ್‌ ಮೆಟೇರಿಯಲ್ಸ್ಗಳ ಫೋಟೋ, ದರ, ಇತರೆ ಮಾಹಿತಿ ಅಪ್‌ಲೋಡ್‌ ಮಾಡಲಾಗುವುದು. ಗ್ರಾಹಕರು bscfashion.com ಮೂಲಕ ತಮಗೆ ಇಷ್ಟವಾದ ಬಟ್ಟೆ ಸೆಲೆಕ್ಟ್ ಮಾಡಿ, ಖರೀದಿಸಬಹುದು. ಡೋರ್‌ ಡೆಲಿವರಿಗೆ 50ರೂ. ನಿಗದಿಪಡಿಸಲಾಗಿದೆ. ಎರಡು ದಿನಗಳ ಒಳಗೆ ಬಟ್ಟೆ ಬದಲಾಯಿಸುವ ಅವಕಾಶವಿದೆ. ಯಾವುದೇ ಸೀರೆ, ಡ್ರೆಸ್‌ಮೆಟೇರಿಯಲ್ನ್ನು ಗ್ರಾಹಕರಿಗೆ ಕಳಿಸುವ ಮುನ್ನ ಫೋಟೋ, ಬೆಲೆಯ ವಿವರ ಕಳಿಸಲಾಗುವುದು. ಒಂದೊಮ್ಮೆ ಪ್ಯಾಕಿಂಗ್‌ ಸೀಲ್ ಓಪನ್‌ ಆಗಿದ್ದರೆ ತೆಗೆದುಕೊಳ್ಳಬಾರದು ಎಂದು ಮನವಿ ಸಹ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

bscfashion.com ಆ್ಯಪ್‌ ಹಾಗೂ ಸಾಫ್ಟ್‌ವೇರ್‌ನಂತೆ ಕೆಲಸ ಮಾಡಲಿದೆ. ನಮ್ಮ ಅಂಗಡಿಯಲ್ಲಿ ದೊರೆಯುವಂತಹ ಎಲ್ಲಾ ಸೀರೆ, ಡ್ರೆಸ್‌ ಮೆಟೇರಿಯಲ್ ಆನ್‌ಲೈನ್‌ನಲ್ಲಿ ಅದೇ ದರದಲ್ಲಿ ದೊರೆಯುತ್ತವೆ. ಈಗ ಶ್ರಾವಣ ಮಾಸದ ಪ್ರಯುಕ್ತ ನೀಡಲಾಗುತ್ತಿರುವ ಡಬಲ್ ಡಿಸ್ಕೌಂಟ್ ನೀಡಲಾಗುವುದು ಎಂದು ತಿಳಿಸಿದರು.

ಬಿ.ಸಿ. ಚಂದ್ರಶೇಖರ್‌ ಮಾತನಾಡಿ, ಗ್ರಾಹಕರಿಗೆ ಅನುಕೂಲವಾಗುವಂತೆ ಆನ್‌ಲೈನ್‌ ಶಾಪಿಂಗ್‌ ಪ್ರಾರಂಭ ಮಾಡಲಾಗುತ್ತಿದೆ. ಸೀರೆ, ಲೇಡಿಸ್‌ ಡ್ರೆಸ್‌ ಮೆಟೇರಿಯಲ್ ನಂತರ ಇತರೆ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ವ್ಯವಸ್ಥೆ ಮಾಡಲಾಗುವುದು. ಆನ್‌ಲೈನ್‌ನಲ್ಲಿ ಸೀರೆ, ಡ್ರೆಸ್‌ ಮೆಟೀರಿಯಲ್ ಮಾರ್ಕೆಟಿಂಗ್‌ ಸುಲಭವಲ್ಲ. ಆದರೂ, ಸಕ್ಸಸ್‌ ಆಗುವ ವಿಶ್ವಾಸ ಇದೆ ಎಂದರು.

ಶೀಘ್ರವೇ ಹುಬ್ಬಳ್ಳಿಯಲ್ಲಿ ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ನ ಬ್ರಾಂಚ್ ಪ್ರಾರಂಭಿಸಲಾಗುವುದು. ದಾವಣಗೆರೆಯ ಹಳೇ ಪಿಬಿ ರಸ್ತೆಗೆ ಹೊಂದಿಕೊಂಡಿರುವ 2 ಲಕ್ಷ ಚದರ ಅಡಿ ಜಾಗದಲ್ಲಿ ರಾಜ್ಯದಲ್ಲೇ ಅತಿ ದೊಡ್ಡ ಶಾಪಿಂಗ್‌ ಪ್ರಾರಂಭಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next