Advertisement
ಇದೇ ವಿಭಾಗದ ಪುರುಷರ ಸ್ಪರ್ಧೆಯಲ್ಲಿ ಆಶಿಷ್ ದಬಾಸ್ (243.1) ದ್ವಿತೀಯ ಹಾಗೂ ಅನೀಷ್ ಭನ್ವಾಲ್ (222.3) ತೃತೀಯ ಸ್ಥಾನಿಯಾದರು.
ಆಸ್ಟ್ರಿಯಾದ ಮಾರ್ಟಿನ್ ಸ್ಟ್ರೆಂಫ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಅವರು 253.8 ಅಂಕ ಸಂಪಾದಿಸಿ, ಹಿಂದಿನ ದಾಖಲೆಯನ್ನು ಒಂದು ಅಂಕದಿಂದ ಉತ್ತಮಪಡಿಸಿದರು. ಅರ್ಹತಾ ಸುತ್ತಿನಲ್ಲೂ ಸ್ಟ್ರೆಂಫ್ ಅವರಿಂದ ವಿಶ್ವದಾಖಲೆ ನಿರ್ಮಾಣವಾಗಿತ್ತು (633.7 ಅಂಕ). ಭಾರತದ ರುದ್ರಾಂಕ್ ಪಾಟೀಲ್ (251.7) ಮತ್ತು ವಿಷ್ಣು ಶಿವರಾಜ್ ಪಾಂಡಿಯನ್ (226.5) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.
Related Articles
ಇದು ಭಾರತದ ಮಾಜಿ ಶೂಟರ್ ಶಿಮನ್ ಶರೀಫ್ ಅವರ ಯೋಜನೆಯಾಗಿತ್ತು. ಶನಿವಾರ ನಡೆದ ಈ ಸ್ಪರ್ಧೆಯಲ್ಲಿ 11 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ತಮ್ಮದೇ ಮನೆಯ ಝೂಮ್ ಫ್ಲ್ಯಾಟ್ ಫಾಮ್ ಇಲೆಕ್ಟ್ರಾನಿಕ್ ಟಾರ್ಗೆಟ್ಸ್‌ನಲ್ಲಿ ಇವರು ಗುರಿ ಇರಿಸಿದ್ದರು.
Advertisement