Advertisement
ಪ್ರಧಾನಮಂತ್ರಿ ಬೀದಿ ಬದಿಯ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂಎಸ್‌ವಿಎ ನಿಧಿ) ಯೋಜನೆಯ ಫಲಾನುಭವಿಗಳ ಜತೆಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಮೋದಿ ಈ ವಿಚಾರ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದು, ಒಂದು ಲಕ್ಷ ಮಂದಿ ಸದುಪಯೋಗ ಪಡೆದು ಕೊಂಡಿದ್ದಾರೆ, ಇದೊಂದು ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 4.5 ಲಕ್ಷ ಮಂದಿಗೆ ಯೋಜನೆಯ ಅನ್ವಯ ಗುರುತಿನ ಚೀಟಿ ವಿತರಿಸಿರುವುದು ಅತ್ಯುತ್ತ ಮ ಬೆಳವಣಿಗೆಯಾಗಿದೆ ಎಂದರು.ಡಿಜಿಟಲ್ ಪಾವತಿ ನಿಟ್ಟಿನಲ್ಲಿ ಬ್ಯಾಂಕ್‌ಗಳು ಆಧುನಿಕ ವ್ಯವಸ್ಥೆ ಗಳನ್ನು ಆರಂಭಿಸಿವೆ. ಅದನ್ನು ಬೀದಿ ಬದಿಯ ವ್ಯಾಪಾರಿಗಳು ಅಳವಡಿಸಿಕೊಳ್ಳಬೇಕು ಎಂದರು.
ಆತ್ಮನಿರ್ಭರ ಭಾರತ ಯೋಜನೆಯಡಿ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಘೋಷಿಸಿದ್ದು, ಅದರಂಗವಾಗಿ ತಯಾರಾಗಿರುವ ಪ್ರಧಾನಮಂತ್ರಿ ಮತ್ಸ éಸಂಪದ ಯೋಜನೆ(ಪಿಎಂಎಸ್‌ಎಸ್‌ವೈ)ಯನ್ನು ಗುರುವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಜತೆಗೆ ಕೃಷಿಕರ ನೆರವಿಗಾಗಿ ಇ-ಗೋಪಾಲ ಆ್ಯಪ್ ಅನ್ನೂ ಬಿಡುಗಡೆ ಮಾಡಲಿದ್ದಾರೆ. ಮೀನುಗಾರಿಕೆ ವಲಯ ಅಭಿವೃದ್ಧಿ ಗೆ 20,050 ಕೋಟಿ ರೂ. ತೊಡಗಿಸಲಾಗುತ್ತಿದೆ. 2020-21ರಿಂದ 2024-25ರ ವರೆಗಿನ 5 ವರ್ಷಗಳಲ್ಲಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೀನುಗಾರಿಕೆ ಅಭಿವೃದ್ಧಿ ಗುರಿ ಹೊಂದಲಾಗಿದೆ. 12,340 ಕೋಟಿ ರೂ.ಗಳನ್ನು ಸಮುದ್ರ, ಒಳನಾಡು ಮೀನುಗಾರಿಕೆ ಮತ್ತು ಮೀನುಸಾಕಾಣಿಕೆ ಮಾಡುವವರಿಗೆ ಬಳಸಲಾಗುತ್ತದೆ. ಮೀನುಗಾರಿಕೆ ಸಂಬಂಧಿ ಮೂಲಸೌಕರ್ಯಗಳಿಗಾಗಿ ಬಾಕಿ 7,710 ಕೋಟಿ ರೂ. ಬಳಸಲಾಗುತ್ತದೆ.