Advertisement

ಆನ್ ಲೈನ್ ಪೋಸ್ಟ್: ಪೋಸ್ಟ್ ಆಫೀಸ್ ಖಾತೆಗೆ ಆನ್‌ಲೈನ್‌ನಲ್ಲೇ ಹಣ ಕಟ್ಟಿ!

11:30 AM Apr 13, 2020 | mahesh |

ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿದರೆ, ಬ್ಯಾಂಕ್‌ಗಳಿಗಿಂತ ಸ್ವಲ್ಪವೇ ಸ್ವಲ್ಪ ಬಡ್ಡಿ ಜಾಸ್ತಿ ಸಿಗುತ್ತದೆ ಎಂಬುದು ಹಲವರ ಮಾತು, ನಂಬಿಕೆ. ತೆರಿಗೆ ವಿನಾಯಿತಿ ಪಡೆಯಬೇಕು ಅನ್ನುವವರು, ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌- ಪಿಪಿಎಫ್) ಯೋಜನೆಯಲ್ಲಿ ಹಣ ಹೂಡುವುದು ಸೂಕ್ತ. ಆದರೆ, ಅಂಚೆ ಕಚೇರಿಯವರೆಗೆ ಹೋಗಿ, ಅಲ್ಲಿ ಖಾತೆ ತೆರೆಯುವುದು ಸ್ವಲ್ಪ ಮಟ್ಟಿಗೆ ಪ್ರಯಾಸದ ಕೆಲಸವೇ.
ಅದರಲ್ಲೂ, ಲಾಕ್‌ಡೌನ್‌ನ ಈ ದಿನಗಳಲ್ಲಿ ಎಲ್ಲೂ ಹೋಗುವುದಕ್ಕೆ ಆಗುವುದಿಲ್ಲ ಎನ್ನುವವರಿಗೆ, ಮೊಬೈಲ್‌ ಆ್ಯಪ್‌ನ ನೆರವಿನಿಂದಲೇ, ಆನ್‌ಲೈನ್‌ ಮೂಲಕ ಖಾತೆ ತೆರೆಯುವ ಮತ್ತು ಕಂತುಗಳನ್ನು ಕಟ್ಟುವ ಸೌಲಭ್ಯವನ್ನು ಭಾರತೀಯ ಅಂಚೆ ಇಲಾಖೆಯು ಒದಗಿಸಿದೆ. ಪೋಸ್ಟ್ ಆಫೀಸ್ ನ ಪಿಪಿಎಫ್ ಯೋಜನೆಯಲ್ಲಿ ಕಂತುಗಳನ್ನು ಕಟ್ಟಲು/ ಹೊಸದಾಗಿ ಖಾತೆ ತೆರೆಯಲು ಮಾಡಬೇಕಾದುದಿಷ್ಟೆ-

Advertisement

ಮೊದಲಿಗೆ ಗೂಗಲ್‌ ಪ್ಲೇನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ- ಐಕಕಆ) ಎಂಬ ಅಪ್ಲಿಕೇಷನ್‌ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. (ಈ ಅಪ್ಲಿಕೇಷನ್‌ ಮುಂಚಿತವಾಗಿಯೇ ಇದ್ದರೆ, ಮತ್ತೆ ಮೊದಲಿನಿಂದ ಡೌನ್ಲೋಡ್ ಮಾಡುವುದು ಬೇಕಿಲ್ಲ. ಹೊಸದಾಗಿ ಖಾತೆ ತೆರೆಯುವ ಹಾಗಿದ್ದರೆ ಮಾತ್ರ ಈ ಹಂತವನ್ನು ಪಾಲಿಸಿ) 

„ ನಿಮ್ಮ ಆಧಾರ್‌, ಪಾನ್‌ ವಿವರಗಳನ್ನು ಅಲ್ಲಿ ದಾಖಲಿಸಿ.

ಈಗ, ನಿಮ್ಮ ಬ್ಯಾಂಕ್‌ ಖಾತೆಯಿಂದ, ಪೋಸ್ಟ್ ಆಫೀಸ್ ಪೇಮೆಂಟ್‌ ಬ್ಯಾಂಕ್‌ನ ಖಾತೆಗೆ ಹಣ ತುಂಬಿ (ಇದು, ಬೇರೆ ಯಾವುದೇ ಪೇಮೆಂಟ್‌
ಅಪ್ಲಿಕೇಷನ್‌ಗಳಲ್ಲಿ ಹಣ ತುಂಬಿದಷ್ಟೇ ಸುಲಭ)

ನಂತರ DOP ( Department of posts) ಸರ್ವಿಸಸ್‌ ಆಯ್ಕೆ ಮಾಡಿಕೊಳ್ಳಿ.

Advertisement

ಅದರಲ್ಲಿ, ನೀವು ಯಾವ ಖಾತೆಗೆ ಹಣ ತುಂಬಿಸಬೇಕೊ ಅದನ್ನು ಆಯ್ಕೆ ಮಾಡಿಕೊಳ್ಳಿ. . ಅಂದರೆ, ಆರ್‌.ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ, ಆರ್‌.ಡಿ.ಯ ಮೇಲಿನ ಸಾಲ ಮರುಪಾವತಿ- ಇವುಗಳಲ್ಲಿ ನೀವು ಯಾವ ಖಾತೆಗೆ ಹಣ ತುಂಬಬೇಕೋ ಅದನ್ನು ಆಯ್ಕೆ ಮಾಡಿ.

ನೀವು ಪಿಪಿಎಫ್ ಖಾತೆಗೆ ಹಣ ಪಾವತಿಸುವುದಾದರೆ, ಅದನ್ನು ಆಯ್ಕೆ ಮಾಡಿ. ನಂತರ ನಿಮ್ಮ ಪಿಪಿಎಫ್ ಖಾತೆಯ ಸಂಖ್ಯೆ ಮತ್ತು ಡಿಒಪಿ ಕಸ್ಟಮರ್‌ ಐಡಿಯನ್ನು ದಾಖಲಿಸಿ.

ಪಾವತಿಸುವ ಹಣದ ಮೊತ್ತವನ್ನು ದಾಖಲಿಸಿ. ನಂತರ ಪೇ ಆಪ್ಷನ್‌ ಅನ್ನು ಆಯ್ಕೆ ಮಾಡಿ.

ನಿಮ್ಮ ಪಾವತಿಯು ಯಶಸ್ವಿಯಾದ ನಂತರ, ಪಾವತಿ ವರ್ಗಾವಣೆಯಾಗಿರುವುದರ ಕುರಿತು, ಐಪಿಪಿಬಿಯಿಂದ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ.

ಈ ಮೊದಲೇ ತಿಳಿಸಿದಂತೆ, ಐಪಿಪಿಬಿ ಮೂಲಕ ನೀವು ಪಿಪಿಎಫ್ ಅಷ್ಟೇ ಅಲ್ಲದೆ, ಆರ್‌.ಡಿ, ಸುಕನ್ಯಾ ಸಮೃದ್ಧಿ, ಆರ್‌.ಡಿ.ಯ ಮೇಲಿನ ಸಾಲ ಮರುಪಾವತಿಯನ್ನೂ ಸಹ ಮಾಡಬಹುದು.

ರೋಹಿಣಿ ರಾಮ್‌ ಶಶಿಧರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next