Advertisement
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕವೂ ಅಕ್ರಮವಾಗಿ ಗೋವುಗಳ ಸಾಗಾಣಿಕೆ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಅದನ್ನು ನಿಯಂತ್ರಿಸಲು ರೈತರು ಅಥವಾ ಪಶುಪಾಲಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಶು ಸಂಗೋಪನೆ ಇಲಾ ಖೆಯ ಜಿಲ್ಲಾ ಉಪ ನಿರ್ದೇಶಕರ ಅನುಮತಿ ಹಾಗೂ ಪಶು ವೈದ್ಯರ ಪ್ರಮಾಣ ಪತ್ರವನ್ನೂ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ಹಸುಗಳನ್ನು ಸಾಕಲು ಮತ್ತು ಕೃಷಿ ಚಟುವಟಿಕೆಗಳಿಗೆ ಸಾಗಿಸಲು ಒಪ್ಪಿಗೆ ಪಡೆದ ಬಳಿಕವೂ ಕೆಲವು ಷರತ್ತುಗಳನ್ನು ಪಾಲಿಸಬೇಕಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಸು ಸಾಗಿಸಲು ಕನಿಷ್ಠ 10 ಕಿ.ಮೀ. ಒಳಗೆ ಇದ್ದರೆ ಶುಲ್ಕ ಕಟ್ಟಬೇಕಿಲ್ಲ. ಆದರೆ 10 ಕಿ.ಮೀಟರ್‌ಗಿಂತ ದೂರ ಸಾಗಿಸುವಂತಿದ್ದರೆ, ಪ್ರತಿ ಕಿಲೋ ಮೀಟರ್ ಲೆಕ್ಕದಲ್ಲಿ ಇಲಾಖೆ ನಿಗದಿಪಡಿಸುವ ಶುಲ್ಕವನ್ನು ಪಾವತಿಸಬೇಕಾಗಿದೆ.
Related Articles
Advertisement
ಅಕ್ರಮ ಸಾಗಾಣಿಕೆಗೆ ಶಿಕ್ಷೆಯಾವುದೇ ವಯಸ್ಸಿನ ಹಸು, ಕರು, ಹೋರಿಗಳನ್ನು ಅಕ್ರಮವಾಗಿ ಸಾಗಿಸಿದರೆ, 3ರಿಂದ 7 ವರ್ಷ ಶಿಕ್ಷೆ ಮತ್ತು 50 ಸಾವಿರದಿಂದ 5 ಲಕ್ಷದ ವರೆಗೆ ಶಿಕ್ಷೆ ನೀಡಲಾಗುತ್ತದೆ. 1 ಲಕ್ಷ ಗೋ ರಕ್ಷಣೆಯ ಗುರಿ
ಸರಕಾರ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಒಂದು ಗೋಶಾಲೆ ತೆರೆಯುವುದರ ಜತೆಗೆ ಹೆಚ್ಚು ಗೋವುಗಳಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸುಮಾರು 70 ಗೋಶಾಲೆ ಗಳನ್ನು ತೆರೆಯಲು ಸರಕಾರ ನಿರ್ಧರಿಸಿದ್ದು, ರಾಜ್ಯಾದ್ಯಂತ 100 ಗೋಶಾಲೆಗಳ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಗೋಶಾಲೆಯಲ್ಲಿ ಕನಿಷ್ಠ 1 ಸಾವಿರ ಗೋವುಗಳನ್ನು ಸಾಕುವ ಗುರಿ ಹೊಂದಲಾಗಿದ್ದು, ಒಂದು ಲಕ್ಷ ಗೋವುಗಳನ್ನು ಸರಕಾರಿ ಗೋಶಾಲೆಗಳಲ್ಲಿಯೇ ರಕ್ಷಿಸುವ ಗುರಿಯನ್ನು ಪಶು ಸಂಗೋಪನೆ ಇಲಾಖೆ ಹೊಂದಿದೆ. ಗೋವುಗಳ ಸಾಗಾಟಕ್ಕೆ ಅನ್‌ಲೈನ್ ವ್ಯವಸ್ಥೆ ಜಾರಿಗೆ ತರುವುದರಿಂದ ಅಕ್ರಮ ಸಾಗಾಟ ತಡೆಗಟ್ಟಲು ಇದು ಸಹಕಾರಿಯಾಗಲಿದೆ.ಕೃಷಿ ಉದ್ದೇಶಕ್ಕೆ ಯಾರು ಹಸುಗಳನ್ನು ಸಾಗಿಸುತ್ತಾರೊ, ಅದರ ಬಗ್ಗೆಯೂ ಇಲಾಖೆಗೆ ಸ್ಪಷ್ಟವಾದ ಮಾಹಿತಿ ಸಿಗುತ್ತದೆ.
-ಪ್ರಭು ಚೌವ್ಹಾಣ್, ಪಶು ಸಂಗೋಪನೆ ಸಚಿವ