Advertisement

Fraud Case ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ಜಾಬ್‌ ಟಾಸ್ಕ್; ಹಲವರಿಗೆ ವಂಚನೆ

11:21 PM Jan 26, 2024 | Team Udayavani |

ಉಡುಪಿ: ಸುಲಭದಿ ಗಣ ಗಳಿಸಬಹುದು ಎಂಬ ವಂಚಕರ ಜಾಲಕ್ಕೆ ಜನರು ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

Advertisement

ಉಡುಪಿ ಜಿಲ್ಲೆಯಲ್ಲಿ ಜನವರಿಯಲ್ಲೇ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಜ.1ರಂದು 2.50 ಲ.ರೂ., ಜ.2ರಂದು 3 ಲ.ರೂ., ಜ. 4ರಂದು 18 ಲ.ರೂ., ಜ. 12ರಂದು 62 ಲ.ರೂ., ಜ. 13ರಂದು 1.80 ಲ.ರೂ., ಜ.16ರಂದು 1.38 ಲ.ರೂ., ಜ.20ರಂದು 6.16 ಲ.ರೂ., ಜ.23ರಂದು 43 ಲ.ರೂ. ಸಹಿತ ಇನ್ನಿತರ ಹಲವು ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಪತ್ತೆಯಾಗಿದ್ದು, ಕೆಲವು ಮಾತ್ರ!

ಮತ್ತೆ 4 ಪ್ರಕರಣ!
ಮಣಿಪಾಲದ ಕಾಲೇಜೊಂದರ ಅಕನ್ಸಾ ಅವರನ್ನು ಜ.17 ರಂದು ಅಪರಿಚಿತ ವ್ಯಕ್ತಿಯೊಬ್ಬ ವ್ಯಾಟ್ಸಪ್‌ ಗ್ರೂಪ್‌ಗೆ ಸೇರಿಸಿ ಪಾರ್ಟ್‌ಟೈಮ್‌ ಜಾಬ್‌ ಬಗ್ಗೆ ಮಾಹಿತಿ ನೀಡಿ ಟೆಲಿಗ್ರಾಮ್‌ ಅಪ್ಲಿಕೇಶನ್‌ ಮೂಲಕ ಸುಲಭ ಟಾಸ್ಕ್ ಗಳಿಂದ ಹಣ ಗಳಿಸುವ ವಿಧಾನ ತಿಳಿಸಿದ್ದ. ಮೊದಲ ಟಾಸ್ಕ್ ನಲ್ಲಿ 3 ಪ್ರೊಡಕ್ಟ್ ಬಗ್ಗೆ ಹಂಚಿಕೊಂಡರೆ ಅಧಿಕ ಹಣ ಬರುವುದಾಗಿ ತಿಳಿಸಿದ್ದ ಇದರಂತೆ ಮುಂದುವರಿದಾಗ ಮೊದಲಿಗೆ 150 ರೂ.ಗಳು ಅಕನ್ಸಾ ಅವರ ಖಾತೆಗೆ ಜಮೆಯಾಗಿತ್ತು. ಬಳಿಕ ಅವರು 3000 ರೂ. ಹೂಡಿಕೆ ಮಾಡಿ 4,450ರೂ. ಪಡೆದರು. ಬಳಿಕ 6000 ರೂ.ಹೂಡಿಕೆ ಮಾಡಿ 8477ರೂ. ಪಡೆದಿದ್ದರು. ಜ.20ರಿಂದ ಜ.25ರ ನಡುವೆ ಹಂತಹಂತವಾಗಿ 14.75 ಲಕ್ಷ ರೂ. ಹೂಡಿಕೆ ಮಾಡಿದ್ದು, ಆರೋಪಿಗಳು ಶೇ.30 ತೆರಿಗೆಯೊಂದಿಗೆ 22.40 ಲಕ್ಷ ರೂ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ.

ಪ್ರಕರಣ -2
ಹಾವಂಜೆಯ ಪೃಥ್ವಿ ಅವರಿಗೆ ವಾಟ್ಸಾಪ್‌ನಲ್ಲಿ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ, ಟೆಲಿಗ್ರಾಂ ಆ್ಯಪ್ ಮೂಲಕ ಗ್ಲೋಬಲ್‌ ಕರೆನ್ಸಿ ಎಂಬ ಟ್ರೇಡಿಂಗ್‌ ಆನ್‌ ಲೈನ್‌ ವ್ಯವಹಾರ ಮಾಡಿದಲ್ಲಿ ಅಧಿಕ ಲಾಭಾಂಶ ಬರುವುದಾಗಿ ನಂಬಿಸಿದ್ದ. ಇದನ್ನು ನಂಬಿದ ಅವರು ತನ್ನ ಐಸಿಐಸಿಐ ಬ್ಯಾಂಕ್‌ ಖಾತೆಯಿಂದ ಆರೋಪಿ ಸೂಚಿಸಿದ ಬ್ಯಾಂಕ್‌ ಖಾತೆಗೆ 5.19 ಲಕ್ಷ ರೂ. ವರ್ಗಾಯಿಸಿದ್ದರು. ಆದರೆ ಇಲ್ಲಿಯೂ ಆರೋಪಿಗಳು ಹಣವನ್ನಾಗಲೀ, ಲಾಭಾಂಶವಾಗಲೀ ನೀಡದೇ ವಂಚಿಸಿದ್ದಾರೆ.

ಪ್ರಕರಣ -3
ಮಣಿಪಾಲ ಲಕ್ಷ್ಮೀಂದ್ರನಗರದಪ್ರಸಾದ ಕುಮಾ ರ್‌ ಅವರು ಜ.24ರಂದು ಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿ ಕರೆಮಾಡಿ ತನ್ನನ್ನು ಹರ್ಷವರ್ಧನ್‌ ಎಂದು ಪರಿಚಯಿಸಿಕೊಂಡ. ಬಳಿಕ ಆತ “ನಿಮ್ಮ ಹೆಸರಿನಲ್ಲಿ ಒಂದು ಅನ್‌ ಡೆಲಿವರ್ಡ್‌ ಪಾರ್ಸಲ್‌ ಇದ್ದು ಅದರಲ್ಲಿ illegal Products (5 Expired Passports. 4 SBI Credit Cards. 2KG Cloths. 1 Toy And MDMA Drugs) ಇರುವುದಾಗಿ ಸುಳ್ಳು ಮಾಹಿತಿ ನೀಡಿ ಈ ಬಗ್ಗೆ ಮನಿ ಲಾಂಡ್ರಿಂಗ್‌ ಡಿಪಾರ್ಟ್‌ಮೆಂಟ್‌ ಮುಂಬಯಿ ಪೊಲೀಸ್‌ನವರಿಗೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದ. ಸ್ಕೈಪೇ ಆ್ಯಪ್‌ ಮೂಲಕ ಮುಂಬಯಿ ಪೊಲೀಸ್‌ ಎಂದು ಅಪರಿಚಿತ ವ್ಯಕ್ತಿ ವೀಡಿಯೋ ಕರೆ ಮಾಡಿ ಸಂಪರ್ಕಿಸಿದ್ದ. ಇದನ್ನು ನಂಬಿದ ಪ್ರಸಾದ್‌ ಕುಮಾರ್‌ ಅವರು ತನ್ನ ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೆಯಲ್ಲಿರುವಾಗಲೇ ಪ್ರಸಾದ್‌ ಕುಮಾರ್‌ ಅವರ ಬ್ಯಾಂಕ್‌ ಖಾತೆಯಿಂದ 9,83,500ರೂ.ಗಳನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡಿದ್ದಾನೆ.

Advertisement

ಪ್ರಕರಣ -4
ಮಣಿಪಾಲ ಕೈಗಾರಿಕಾ ಪ್ರದೇಶದ ನಿವಾಸಿ ಮಯೂರ್‌ ಮನೋಹರ್‌ ಅವರು ಮನೆಯಲ್ಲಿ ರುವಾಗ ಮೊಬೈಲ್‌ಗೆ ಅಪರಿಚಿತ ವಾಟ್ಸಾಪ್‌ ಸಂದೇಶ ಕಳುಹಿಸಿದ್ದ. ಅದರಲ್ಲಿ ಶೇರ್‌ ಟ್ರೇಡಿಂಗ್‌ ಬಗ್ಗೆ ಮಾಹಿತಿ ಇತ್ತು. ಅನಂತರ ಈ ವಾಟ್ಸಪ್‌ ಗ್ರೂಪ್‌ ನಲ್ಲಿ ನೀತಾ ಧ್ರುವ ಮತ್ತೂಬ್ಬ ಅಡ್ಮಿನ್‌ ಸೇರಿದಂತೆ 12 ಜನರ ಗುಂಪು ಇದಾಗಿದ್ದು, ನೀತಾ ಎಂಬವರು ಅಪ್ಲಿಕೇಶನ್‌ವೊಂದನ್ನು ಪರಿಚಯಿಸಿ ದ್ದರು. ಅದನ್ನು ಮಯೂರ್‌ ಮನೋಹರ್‌ ಡೌನ್‌ಲೋಡ್‌ ಮಾಡಿದ್ದು, ಬಳಿಕ ಶೇರ್‌ ಟ್ರೇಡಿಂಗ್‌ ಆರಂಭಿಸಿದ್ದರು. ಆರಂಭದಲ್ಲಿ 5000ರೂ. ಹೂಡಿಕೆ ಮಾಡಿದ್ದು ಅಗ ಮೊಬೈಲ್‌ ಎಪ್ಲಿಕೇಶನ್‌ನಲ್ಲಿ 8,500ರೂ.ಲಾಭಾಂಶ ಬಂದಿತ್ತು. ಅನಂತರ 1054 ರೂ. ಬಂದಿತ್ತು. ಇದನ್ನು ನಂಬಿದ ಅವರು 9,80,000 ರೂ. ಹೂಡಿಕೆ ಮಾಡಿದ್ದರು. ಜ.13ರ ವರೆಗೆ ಅಕೌಂಟ್‌ನಲ್ಲಿ 18,040,26 ರೂ.ತೋರಿಸುತ್ತಿತ್ತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವರನ್ನು ಅಪ್ಲಿಕೇಶನ್‌ನಿಂದ ತೆಗೆದು ಹಾಕಲಾಗಿತ್ತು. ಆರೋಪಿಗಳು ಒಟ್ಟು 9.80 ಲಕ್ಷ ರೂ. ವಂಚನೆಯಾಗಿದೆ.

ಅನ್ಯರಾಜ್ಯದವರಿಂದ ಕನ್ನ
ವಂಚನೆ ಎಸಗುವವರು ಅನ್ಯರಾಜ್ಯದಲ್ಲಿದ್ದು ಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ ಖಾತೆಗಳನ್ನು ಮಾಡಿಕೊಂಡಿರುವುದು ತನಿಖೆ ಯಲ್ಲಿ ತಿಳಿದುಬಂದಿದೆ. ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಕೋಲ್ಕತಾ ಮೂಲದವರೇ ಈ ಕೃತ್ಯ ಎಸಗುತ್ತಿದ್ದರು. ಇದೀಗ ಕನ್ನಡ ಭಾಷೆಯಲ್ಲಿಯೂ ಸಕ್ರಿಯವಾಗಿದೆ. ಆರೋಪಿಗಳು ಇಂಗ್ಲಿಷ್‌ ಮಿಶ್ರಿತ ಕನ್ನಡ, ಹಿಂದಿ ಭಾಷೆ ಮಾತನಾಡುವವರನ್ನು ನಂಬುವ ಜನರು ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲೆಯ ಶೇ. 90ಕ್ಕೂ ಅಧಿಕ ಮಂದಿಗೆ ಇಂತಹ ಅನಾಮಧೇಯ ಲಿಂಕ್‌ಗಳು, ವಾಟ್ಸಾಪ್‌ ಸಂದೇ ಶಗಳು, ಕರೆಗಳು ಬಂದಿವೆ. ಈ ಪೈಕೆ ಕೆಲವರು ಇಂತಹ ಆಮಿಷಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಜಾಗರೂಕತೆ ವಹಿಸುವ ಜತೆಗೆ ಇದ್ದ ಹಣವನ್ನು ಕಾಪಿಟ್ಟುಕೊಳ್ಳಬೇಕು ಎನ್ನುತ್ತಾರೆ ಸೈಬರ್‌ ಪರಿಣತರು.

ಸ್ವಯಂ ಜಾಗೃತಿಯಾಗಲಿ
ಪ್ರಕರಣ ನಡೆದ 1 ಗಂಟೆಯೊಳಗೆ ಸಮೀಪದ ಠಾಣೆಗೆ ದೂರು ನೀಡಿದರೆ ಅವರನ್ನು ಪತ್ತೆಹಚ್ಚ ಬಹುದು. ಆನ್‌ಲೈನ್‌ ವಂಚನೆ ತಡೆ ಬಗ್ಗೆ ಪೊಲೀಸರು ವಿವಿಧೆಡೆ ಜಾಗೃತಿ ನಡೆಸುತ್ತಿದ್ದಾರೆ. ಎಲ್ಲ ಠಾಣೆಗಳಲ್ಲಿಯೂ ಇಬ್ಬರು ನುರಿತ ಸೈಬರ್‌ ತಂತ್ರಜ್ಞರಿದ್ದಾರೆ. ಬ್ಯಾಂಕ್‌ ದಾಖಲೆಗಳ ಕ್ರೊಡೀ ಕರಣ ಸಹಿತ ಕೆಲವು ತಾಂತ್ರಿಕ ಪ್ರಕ್ರಿಯೆ ಗಳಿಂದ ವಿಳಂಬವಾಗಿ ನೀಡುವ ದೂರುಗಳ ಪತ್ತೆ ಜಟಿಲವಾಗುತ್ತಿದೆ. ಆದಷ್ಟು ಶೀಘ್ರ ಪತ್ತೆಹಚ್ಚುವ ಸಂಬಂಧ ಪೊಲೀಸರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
-ಡಾ| ಕೆ.ಅರುಣ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next