Advertisement

ಪ್ರತಿಭಾನ್ವಿತರಿಗೆ ಆನ್‌ಲೈನ್‌ ಎನ್‌ಟಿಎಸ್‌ಇ ಕ್ಲಾಸ್‌

01:10 PM Dec 23, 2021 | Team Udayavani |

ಹುಬ್ಬಳ್ಳಿ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್‌ ಟಿಎಸ್‌ಇ) ಪೂರ್ವ ತಯಾರಿಗೆ ಶಿಕ್ಷಣ ಇಲಾಖೆ ವಿನೂತನ ಹೆಜ್ಜೆಯಿರಿಸಿದ್ದು, ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್‌ ಮೂಲಕ ತರಗತಿಗಳನ್ನು ಆರಂಭಿಸಿದೆ. ಶಿಕ್ಷಕರು ಹಾಗೂ ಇತರೆಸಂಪನ್ಮೂಲ ವ್ಯಕ್ತಿಯಿಂದ ತರಬೇತಿ ಕೊಡಿಸಲಾಗುತ್ತಿದೆ. ಖಾಸಗಿ ಸಂಸ್ಥೆಯೊಂದರ ನೆರವಿನಿಂದ ಆರಂಭಿಸಿರುವ ಈ ಪ್ರಯತ್ನ ರಾಜ್ಯದಲ್ಲಿ ಮೊದಲಾಗಿದೆ.

Advertisement

ಪ್ರತಿ ವರ್ಷ ಎನ್‌ಟಿಎಸ್‌ಇ ಪರೀಕ್ಷೆ ಆಕಾಂಕ್ಷಿಗಳಿಗೆ ಆಯಾ ಶಾಲೆಗಳಲ್ಲಿ ಶಾಲಾ ಅವಧಿ ನಂತರ ಒಂದುಗಂಟೆ ಅವಧಿ ಇದಕ್ಕಾಗಿ ಮೀಸಲಿಡಲಾಗುತ್ತಿತ್ತು. ಪರೀಕ್ಷೆ ಪೂರ್ವ ತಯಾರಿಗಾಗಿ ನಿಗದಿಪಡಿಸಿರುವ ಪಠ್ಯಕ್ರಮವನ್ನು ಆಯಾ ಶಾಲೆಗಳ ಶಿಕ್ಷಕರ ಮೂಲಕತರಬೇತಿ ನೀಡುವ ಕೆಲಸ ಆಗುತ್ತಿತ್ತು. ಆದರೆಇದರಿಂದ ನಿರೀಕ್ಷಿತ ಫಲಿತಾಂಶ ದೊರೆಯುತ್ತಿರಲಿಲ್ಲ. ಮೇಲಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತಹ ಪ್ರೋತ್ಸಾಹ ದೊರೆಯುತ್ತಿರಲಿಲ್ಲ. ಪಠ್ಯೇತರ ವಿಷಯಗಳ ಕುರಿತು ಪೂರಕ ಮಾಹಿತಿ ತರಬೇತಿಯಿಂದ ವಂಚಿತರಾಗುತ್ತಿದ್ದರು. ಇಂತಹ ಸಮಸ್ಯೆಗಳುಎದುರಾಗಬಾರದೆನ್ನುವ ಕಾರಣಕ್ಕೆ ಗ್ರಾಮೀಣ ಭಾಗದ ಕಟ್ಟಕಡೆಯ ಪ್ರತಿಭಾವಂತ ವಿದ್ಯಾರ್ಥಿಗೂ ಈ ಸೌಲಭ್ಯದೊರೆಯಬೇಕೆನ್ನುವ ಕಾರಣಕ್ಕೆ ಆನ್‌ಲೈನ್‌ ತರಬೇತಿ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಜಿಲ್ಲೆಯ ಪ್ರತಿಭಾವಂತವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಯತ್ನಕ್ಕೆಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ ಕೈ ಜೋಡಿಸಿದೆ.

ಬೋಧನೆ, ಪ್ರಶ್ನೋತ್ತರ: ಜಿಲ್ಲೆಯ 500 ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ 3:00 ಗಂಟೆಯಿಂದ 4ಗಂಟೆಯವರೆಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ.45 ನಿಮಿಷ ಬೋಧನೆ, 15 ನಿಮಿಷ ಪ್ರಶ್ನೋತ್ತರಕ್ಕೆಮೀಸಲಿಡಲಾಗುತ್ತಿದೆ. ಇಂದಿನ ಪಾಠವನ್ನು ಮಾರನೇ ದಿನ ಯೂಟೂಬ್‌ಗ ಅಪ್‌ಲೋಡ್‌ ಮಾಡಲಾಗುತ್ತಿದ್ದು,ಜಿಲ್ಲೆಯ ವಿದ್ಯಾರ್ಥಿಗಳ ಜತೆಗೆ ಇತರೆ ವಿದ್ಯಾರ್ಥಿಗಳಿಗೂಇದರ ಪ್ರಯೋಜನವಾಗುತ್ತಿದೆ. ಆನ್‌ಲೈನ್‌ ತರಗತಿನಂತರ ಶಾಲಾ ಶಿಕ್ಷಕರೊಂದಿಗೆ ಚರ್ಚೆ, ಸಮಸ್ಯೆಗಳಿಗೆಪರಿಹಾರ ಕಾರ್ಯ ಆಗುತ್ತಿದೆ. ಹಿಂದಿನ ದಿನದತರಗತಿಯ ಯೂಟೂಬ್‌ ಲಿಂಕ್‌ನ್ನು ಶಿಕ್ಷಕರಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಹಿಂದಿನ ತರಗತಿಯಲ್ಲಿ ಏನಾದರೂ ಗೊಂದಲಗಳಿದ್ದರೆ ತಮ್ಮ ಶಾಲೆ ಶಿಕ್ಷಕರು ಅಥವಾ ಯೂಟೂಬ್‌ನಲ್ಲಿ ತರಗತಿಯನ್ನು ಪುನಃ ಕೇಳುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಶಾಲೆಯಲ್ಲಿರುವ ಕಂಪ್ಯೂಟರ್‌ ಲ್ಯಾಬ್‌, ಸ್ಮಾರ್ಟ್‌ಕ್ಲಾಸ್‌ಗಳು ಈ ಕಾರ್ಯಕ್ಕೆ ಸದ್ಬಳಕೆಯಾಗುತ್ತಿದೆ.

ಪ್ರತ್ಯೇಕ ಸ್ಟುಡಿಯೋ: ಈ ತರಬೇತಿಗಾಗಿ ತಗಲುವ ವೆಚ್ಚವನ್ನು ವಿವೇಕಾನಂದ ಯುಥ್‌ ಮೂವ್‌ ಮೆಂಟ್‌ ಹಾಗೂ ಶಿಕ್ಷಣ ಇಲಾಖೆ ಭರಿಸಿದೆ. ಆನ್‌ಲೈನ್‌ ತರಬೇತಿಗಾಗಿ ಜೂಮ್‌ ಆ್ಯಪ್‌ ಪಡೆದಿದ್ದು,ಪ್ರತಿಯೊಂದು ಯೂಸರ್‌ ಐಡಿಗೂ 5000 ರೂ.ಖರ್ಚು ಮಾಡಲಾಗಿದೆ. ವಿಷಯಗಳ ಮೇಲೆಹಿಡಿತ ಹೊಂದಿರುವ ಶಿಕ್ಷಕರನ್ನು ಗುರುತಿಸಿದ್ದು,ನಿತ್ಯವೂ ಒಂದೊಂದು ವಿಷಯದ ಬಗ್ಗೆ ಸಂಪನ್ಮೂಲವ್ಯಕ್ತಿಗಳಾಗಿ ಬೋಧನೆ ಮಾಡುತ್ತಿದ್ದಾರೆ. ಉಳಿದ 15 ದಿನಗಳ ಕಾಲ ಸ್ವಾಮಿ ವಿವೇಕಾನಂದ ಯೂಥ್‌ಮೂವ್‌ಮೆಂಟ್‌ ವತಿಯಿಂದ ದೇಶದ ವಿವಿಧ ಭಾಗಗಳಲ್ಲಿರುವ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನಾ ಕಾರ್ಯ ನಡೆಯಲಿದೆ. ಈಗಾಗಲೇ ಪಠ್ಯಕ್ರಮವನ್ನುಹಂಚಿಕೊಂಡಿದ್ದು, ಆ ಪ್ರಕಾರ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಆನ್‌ಲೈನ್‌ ಬೋಧನೆಗಾಗಿ ಉಪನಿರ್ದೇಶಕರ ಕಚೇರಿಯಲ್ಲಿ ಪ್ರತ್ಯೇಕ ಸ್ಟುಡಿಯೋವ್ಯವಸ್ಥೆ ಮಾಡಿದ್ದು, ಶಿಕ್ಷಕರು ಇಲ್ಲಿಂದಲೇ ಪಾಠಗಳನ್ನು ಮಾಡುತ್ತಿದ್ದಾರೆ.

ಮೂರು ಪಟ್ಟು ಹೆಚ್ಚಾದ ನೋಂದಣಿ: ಪರೀಕ್ಷೆ

Advertisement

ಕುರಿತು ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ.

ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಹೀಗಾಗಿ ಈ ಬಾರಿ ಸರಕಾರಿ-3477, ಅನುದಾನಿತ-4236,ಅನುದಾನ ರಹಿತ ಶಾಲೆ-2404 ಸೇರಿ 10,177 ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಸಲಾಗಿದೆ.ಕಳೆದ ವರ್ಷ ಸರಕಾರಿ-1459, ಅನುದಾನಿತ-1601ಹಾಗೂ ಅನುದಾನ ರಹಿತ-907 ವಿದ್ಯಾರ್ಥಿಗಳುಸೇರಿ ಒಟ್ಟು 3976 ವಿದ್ಯಾರ್ಥಿಗಳು ಪರೀಕ್ಷೆಗೆಹಾಜರಾಗಿದ್ದರು. ಕಳೆದ ವರ್ಷ 15 ವಿದ್ಯಾರ್ಥಿಗಳುರಾಜ್ಯಮಟ್ಟದ ಅರ್ಹತೆ ಬರೆದು 3 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗೆ ಅರ್ಹತೆ ಪಡೆದಿದ್ದರು.ಈ ಬಾರಿ ಸಂಖ್ಯೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಬೇಕು ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳಗುರಿ. ಆನ್‌ಲೈನ್‌ ತರಗತಿಯಲ್ಲದೆ ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗೆ ಈ ಪರೀಕ್ಷಾ ದೃಷ್ಟಿಯಿಂದ ಸಂಪೂರ್ಣ ಶ್ರಮ ಹಾಕಬೇಕೆಂದು ನಿರ್ದೇಶನ ನೀಡಲಾಗಿದೆ.

ಎನ್‌ಟಿಎಸ್‌ಇ ಪರೀಕ್ಷೆಗೆ ಆನ್‌ಲೈನ್‌ ಪಾಠದಲ್ಲಿ ತೊಡಗಿರುವ ವಿದ್ಯಾರ್ಥಿಗಳು. ಎನ್‌ಟಿಎಸ್‌ಇ ಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಹಾಗೂ ದೊಡ್ಡ ಅವಕಾಶ ನೀಡುವಪ್ರಯತ್ನವಾಗಿದೆ. ಈ ಬಾರಿ ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌ ಅವರುಕೈಜೋಡಿಸಿದ್ದಾರೆ. ಹೀಗಾಗಿ ಆನ್‌ಲೈನ್‌ ಕ್ಲಾಸ್‌ಗಳಿಗೆ ಸಾಕಷ್ಟು ಅನುಕೂಲವಾಗಿದೆ. ಆನ್‌ಲೈನ್‌ ತರಗತಿನಂತರ ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಪ್ರತಿಯೊಂದು ಶಾಲೆಗೂ ಓರ್ವ ಶಿಕ್ಷಕರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಎಂ.ಎಲ್‌.ಹಂಚಾಟೆ, ಡಿಡಿಪಿಐ

ಕಳೆದ ಬಾರಿಗೆ ಹೋಲಿಸಿದರೆ ಪರೀಕ್ಷೆಗೆ ಮೂರುಪಟ್ಟು ವಿದ್ಯಾರ್ಥಿಗಳ ನೋಂದಣಿ ಹೆಚ್ಚಾಗಿದೆ.ಆನ್‌ಲೈನ್‌ ತರಬೇತಿ, ಶಾಲೆಯಲ್ಲಿ ಶಿಕ್ಷಕರಿಂದಬೋಧನೆ ಮೂಲಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ, ತಯಾರಿ,ಪಠ್ಯಕ್ರಮ ಸೇರಿದಂತೆ ಇತರೆ ಮಾಹಿತಿ ವಿದ್ಯಾರ್ಥಿಹಂತದಲ್ಲಿ ದೊರೆಯುವಂತಾಗಿದೆ. ರಾಷ್ಟ್ರಮಟ್ಟದಪರೀಕ್ಷೆ ಫಲಿತಾಂಶದ ರ್‍ಯಾಂಕ್‌ ಪಟ್ಟಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿರಬೇಕು ಎನ್ನುವ ಗುರಿಯಿದೆ. ಎಸ್‌.ಎಂ.ಹುಡೇದಮನಿ, ಉಪ ಯೋಜನಾ ಸಮನ್ವಯಾಧಿಕಾರಿ (ಆರ್‌ಎಂಎಸ್‌)

ಈ ಪರೀಕ್ಷೆ ಬಗ್ಗೆ ಸರಕಾರಿ ಶಾಲೆ ಹಾಗೂ ಗ್ರಾಮೀಣ ಭಾಗದಲ್ಲಿ ಜಾಗೃತಿಯಿರಲಿಲ್ಲ.ಶಿಕ್ಷಣ ಇಲಾಖೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ.ನಮ್ಮ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿಎನ್‌ಟಿಎಸ್‌ಇ ಪರೀಕ್ಷೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ವಿಶೇಷತರಬೇತಿಗೆ ಹೆಚ್ಚಿನ ಕಾಳಜಿ ತೋರಿದ್ದೇವೆ. ಕೆ.ಎಸ್‌.ಜಯಂತ, ಪ್ರಾದೇಶಿಕ ಮುಖ್ಯಸ್ಥರು, ಸ್ವಾಮಿ ವಿವೇಕಾನಂದ ಯೂಥ್‌ ಮೂವ್‌ಮೆಂಟ್‌

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next