Advertisement

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ

03:12 PM Apr 30, 2020 | Suhan S |

ಬಾಗಲಕೋಟೆ: ಕೋವಿಡ್‌-19ವೈರಸ್‌ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಕಾಲೇಜುಗಳಿಗೆ ರಜೆ ನೀಡಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡಬೇಕು ಎಂಬ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸೂಚನೆಯಂತೆ, ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಶ್ರೀ ಎಸ್‌.ಆರ್‌. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಪಾಠ ನಡೆಸಿದ್ದಾರೆ.

Advertisement

ಪ್ರಾಧ್ಯಾಪಕರ ಜತೆಗೆ ಅರೆಕಾಲಿಕ ಉಪನ್ಯಾಸಕರೂ ಕೈಜೋಡಿಸಿ, ವಿವಿಧ ವಿಷಯಗಳ ಮೇಲೆ ವಾಟ್ಸ್‌ ಆ್ಯಪ್‌, ಯುಟ್ಯೂಬ್‌ ಮೂಲಕ ಬಾಕಿ ಉಳಿದಿರುವ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಬಿ.ಕಾಂ. 6 ನೇ ಸೆಮಿಸ್ಟರ್‌ನ ಭಾರತೀಯ ಹಣಕಾಸು ಸೇವೆಗಳು ವಿಷಯವನ್ನು ಲಾರ್ಕ್‌ ವಿಡಿಯೋ ಕಾನ್ಫೆರನ್ಸಿಂಗ್‌ ಆಪ್‌ ಮೂಲಕ ಪಾಠ ಮಾಡಿ ಗೂಗಲ್‌ ಫಾರ್ಮ್ ಸಹಾಯದಿಂದ ಕಿರು ಪರೀಕ್ಷೆ ನಡೆಸಲಾಗಿದೆ ಎಂದರು.

ವಿದ್ಯಾರ್ಥಿಗಳು ಈ ಆನ್‌ಲೈನ್‌ ಪಾಠಗಳ ಪ್ರಯೋಜನ ಪಡೆದುಕೊಂಡು ಬರುವ ಪರೀಕ್ಷೆಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಪ್ರಾಚಾರ್ಯ ಡಾ| ಜಿ. ಬಿ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next