Advertisement

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

12:04 AM Sep 27, 2023 | Team Udayavani |

ಕುಂಬಳೆ: ಆನ್‌ಲೈನ್‌ ಉದ್ಯೋಗದ ಆಮಿಷವೊಡ್ಡಿ ಹಣ ಲಪಟಾಯಿ ಸುವ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಈ ದಂಧೆಗೆ ವಂಚಿತರಾಗಿ ಮಹಿಳೆಯರಿಬ್ಬರು ಒಟ್ಟು 4.70 ಲಕ್ಷ ರೂ. ಕಳೆದುಕೊಂಡಿದ್ದಾರೆ.

Advertisement

ಕುಂಬಳೆ ಬಳಿಯ ಕೊಡ್ಯಮ್ಮೆ ನಿವಾಸಿ ರುಕ್ಸಾನಾ (30) ಮತ್ತು ಖದೀಜತ್‌ ತಸ್ಮಿಯಾ(26) ವಂಚನೆಗೊಳಗಾದ ಮಹಿಳೆಯರು. ರುಕ್ಸಾನಾ 1.39 ಲಕ್ಷ ರೂ., ತಸ್ಮಿಯಾ 3.31 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೈಬರ್‌ ಸೆಲ್‌ಗೆ ದೂರು ನೀಡಿದ್ದು, ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next