Advertisement

Fraud Case ಆನ್‌ಲೈನ್‌ ಉದ್ಯೋಗ ಆಮಿಷ: ವಂಚನೆ

10:37 PM Sep 25, 2023 | Team Udayavani |

ಮಂಗಳೂರು: ಆನ್‌ಲೈನ್‌ ಮೂಲಕ ಉದ್ಯೋಗಾವಕಾಶದ ಆಮಿಷವೊಡ್ಡಿ ಹಣ ಪಡೆದು ವಂಚಿಸಲಾಗಿದೆೆ.

Advertisement

ದೂರುದಾರರು ಖಾಸಗಿ ಸಂಸ್ಥೆಯಲ್ಲಿ ಟ್ಯೂಟರ್‌ ಆಗಿದ್ದು, ಅವರ ಇಮೇಲ್‌ಐಡಿಗೆ ಉದ್ಯೋಗಾವಕಾಶದ ಮೆಸೇಜ್‌ ಬಂದಿತ್ತು. ಆನ್‌ಲೈನ್‌ ಕೆಮೆಸ್ಟ್ರಿ ಟ್ಯೂಟರ್‌ ಆಗಿ ಆಯ್ಕೆಯಾಗಿರುವುದಾಗಿ ತಿಳಿಸಲಾಗಿತ್ತು. ನೋಂದಣಿ ಮತ್ತು ವೆಚ್ಚದ ಬಗ್ಗೆ ಹಣ ಪಾವತಿಸುವಂತೆ ಸೂಚಿಸಲಾಗಿತ್ತು. ಅದನ್ನು ನಂಬಿದ ದೂರುದಾರರು ಹಂತ ಹಂತವಾಗಿ ಒಟ್ಟು 3,38,096 ರೂ. ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದಾರೆ.

ಆರೋಪಿಗಳು ನೀಡಿದ ಮೊಬೈಲ್‌ಗೆ ದೂರುದಾರರು ಕರೆ ಮಾಡಿದಾಗ ಆನ್‌ಲೈನ್‌ ಇಂಟರ್‌ವ್ಯೂ ಮಾಡುವುದಾಗಿ ನಂಬಿಸಿದ್ದಾರೆ. ಅವಕಾಶ ಸಿಗದಿದ್ದರೆ 45ರಿಂದ 90 ದಿನಗಳ ಒಳಗೆ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಆದರೆ ಹಣ ತಿರುಗಿಸದೆ ವಂಚಿಸಿದ್ದಾರೆ ಎಂದು ಸೈಬರ್‌ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next