ವಿಜಯಪುರ :ಆನ್ ಲೈನ್ ಹಣಕಾಸು ವಂಚನೆ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ನೈಜೀರಿಯನ್ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಅಪ್ರೊಚ್ಚಿ ಆಂಥೋಣಿ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದ ನಿವಾಸಿ ಕಿರಣ ದೇಸಾಯಿ ಎಂಬವರಿಗೆ ಆನಲೈನ್ ಮೂಲಕ 16 ಲಕ್ಷ ರೂ. ಹಣ ವಂಚನೆ ಮಾಡಿದ್ದ.
ವಂಚನೆ ಆರೋಪಿ ಜೊತೆ ತೈಲ ವ್ಯಾಪಾರದ ಕುರಿತು ವಿಜಯಪುರ ಜಿಲ್ಲೆಯ ಕಿರಣ ಕಲ್ಲಪ್ಪ ದೇಸಾಯಿ ಎಂಬವರು ಸಂಪರ್ಕ ಮಾಡಿದ್ದರು.
ನಂತರ ವಹಿವಾಟು ಮಾಡದೇ ಕಿರಣ ಅವರಿಂದ ಅಪ್ರೊಚ್ಚಿ 16 ಲಕ್ಷ ರೂ. ಹಣವನ್ನು ಆನ್ಲೈನ್ ಮೂಲಕ ವಂಚಿಸಿದ್ದ. ತನಗೆ ಆನ್ಲೈನ್ ಮೂಲಕ ವಂಚನೆ ಆಗಿರುವ ಬಗ್ಗೆ ಕಿರಣ ಪೊಲೀಸರ ಮೊರೆ ಹೊಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಸಿಇಎನ್ ಅಧಿಕಾರಿ ಸುರೇಶ ಬೆಂಡೆಗುಂಬಳ ನೇತೃತ್ವದ ಪೊಲೀಸ್ ತಂಡ ಗುಜರಾತ್ ಜಸಮನಗರದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯ ಬಳಿಕ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.