Advertisement

ಯುವತಿ ಖಾತೆಗೆ ಕನ್ನ: 1.87 ಲಕ್ಷ ರೂ. ವಂಚನೆ

07:29 PM Nov 18, 2021 | Team Udayavani |

ಪುಣೆ: ಆಮಿಷಕ್ಕೆ ಒಳಗಾದ ಯುವತಿ ಆನ್‌ಲೈನ್‌ ಶಾಪಿಂಗ್‌ನ ಸೂಚನೆಗಳನ್ನು ನಿರ್ಲಕ್ಷಿಸಿದ ಕಾರಣ ಸೈಬರ್‌ ಕಳ್ಳರು ಆಕೆಯ ಖಾತೆಯಿಂದ 1.87 ಲಕ್ಷ ರೂ. ಗಳ ವಹಿವಾಟು ನಡೆಸಿ ವಂಚಿಸಿದ ಘಟನೆ ಸಂಭವಿಸಿದೆ. ಎನ್‌ಐಬಿಎಂ ಪರಿಸರದ 23 ವರ್ಷದ ಯುವತಿ ಕೊಂಡ್ವಾ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

3 ತಿಂಗಳ ಹಿಂದೆ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಶೂ ಆರ್ಡರ್‌ ಮಾಡಿದ್ದರು. ಆದರೆ ಆಕೆಗೆ ದೃಢೀಕರಣ ಕೋಡ್‌ ಬರಲಿಲ್ಲ. ಇದರಿಂದ ಯುವತಿ ಗೂಗಲ್‌ನಲ್ಲಿ ಸರ್ಚ್‌ ಮಾಡಿ ವೆಬ್‌ಸೈಟ್‌ ಮೂಲಕ ಕಸ್ಟಮರ್‌ ಕೇರ್‌ ಸಂಖ್ಯೆ ಪಡೆದುಕೊಂಡಿದ್ದಾಳೆ.

ದುರದೃಷ್ಟವಶಾತ್‌ ಇದು ಸೈಬರ್‌ ಕಳ್ಳರು ಗೂಗಲ್‌ನಲ್ಲಿ ನೀಡಿದ ನಕಲಿ ಸಂಖ್ಯೆಯಾಗಿತ್ತು. ಹಾಗಾಗಿ ಆ ನಂಬರ್‌ ಗೆ ಕರೆ ಮಾಡಿ ಸಂಪರ್ಕಿಸಿದಾಗ ಆಕೆಗೆ ಒಟಿಪಿ ಹಂಚಿಕೊಳ್ಳಲು ಕೇಳಲಾಯಿತು. ಅದರಂತೆ ಆಕೆ ಒಟಿಪಿಯನ್ನು ಹಂಚಿಕೊಂಡಿದ್ದು, ಇದನ್ನು ಬಳಸಿಕೊಂಡು ಆಕೆಯ ಖಾತೆಯಿಂದ ವಿವಿಧ ವಹಿವಾಟು ನಡೆಸಿ ಸುಮಾರು 1,81,062 ರೂ. ವಂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next