Advertisement
ಅಪರಿಚಿತ ಲಿಂಕ್‌ಗಳನ್ನು ಕಳುಹಿಸಿ ಯಾಮಾರಿಸುವುದು, ಕೆವೈಸಿ ಅಪ್‌ಡೇಟ್ ನೆಪದಲ್ಲಿ ಕರೆ ಮಾಡಿ ಮಾಹಿತಿ ಸಂಗ್ರಹಿಸುವುದು, ಒಟಿಪಿ ಕಳುಹಿಸಿ ನಂಬರ್ ಪಡೆದು ಹಣ ದೋಚುವುದು, ಗಿಫ್ಟ್ ನೆಪದಲ್ಲಿ ವಂಚನೆ, ಆನ್‌ಲೈನ್ ಉದ್ಯೋಗದ ಆಮಿಷದ ಮೂಲಕ ಹಣ ವರ್ಗಾಯಿಸಿಕೊಳ್ಳುವುದು, ತಪ್ಪಾಗಿ ಹಣ ವರ್ಗಾಯಿಸಿ ಮತ್ತೆ ಮರುಪಾವತಿಸಲು ತಿಳಿಸುವುದು ಇತ್ಯಾದಿ ತಂತ್ರಗಾರಿಕೆಯನ್ನು ಆನ್‌ಲೈನ್ ವಂಚಕರು ಬಳಕೆ ಮಾಡುತ್ತಿರುವುದು ಈ ಪ್ರಕರಣಗಳಲ್ಲಿ ಗೋಚರಕ್ಕೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
Advertisement
ದೂರು ನೀಡಲು ಹಿಂಜರಿಕೆ ಬೇಡ
ವಿದ್ಯಾವಂತರು, ಶೇ.20-30ರಷ್ಟು ಹಿರಿಯ ನಾಗರಿಕರು ಸೈಬರ್ ವಂಚನೆಗೊಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಚ್ಚಿನವರು ತಮ್ಮ ಘನತೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕುತ್ತಾರೆ. ಯಾರೇ ಆದರೂ ಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರ ವಹಿಸುವುದು ಅತೀ ಅಗತ್ಯ. ಅಪರಿಚಿತರೊಂದಿಗೆ ಆನ್‌ಲೈನ್‌ನಲ್ಲಿ ಹಣಕಾಸಿನ ವ್ಯವಹಾರ ಮಾಡುವ ನಿಟ್ಟಿನಲ್ಲಿ ಹೆಚ್ಚು ಎಚ್ಚರ ವಹಿಸಬೇಕು.
ಎಚ್ಚರವಹಿಸಿದಷ್ಟು ಉತ್ತಮಅತೀ ಶೀಘ್ರ(ಗೋಲ್ಡನ್ ಹವರ್)ದಲ್ಲಿ ದೂರು ನೀಡಿದ ಸಂದರ್ಭದಲ್ಲಿ ಆ ಹಣವನ್ನು ತಡೆಹಿಡಿದು ಹಿಂತಿರುಗಿಸುವ ಕೆಲಸ ಮಾಡಲಾಗಿದೆ. ಅನಾಮಧೇಯ ಸಂದೇಶ, ಲಿಂಕ್‌ಗಳನ್ನು ಆದಷ್ಟು ನಿರ್ಲಕ್ಷಿಸಿದರೆ ಉತ್ತಮ. ಯಾವುದೇ ಆತಂಕಕ್ಕೊಳಗಾಗದೆ ದೂರು ನೀಡಬೇಕು.
-ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಲ್ಡರ್ ಹವರ್
ಶೇ.90ರಷ್ಟು ಪ್ರಕರಣಗಳಲ್ಲಿ ವಂಚನೆಗೊಳಗಾದ ಹಣ ಹಿಂದಕ್ಕೆ ಸಿಗುವುದೇ ಇಲ್ಲ. ಆನ್‌ಲೈನ್ ವಂಚನೆ ತಡೆಗಿರುವ ಏಕೈಕ ಮಾರ್ಗವೆಂದರೆ ಗೋಲ್ಡನ್
ಹವರ್‌ನ ಸದುಪಯೋಗ. ಇದಕ್ಕೆ ನಿರ್ದಿಷ್ಟ ಕಾಲಮಿತಿ ಎಂಬುವುದಿಲ್ಲ. ಘಟನೆ ನಡೆದ ತತ್‌ಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಸೈಬರ್ ಠಾಣೆಗೆ ದೂರು ನೀಡಿ ಆದ ಘಟನೆಯನ್ನು ವಿವರಿಸಿದರೆ ಅಕೌಂಟ್ ಟ್ರ್ಯಾಕ್ ಮಾಡಿ ತಡೆಹಿಡಿಯಲು ಸಾಧ್ಯವಿದೆ. ದೂರು ನೀಡಲು ವಿಳಂಬ ಮಾಡಿದಷ್ಟು ಪ್ರಕರಣ ಜಟಿಲವಾಗುತ್ತದೆ ಎಂಬುವುದು ಸೈಬರ್ ಪೊಲೀಸರ ಅಭಿಪ್ರಾಯ. ಇದನ್ನೂ ಓದಿ: ಅಸಹಾಯಕರಿಗೆ “ವಾತ್ಸಲ್ಯ’: ಡಾ| ಹೇಮಾವತಿ ಹೆಗ್ಗಡೆ