Advertisement

ನಕಲಿ ಸೈನಿಕರ ಆನ್‌ಲೈನ್‌ ವಂಚನಾ ಜಾಲ !

03:09 AM Jun 14, 2021 | Team Udayavani |

ಮಂಗಳೂರು : ಲಾಕ್‌ಡೌನ್‌ ಅವಧಿಯಲ್ಲಿ ಸೈಬರ್‌ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ಆನ್‌ಲೈನ್‌ನಲ್ಲಿ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

Advertisement

“ವರ್ಕ್‌ ಫ್ರಂ ಹೋಂ’ ನಡೆಸುತ್ತಿರುವ ಉದ್ಯೋಗಿಗಳನ್ನು ಕೂಡ ಸೈಬರ್‌ ವಂಚಕರು ಟಾರ್ಗೆಟ್‌ ಮಾಡಿರುವುದನ್ನು ಸೈಬರ್‌ ಪೊಲೀಸರು ಕಂಡುಕೊಂಡಿದ್ದಾರೆ. ಇದೇ ವೇಳೆ ನಕಲಿ ಸೈನಿಕರ ಜಾಲವೂ ಸಕ್ರಿಯವಾಗಿರುವುದು ಗೊತ್ತಾಗಿದೆ.

ಈ ಹಿಂದೆ ಸೈನಿಕರೆಂದು ಪರಿಚಯಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಣ ಪಡೆದು ವಂಚಿಸಿರುವ ಘಟನೆಗಳು ನಡೆದಿದ್ದವು. ಅನಂತರ ಆನ್‌ಲೈನ್‌ ಮಾರಾಟ ಜಾಲಗಳಲ್ಲಿ ಸೈನಿಕರೆಂದು ಪರಿ ಚಯಿಸಿಕೊಂಡು ವಸ್ತುಗಳ ಮಾರಾಟ ಮಾಡು ವುದಾಗಿ ಹೇಳಿ ಕ್ಯೂ ಆರ್‌ ಕೋಡ್‌ ಕಳುಹಿಸಿ ಹಣ ಪಡೆದು ಮೋಸ ಮಾಡಿರುವ ಪ್ರಕರಣವೂ ವರದಿಯಾಗಿತ್ತು. ಇದೀಗ ಲಾಕ್‌ಡೌನ್‌ ಅವಧಿ ಯಲ್ಲಿ ಇಂತಹುದೇ ನಕಲಿ ಸೈನಿಕರು ಕೆಲವರನ್ನು ವಂಚಿಸಿದ್ದಾರೆ. ಇವರಲ್ಲಿ ವರ್ಕ್‌ ಫ್ರಂ ಹೋಂ ಮಾಡುತ್ತಿರುವ ಐಟಿ ಉದ್ಯೋಗಿಗಳು ಸೇರಿದ್ದಾರೆ.

ರಿಮೋಟ್‌ ಆ್ಯಕ್ಸೆಸ್‌ ಆ್ಯಪ್‌ ಹಾವಳಿ
ಸಿಮ್‌ ವೆರಿಫಿಕೇಷನ್‌, ಡೆಬಿಟ್‌ ಕಾರ್ಡ್‌, ಬ್ಯಾಂಕ್‌ ಖಾತೆ ಮೊದಲಾದವುಗಳ ಕೆವೈಸಿ(ದಾಖಲೆ), ಗೂಗಲ್‌ ಪೇ, ಪೋನ್‌ಪೇ ಇತ್ಯಾದಿಗಳ ದೃಢೀಕರಣ, ಕೋವಿಡ್‌ ಲಸಿಕೆ ದೃಢೀಕರಣ ಮೊದಲಾದ ನೆಪಗಳಲ್ಲಿ ಲಿಂಕ್‌ ಕಳುಹಿಸಲಾಗುತ್ತದೆ. ಈ ಲಿಂಕ್‌ ಗಳಲ್ಲಿ ಎನಿ ಡೆಸ್ಕ್, ಟೀಮ್‌ವೀವರ್‌ ಮೊದಲಾದವುಗಳಿಗೆ ಹೋಲಿಕೆಯಾಗುವ ಆ್ಯಪ್‌ ಗಳಿರುತ್ತವೆ. ಈ ಆ್ಯಪ್‌ಗ್ಳು ಮೊಬೈಲ್‌ ಬ್ಯಾಂಕಿಂಗ್‌ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ವಂಚಕರಿಗೆ ನೀಡುತ್ತವೆ. ಅನೇಕ ಬಾರಿ ನೇರವಾಗಿ ಎದುರಿನ(ವಂಚನೆಗೊಳಗಾಗುವ) ವ್ಯಕ್ತಿ
ಯಿಂದ ಒಟಿಪಿಯನ್ನು ಪಡೆದುಕೊಳ್ಳದೆಯೂ ಇಂತಹ ಆ್ಯಪ್‌ಗ್ಳ ಮೂಲಕವೇ ಒಟಿಪಿ ಪಡೆದು ಮೊಬೈಲ್‌ಗ‌ಳಲ್ಲಿರುವ ಮಾಹಿತಿಯನ್ನು ಕದಿಯಬಹುದಾಗಿದೆ. ಇಂತಹ ಆ್ಯಪ್‌ಗ್ಳನ್ನು “ರಿಮೋಟ್‌ ಆ್ಯಕ್ಸೆಸ್‌ ಆ್ಯಪ್‌’ ಎನ್ನಲಾಗುತ್ತದೆ.

ವರ್ಕ್‌ ಫ್ರಂ ಹೋಮ್‌ನಲ್ಲಿರುವ ಅನೇಕ ಮಂದಿ ಉದ್ಯೋಗಿಗಳು ಕೂಡ ಇಂತಹ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ವಂಚಕರು ಅತೀ ಅಗತ್ಯವಾದ ಸೇವೆ, ದಾಖಲೆಗಳಿಗೆ ಸಂಬಂಧಿಸಿದಂತೆಯೇ ನಂಬಿಕೆ ಹುಟ್ಟಿಸಿ ವಂಚಿಸುತ್ತಿದ್ದಾರೆ. ಕೆಲವರು ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಸೈನಿಕರು ಎಂಬುದಾಗಿಯೂ ಪರಿಚಯಿಸಿ ವಂಚಿಸುತ್ತಿದ್ದಾರೆ ಎನ್ನುತ್ತಾರೆ ಮಂಗಳೂರಿನ ಸೈಬರ್‌ ಪೊಲೀಸರು.

Advertisement

ಲಿಂಕ್‌, ಕಸ್ಟಮರ್‌ಕೇರ್‌ ಸಂಖ್ಯೆ ದೃಢಪಡಿಸಿಕೊಳ್ಳಿ
ಬ್ಯಾಂಕ್‌ ಖಾತೆ, ಡೆಬಿಟ್‌ಕಾರ್ಡ್‌, ಮೊಬೈಲ್‌ ಸಿಮ್‌ ಅಥವಾ ಇತರ ಯಾವುದೇ ರೀತಿಯ ಸೇವೆಗಳಿಗೆ ಸಂಬಂಧಿಸಿ ವೆರಿಫಿಕೇಷನ್‌ಗೆ ಬರುವ ಯಾವುದೇ ಲಿಂಕ್‌ ಅನ್ನು ಒತ್ತಬಾರದು. ಸಾಧ್ಯವಾದರೆ ಆ ಲಿಂಕ್‌ ಅನ್ನು ಪ್ರತ್ಯೇಕವಾಗಿ ಟೈಪ್‌ ಮಾಡಿ ತೆರೆಯುವ ಪ್ರಯತ್ನ ಮಾಡಬಹುದು. ಅದನ್ನು ದೃಢೀಕರಿಸಿಕೊಳ್ಳದೆ ಯಾವುದೇ ಮಾಹಿತಿ ನೀಡಬಾರದು. ಅಧಿಕೃತ ವೆಬ್‌ಸೈಟ್‌ನಲ್ಲಿರುವ ಕಸ್ಟಮರ್‌ ಕೇರ್‌ ನಂಬರನ್ನು ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಿರುವುದು ಉತ್ತಮ.
– ಡಾ| ಅನಂತ ಪ್ರಭು ಜಿ. ಮಂಗಳೂರು, ಸೈಬರ್‌ ತಂತ್ರಜ್ಞಾನದ ಪರಿಣತರು

ಒಟಿಪಿ ಪಡೆದು ಮೋಸ
ಪಾರ್ಟ್‌ ಟೈಮ್‌ ಆಗಿ ನೃತ್ಯ ಕಲಿಸುತ್ತಿರುವ ಮಂಗಳೂರಿನ ಐಟಿ ಉದ್ಯೋಗಿಯೋರ್ವರು ನಕಲಿ ಸೈನಿಕನ ವಂಚನೆಗೆ ಸಿಲುಕಿದ್ದಾರೆ. ಸಿಮ್‌ ವೆರಿಫಿಕೇಷನ್‌ ನೆಪದಲ್ಲಿ ಅಪರಿಚಿತರು ವ್ಯಕ್ತಿಗಳಿಗೆ ವಂಚಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಸಿಮ್‌ ವೆರಿಫಿಕೇಷನ್‌ ಬಗ್ಗೆ ದಾಖಲಾತಿ ಪರಿಶೀಲನೆ ಬಾಕಿ ಇದ್ದು ದಾಖಲಾತಿಗಳನ್ನು ಸಲ್ಲಿಸದಿದ್ದರೆ ಸೇವೆ ಸ್ಥಗಿತಗೊಳ್ಳುತ್ತದೆ. ಈ ಬಗ್ಗೆ 8388804277ಗೆ ಕರೆ ಮಾಡಬೇಕು’ ಎಂದು ತಿಳಿಸುತ್ತಾನೆ. ಇದನ್ನು ನಂಬಿದ ವ್ಯಕ್ತಿಯು ಆ ಸಂಖ್ಯೆಗೆ ಕರೆ ಮಾಡಿ ವಂಚನೆಗೆ ಒಳಗಾಗುತ್ತಾನೆ.

ವ್ಯಕ್ತಿಯೋರ್ವರಿಗೆ ಕರೆ ಮಾಡಿ ಕ್ರೆಡಿಟ್‌ ಕಾರ್ಡ್‌ನ ಮಿತಿ ಹೆಚ್ಚು ಮಾಡುವುದಾಗಿ ಹೇಳಿ ಒಟಿಪಿ ಪಡೆದು ವಂಚನೆ ಮಾಡಿರುವ ಪ್ರಕರಣವೂ ನಡೆದಿದೆ. ಕಸ್ಟಮರ್‌ ಕೇರ್‌ನಿಂದ ಕರೆ ಮಾಡುವುದಾಗಿ ಹೇಳಿ ಒಟಿಪಿ ಮತ್ತು ಕ್ರೆಡಿಟ್‌ ಕಾರ್ಡ್‌ ಮಾಹಿತಿ ಪಡೆದು 29,000 ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಅಲ್ಲದೆ ಬ್ಯಾಂಕ್‌ವೊಂದರ ಆ್ಯಪ್‌ನಂತಹ ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಅದರ ಮೂಲಕ 5.72 ಲ.ರೂ.ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ ಘಟನೆಯೂ ನಡೆದಿದೆ. ಹೀಗೆ ಲಾಕ್‌ಡೌನ್‌ ಅವಧಿಯಲ್ಲಿ ಲಕ್ಷಾಂತರ ರೂ.ಗಳನ್ನು ಲಪಟಾಯಿಸಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next