Advertisement
ರಾಜರಾಜೇಶ್ವರಿನಗರದ ಚರಘು ಅಲಿಯಾಸ್ ನವನೀತ್(27) ಮತ್ತು ಗಾಯತ್ರಿ ನಗರದ ಸಾಯಿಕಿರಣ್ (25) ಬಂಧಿತರು. ಆರೋಪಿಗಳಿಂದ11 ಮೊಬೈಲ್, 2 ಸಿಪಿಯು, 1ಲ್ಯಾಪ್‌ಟಾಪ್ ಹಾಗೂ 43ಸಾವಿರ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪಿಯುಸಿ ಓದಿದ್ದು, ಅಕ್ರಮವಾಗಿ ಹಣ ಸಂಪಾದಿಸುವ ಕುರಿತು ಆನ್‌ಲೈನ್ ಹಾಗೂ ಬೇರೆ ಬೇರೆ ಮಾರ್ಗಗಳ ಮೂಲಕ ಶೋಧಿಸಿದ್ದರು. ಈ ವೇಳೆ ವಂಚನೆ ಮಾಡಿದರೆ ಶಿಕ್ಷೆಯೂ ಕಡಿಮೆ, ಯಾರಿಗೂ ಗೊತ್ತಾಗುವುದಿಲ್ಲ ಎಂದು ವಂಚನೆಗಿಳಿದಿದ್ದಾರೆ.
Related Articles
Advertisement
ಹೇಗೆ ವಂಚನೆ? :
ನಿರುದ್ಯೋಗಿಗಳ ವಿವರಗಳನ್ನು ಜಾಬ್‌ವೆಬ್‌ಸೈಟ್‌ಗಳಲ್ಲಿ ಪಡೆದುಕೊಂಡು ಯುವತಿಯರ ಮೂಲಕ ಕರೆ ಮಾಡಿಸುತ್ತಿದ್ದರು. ಬಳಿಕ ಅಪ್ಲಿಕೇಷನ್ ಶುಲ್ಕ ಎಂದು 250 ರೂ. ನಂತರ ಮೊದಲ ಸುತ್ತಿನ ಸಂದರ್ಶನ ಮತ್ತು ಪರೀಕ್ಷೆಗೆ ಆಯ್ಕೆಯಾಗಿದ್ದಿರಾ ಎಂದು 2,500 ರೂ.
ಪಡೆಯುತ್ತಿದ್ದರು. ಆನ್‌ಲೈನ್ ಅಥವಾ ನೇರ ಸಂದರ್ಶನ ನಡೆಸಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದಿರಾ ಎಂದು 7,500 ರೂ. ಎಂದು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಬಳಿಕ ಕೆಲಸ ಕೊಡದೆ ವಂಚಿಸುತ್ತಿದ್ದರು ಎಂಬುದುಗೊತ್ತಾಗಿದೆ. ಇದೇ ವೇಳೆ ಎಚ್.ಆರ್. ಕೆಲಸಕ್ಕೆ ಸೇರಿಸಿಕೊಂಡಿದ್ದ ಯುವತಿಯರಿಗೆ ವಂಚನೆ ಬಗ್ಗೆಗೊತ್ತಾಗುವ ಮೊದಲೇ ಎರಡು ತಿಂಗಳು ಕೆಲಸಮಾಡಿಸಿಕೊಂಡು ಏಕಾಏಕಿ ಸಂಬಳವನ್ನು ಕೊಡದೆ ವಿನಾಕಾರಣಗಳನ್ನು ನೀಡಿ ತೆಗೆದು ಹಾಕುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಕಾವೇರಿ ಗಲಾಟೆಯಲ್ಲಿ ಆರೋಪಿಗಳು ಭಾಗಿ :
ಬೆಂಗಳೂರಿನಲ್ಲಿ 2017ರಲ್ಲಿ ನಡೆದ ಕಾವೇರಿ ಗಲಾಟೆಯಲ್ಲಿ ಆರೋಪಿಗಳು ಪ್ರಮುಖ ಪಾತ್ರವಹಿಸಿ ದ್ದರು. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬಸ್‌ಗಳು ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚುವುದು ಹಾಗೂ ಗಲಾಟೆಗೆ ಪ್ರಚೋದನೆ ನೀಡುವ ಕೆಲಸಮಾಡುತ್ತಿದ್ದರು ಎಂದು ಬಂಧಿಸಲಾಗಿತ್ತು. ನಂತರಜಾಮೀನು ಪಡೆದು ಬಿಡುಗಡೆಯಾಗಿ ವಂಚನೆ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಹೇಳಿದರು.