Advertisement

Online Fraud; ವಿದೇಶಿ ವೈದ್ಯನ ಗಿಫ್ಟ್ ಆಸೆಗೆ 19.43 ಲಕ್ಷ ಕಳೆದುಕೊಂಡ ನರ್ಸ್!

10:43 PM Jan 25, 2024 | Team Udayavani |

ಚಿಕ್ಕಬಳ್ಳಾಪುರ: ವಿದೇಶಿ ವೈದ್ಯನ ಮಗಳ ಹುಟ್ಟುಹಬ್ಬದ ಗಿಫ್ಟ್ ಆಸೆಗೆ ಬಿದ್ದು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್ ಬರೋಬ್ಬರಿ 19.43 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

Advertisement

ಹಣ ಕಳೆದುಕೊಂಡ ನರ್ಸ್ ಮಮತ ರಮೇಶ್‌ರೆಡ್ಡಿ (33) ಚಿಂತಾಮಣಿ ತಾಲೂಕಿನ ಕೋಟಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯ ನಿವಾಸಿ.

ಮಮತ ಫೇಸ್‌ಬುಕ್ ಖಾತೆಗೆ ಬಂದ ಅಪರಿಚಿತ ವ್ಯಕ್ತಿಯ  ರಿಕ್ವೆಸ್ಟ್ ಸ್ಪೀಕರಿಸಿದ ಬಳಿಕ ಆಕೆ ಅತನೊಂದಿಗೆ ವಾಟ್ಸ್ಆಪ್ ಚಾಟಿಂಗ್ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದು ತಾನು ಪ್ರಾನ್ಸ್ ನಲ್ಲಿ ವೈದ್ಯನಾಗಿದ್ದು ನನ್ನ ಮಗಳ ಹುಟ್ಟುಹಬ್ಬಕ್ಕೆ ಎಲ್ಲರಿಗೂ ಗಿಫ್ಟ್ ಕಳುಹಿಸುತ್ತಿದ್ದೇನೆ. ನಿಮಗೂ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ನರ್ಸ್ ಮಮತ ಕಡೆಯಿಂದ ವಿವಿಧ ಶುಲ್ಕಗಳ ಹೆಸರಲ್ಲಿ ಅನ್‌ಲೈನ್ ಕಳ್ಳರು ಬರೋಬರಿ 19.43,500 ರು,ಗಳನ್ನು ಪಡೆದು ವಂಚಿಸಿರುವುದಾಗಿ ಸೈಬರ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next