Advertisement

ಶೀಘ್ರ ಆನ್‌ಲೈನ್‌ ಫಿಶ್‌ ಮಾರ್ಕೆಟ್‌

08:42 AM Jul 30, 2019 | keerthan |

ಮಣಿಪಾಲ: ಆನ್‌ಲೈನ್‌ ಫ‌ುಡ್‌ ಡೆಲಿವರಿಗಳು ಇತ್ತೀಚೆಗೆ ಪರಿಚಯವಾದವುಗಳು, ನಮಗೆ ಹೊಸತು. ಪ್ಲಿಪ್‌ಕಾರ್ಟ್‌, ಅಮೆಜಾನ್‌, ಸ್ನ್ಯಾಪ್‌ಡೀಲ್‌ ಮೊದಲಾದ ಆನ್‌ಲೈನ್‌ ಮಾರ್ಕೆಟಿಂಗ್‌ ಏಜೆನ್ಸಿಗಳು ಚಿರ ಪರಿಚಿತ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ವ್ಯವಸ್ಥೆ ಮುಂಬರುವ ದಿನಗಳಲ್ಲಿ ಮೀನುಗಳನ್ನು ಆನ್‌ಲೈನ್‌ನಲ್ಲಿರುವ ದರ ನೋಡಿ ಕೊಂಡುಕೊಳ್ಳಬಹುದಾಗಿದೆ.

Advertisement

ಏನಿದು ಯೋಜನೆ?
ಅತೀ ಹೆಚ್ಚು ಮತ್ಸ ಸಂಪತ್ತನ್ನು ಭಾರತ ಹೊಂದಿದೆ. ಈಗ ಮೀನು ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಆರೋಗ್ಯಕರ ವ್ಯವಸ್ಥೆಯನ್ನು ಹೊಂದುವ ಹಿತ ದೃಷ್ಟಿಯಿಂದ ಈ ವ್ಯವಸ್ಥೆಯ ಮೊರೆ ಹೋಗಲಾಗಿದೆ. ಸೆಂಟ್ರಲ್‌ ಮರೀನ್‌ ಫಿಶರೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌  ಈಗಾಗಲೇ ಇದರ ಪ್ರಾಥ ಮಿಕ ಹಂತದ ಅನುಷ್ಠಾನ ಕ್ರಮಗಳನ್ನು ಕೈಗೊಂಡಿದ್ದು, ಕೇರಳದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ.

ಸುಮಾರು  1,500 ಮಾರ್ಕೆಟ್‌
ಈ ವ್ಯವಸ್ಥೆಯಲ್ಲಿ ದರ ನಿಗದಿ ಮತ್ತು ಅಕೌಟಿಂಗ್‌ ಎಲ್ಲವೂ ಇ- ವ್ಯವಸ್ಥೆಯ ಮೂಲಕ ನಡೆಯಲಿದೆ. ಈಗಾಗಲೇ ಸುಮಾರು 1,500 ಮೀನು ಮಾರುಕಟ್ಟೆಯನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೀನು ಮಾರುಕಟ್ಟೆ, ಲ್ಯಾಂಡಿಂಗ್‌ ಸೆಂಟರ್‌, ಸಗಟು ಮಾರುಕಟ್ಟೆ, ಚಿಲ್ಲರೆ ಮಾರು ಕಟ್ಟೆಗಳೂ ಸೇರಿವೆ. ಇಲ್ಲಿ 150 ವಿಧದ ಮೀನುಗಳ ಆನ್‌ಲೈನ್‌ ಮಾರಾಟ ವ್ಯವಸ್ಥೆಯನ್ನು ಇದು ನೋಡಿಕೊಳ್ಳಲಿದೆ.

ಮೊದಲ ಹಂತಕ್ಕೆ 5 ರಾಜ್ಯಗಳು
ಆನ್‌ಲೈನ್‌ ಮಾರುಕಟ್ಟೆಗಾಗಿ ಈಗಾಗಲೇ 7 ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ. ಕೇರಳದಲ್ಲೇ 50 ಮಾರ್ಕೆಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಗೆ ನ್ಯಾಶನಲ್‌ ಫಿಶರೀಸ್‌ ಡೆವಲಪ್‌ಮೆಂಟ್‌ ಬೋರ್ಡ್‌ ಹೈದರಾಬಾದ್‌ ಹಣಕಾಸಿನ ನೆರವನ್ನು ನೀಡಲಿದೆ.

ಈಗಿರುವ ಬುಕಿಂಗ್‌ ವ್ಯವಸ್ಥೆ
ಕೇರಳದ “ವ್ಯಾಪಾರ ವಹಿವಾಟಿನ ರಾಜಧಾನಿ’ ಎಂದು ಕರೆಯಲಾಗುವ ಎರ್ನಾಕುಳ ಜಿಲ್ಲೆಯಲ್ಲಿ ಆನ್‌ಲೈನ್‌ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೆಲವು ವರ್ಷ ಹಿಂದೆಯೇ ಚಾಲ್ತಿಯಲ್ಲಿತ್ತು. ಬಳಿಕ ಇತರ ಕಡೆಗಳಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆನ್‌ಲೈನ್‌, ಫೋನ್‌ ಕರೆ, ವಾಟ್ಸಾಪ್‌, ಮೆಸೇಜ್‌ ಮೂಲಕ ವ್ಯವಸ್ಥೆ ಇದೆ.

Advertisement

ಏನು ಲಾಭ
ಇದರ ಪ್ರಾಯೋಗಿಕ ಅನುಷ್ಠಾನ ಕೇರಳದಲ್ಲಿ ನಡೆಯಲಿದೆ. ಮೀನುಗಾರರು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳ ಮೂಲಕ ದೊರಕುವಾಗ ಬೆಲೆ ಏರಿಳಿತಗಳು ಆಗುತ್ತಿತ್ತು. ಇನ್ನು ಆನ್‌ಲೈನ್‌ ಮೂಲಕ ವ್ಯಾಪಾರ ನಡೆಯಲಿದೆ. ಇದರಿಂದ ಏಕ ದರ ನಿಗದಿಯಾಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಮೀನುಗಾರರು ಮತ್ತು ಗ್ರಾಹಕರಿಗೆ ಇದರ ನೇರ ಪ್ರಯೋಜನ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next