Advertisement

ಇಂಡಿಪೆಂಡೆಂಟ್ ಇರಾಕಿ ಫಿಲ್ಮ್ ಫೆಸ್ಟಿವಲ್ ಆನ್ ಲೈನ್ ಪ್ರದರ್ಶನ ಇಂದಿನಿಂದ ಪ್ರಾರಂಭ

08:30 PM Aug 21, 2020 | Hari Prasad |

ಬಗ್ದಾದ್: ಕೋವಿಡ್ 19 ಸೋಂಕಿನ ಹಾವಳಿಯ ಕಾರಣದಿಂದ ವಿಶ್ವಾದ್ಯಂತ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ.

Advertisement

ಕೆಲವೊಂದು ಅತ್ಯಾವಶ್ಯಕ ಸೇವೆಗಳು ಮತ್ತು ಚಟುವಟಿಕೆಗಳು ನಿರ್ಬಂಧಿತ ರೀತಿಯಲ್ಲಿ ಪ್ರಾರಂಭಗೊಂಡಿದೆ.

ಆದರೆ ಚಿತ್ರ ಪ್ರದರ್ಶನ ಮತ್ತು ಚಿತ್ರೀಕರಣ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹಾಗೆಯೇ ವಿಶ್ವದ ನಾನಾ ಕಡೆಗಳಲ್ಲಿ ನಡೆಯುವ ಚಿತ್ರೋತ್ಸವಗಳಿಗೂ ಸದ್ಯಕ್ಕೆ ಬ್ರೇಕ್ ಬಿದ್ದಿದೆ.

ಇದೀಗ ಇಂಡಿಪೆಂಡೆಂಟ್ ಇರಾಕಿ ಫಿಲ್ಮ ಫೆಸ್ಟಿವಲ್ (IIFF)ನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಇರಾಕಿ ಚಲನಚಿತ್ರಗಳ ಆನ್ ಲೈನ್ ಪ್ರದರ್ಶನ ನಡೆಯಲಿದೆ.

ಈ ಆನ್ ಲೈನ್ ಚಿತ್ರೋತ್ಸವದಲ್ಲಿ ಒಟ್ಟು 13 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಚಿತ್ರಪ್ರೇಮಿಗಳು IIFFನ ವೆಬ್ ಸೈಟ್ ನಲ್ಲೇ ಈ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿರುತ್ತದೆ.

Advertisement

ಆಗಸ್ಟ್ 21ರಿಂದ 27ರವರೆಗೆ ಈ ಆನ್ ಲೈನ್ ಚಿತ್ರೋತ್ಸವ ಪ್ರದರ್ಶನಗಳು ನಡೆಯಲಿವೆ.

ಮೊಹಮ್ಮದ್ ಅಲ್-ದರಾದ್ಜಿ ಅವರ ಇರಾಕ್: ವಾರ್, ಲವ್, ಗಾಡ್ ಆ್ಯಂಡ್ ಮ್ಯಾಡ್ ನೆಸ್ ಮೊದಲ ಸಿನೆಮಾ ಆಗಿ ಪ್ರದರ್ಶನಗೊಳ್ಳಲಿದೆ. 2008ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರವು ಇದೇ ನಿರ್ದೇಶಕರ 2005ರ ಚಿತ್ರ ಅಹ್ಲಾಂ ನ್ನು ಬಗ್ದಾದ್ ನಲ್ಲಿ ಚಿತ್ರೀಕರಿಸುತ್ತಿದ್ದಾಗ ಅವರಿಗೆದುರಾದ ಕಹಿ ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next